ಯಾವುದೇ ಬಿರಿಯಾನಿಗೆ ರೈಸ್ ಹೀಗೆ ಮಾಡಿ ಆಮೇಲೆ ಜಾದೂ ನೋಡಿ, ಅಂಟಲ್ಲ ಗಟ್ಟಿಯಾಗಲ್ಲ, ಗಂಟಲಿಗೆ ಸಿಗಲ್ಲ.

53

ನಮಸ್ಕಾರ ಸ್ನೇಹಿತರೇ ಬಿರಿಯಾನಿಗೆ ರೈಸ್ ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು: ಬಾಸ್ಮತಿ ಅಕ್ಕಿ- 2 ಕಪ್,ಕೇಸರಿ- ಚಿಟಿಕೆ, ಏಲಕ್ಕಿ- ೩, ಸೋಂಪು- ¼ ಚಮಚ, ಜೀರಿಗೆ- ¼ ಚಮಚ, ಲವಂಗ- 3 ರಿಂದ 4 ಪಲಾವ್, ಎಲೆ- 1,ಚಕ್ಕೆ- 2, ಅರಿಶಿನ- ಚಿಟಿಕೆ, ಉಪ್ಪು- ¼ ಚಮಚ, ತುಪ್ಪ- ½ ಚಮಚ

ಬಿರಿಯಾನಿಗೆ ರೈಸ್ ಮಾಡುವ ವಿಧಾನ: ಯಾವುದೇ ರೀತಿಯ ಬಿರಿಯಾನಿ ಮಾಡಲು ಅನ್ನ ಉದುರಾಗಿದ್ದರೆ ಬಿರಿಯಾನಿ ನೋಡೋದಕ್ಕೂ ಚೆಂದ ತಿನ್ನುವುದಕ್ಕೂ ಕೂಡ ಚೆಂದ. ಹಾಗಾದರೆ ಈ ರೀತಿಯ ಬಿರಿಯಾನಿ ರೈಸ್ ಹೀಗೆ ಮಾಡುವುದು ಇಲ್ಲಿ ನೋಡೋಣ ಬನ್ನಿ. ಮೊದಲು ಬಾಸ್ಮತಿ ಅಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಅದನ್ನು ನೀರಿನಲ್ಲಿ 15 ರಿಂದ 30 ನಿಮಿಷಗಳ ಒಳಗೆ ನೆನಸಿಡಬೇಕು. ಹೀಗೆ ನೆನೆಸಿದರೆ ಅಕ್ಕಿ ಮೃದುವಾಗುತ್ತದೆ ಮತ್ತು ಬೇಗ ಬೇಯುತ್ತದೆ. ತದನಂತರ ಬಿರಿಯಾನಿ ಮಾಡುವುದಕ್ಕೆ ಕುಕ್ಕರನ್ನು ಬಳಸಬಾರದು ಬಳಿಕ ಕಡಾಯಿಯನ್ನು ಬಳಸಬೇಕು.

ಈಗ ಒಂದು ಕಡಾಯಿಯನ್ನು ಒಲೆಯ ಮೇಲೆ ಇಟ್ಟುಕೊಂಡು ಅದಕ್ಕೆ ನೀರನ್ನು ಹಾಕಿ ಚಿಟಿಕೆ ಕೇಸರಿ, ಏಲಕ್ಕಿ, ಸೋಂಪು, ಜೀರಿಗೆ, ಲವಂಗ, ಪಲಾವ್ ಎಲೆ, ಚಕ್ಕೆ, ಅರಿಶಿಣ, ಉಪ್ಪನ್ನು ಹಾಕಿ ಅದರ ಮೇಲೆ ಮುಚ್ಚಳವನ್ನು ಮುಚ್ಚಬೇಕು. ಮುಚ್ಚುಳವನ್ನು ಮುಚ್ಚಿದರೆ ಆ ನೀರು ಬೇಗ ಬೇಯುತ್ತದೆ. ಹೀಗೆ ನೀರಿಗೆ ಎಲ್ಲವನ್ನೂ ಹಾಕಿದರೆ ಅನ್ನ ಆದಮೇಲೆ ಅದರ ವಾಸನೆ ಗಮಗಮ ಎಂದು ಇರುತ್ತದೆ. ಈ ಮಸಾಲೆ ನೀರು ಬೆಂದ ಮೇಲೆ ಇದಕ್ಕೆ ತುಪ್ಪ ಹಾಕಿಕೊಳ್ಳಬೇಕು. ತುಪ್ಪ ಹಾಕಿದರೆ ಅಕ್ಕಿ ಬಿಡಿಬಿಡಿ ಆಗಿರುತ್ತದೆ. ನಂತರ ಬಾಸ್ಮತಿ ಅಕ್ಕಿಯನ್ನು ಚೂರು ನೀರಿಲ್ಲದೆ ಸೋಸಿಕೊಂಡು ನೀರಿಗೆ ಹಾಕಿಕೊಳ್ಳಬೇಕು. ಇದು ಶೇ.75 ರಷ್ಟು ಬೇಯಬೇಕು ಅಷ್ಟೆ. ತದನಂತರ ಈ ನೀರನ್ನು ಚೆನ್ನಾಗಿ ಬಸಿದು ಅದರ ಮೇಲೆ ಸ್ವಲ್ಪ ತಣ್ಣೀರನ್ನು ಚುಮುಕಿಸಿದರೆ ಅನ್ನವು ಬಿಡಿಬಿಡಿಯಾಗಿರುತ್ತದೆ. ಈಗ 1 ನಿಮಿಷ ಆದ ಮೇಲೆ ಒಂದು ಅಗಲವಾದ ಪಾತ್ರೆಗೆ ಆಗಿರುವ ಅನ್ನವನ್ನು ಹಾಕಿಕೊಳ್ಳಬೇಕು. ಈಗ ನೀವು ಈ ಅನ್ನವನ್ನು ಯಾವುದೇ ಬಿರಿಯಾನಿ ಮಾಡುವುದಕ್ಕೆ ಸಹ ಬಳಸಬಹುದು.