ಮೇಘ ಶೆಟ್ಟಿ ಮನೆಗೆ ಬಂದರು ಹೊಸ ಅತಿಥಿ ಗಳು, ಎಲ್ಲಿ ನೋಡಿದರೂ ಇವರದ್ದೇ ಸದ್ದು ಯಾಕೆ ಗೊತ್ತೇ??

24

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕಿರುತೆರೆ ವಾಹಿನಿಯ ಧಾರಾವಾಹಿಯ ನಟ-ನಟಿಯರ ಜನಪ್ರಿಯತೆ ಕರ್ನಾಟಕ ರಾಜ್ಯದಾದ್ಯಂತ ದ್ವಿಗುಣಗೊಂಡಿದೆ. ಇದಕ್ಕೆ ಮುಖ್ಯವಾದ ಕಾರಣವೆಂದರೆ ಚಿತ್ರೀಕರಣ ಸ್ಥಗಿತಗೊಂಡಿರುವುದು ಹಾಗೂ ಚಿತ್ರಗಳ ಬಿಡುಗಡೆ ರದ್ದಾಗಿರುವುದು. ಎಲ್ಲದಕ್ಕಿಂತ ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆ ವಾಹಿನಿಗಳಲ್ಲಿ ಗುಣಮಟ್ಟದ ಧಾರವಾಹಿಗಳು ಬಿಡುಗಡೆಯಾಗುತ್ತಿರುವುದು.

ಇದರಲ್ಲಿ ಮುಖ್ಯವಾದ ಹೆಸರು ಕೇಳಿ ಬರುವುದೆಂದರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲ್ಲಿ ದಾರವಾಹಿ. ಜೊತೆ ಜೊತೆಯಲ್ಲಿ ದಾರವಾಹಿ ಬಿಡುಗಡೆಯಾದ ದಿನದಿಂದಲೂ ಇಂದಿನವರೆಗೂ ಕೂಡ ಅದೇ ಮಟ್ಟದ ಜನರ ಮೆಚ್ಚುಗೆಯನ್ನು ಪಡೆದುಕೊಂಡು ಬರುತ್ತಿದೆ. ಇನ್ನು ಅನುಸಿರಿಮನೆ ಪಾತ್ರದಲ್ಲಿ ಮೇಘ ಶೆಟ್ಟಿ ಅವರು ಸಾಕಷ್ಟು ಪ್ರೇಕ್ಷಕರ ನೆಚ್ಚಿನ ನಟಿಯಾಗಿ ಮೂಡಿ ಬಂದಿದ್ದಾರೆ. ಮೇಘ ಶೆಟ್ಟಿ ಅವರ ಪಾತ್ರವನ್ನು ಕಿರುತೆರೆಯ ವೀಕ್ಷಕರು ಮನಸಾರೆ ಇಷ್ಟಪಟ್ಟಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮೇಘ ಶೆಟ್ಟಿ ಅವರು ಜೊತೆ ಜೊತೆಯಲಿ ಧಾರಾವಾಹಿಯನ್ನು ಬಿಟ್ಟುಬಿಟ್ಟಿದ್ದಾರೆ ಎಂಬ ಮಾತನ್ನು ಕೇಳಿ ಬಂದಿತ್ತು.

ಇದಕ್ಕೆ ಸ್ವತಹ ಮೇಘ ಶೆಟ್ಟಿಯವರೇ ಪ್ರತಿ ಸ್ಪಂದಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಗೊಂದಲದ ವಿಷಯಗಳನ್ನು ನೀವು ಕಿವಿಗೆ ಹಾಕಿಕೊಳ್ಳಬೇಡಿ ನಾನು ಧಾರವಾಹಿ ಮುಗಿಯುವ ತನಕ ಪಾತ್ರವನ್ನು ನಿರ್ವಹಿಸಲಿದ್ದೇನೆ ಎಂಬ ಸ್ಪಷ್ಟನೆ ನೀಡಿದ್ದರು. ಇತ್ತೀಚಿಗೆ ಅಭಿಮಾನಿಗಳಿಗೆ ಮೇಘ ಶೆಟ್ಟಿ ಅವರು ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ಹೌದು ಸ್ನೇಹಿತರೆ ಮೇಘ ಶೆಟ್ಟಿ ಅವರ ಮನೆಗೆ ಬಿಎಂಡಬ್ಲ್ಯೂ ಹಾಗೂ ಎಂಜಿ ಹೆಕ್ಟರ್ ಎಂಬ ಎರಡು ಐಶಾರಾಮಿ ಕಾರುಗಳು ಬಂದಿವೆ. ತಮ್ಮ ಪರಿಶ್ರಮದ ಮೂಲಕ ಈ ಕಾರುಗಳನ್ನು ಖರೀದಿಸಿರುವ ಮೇಘ ಶೆಟ್ಟಿ ಅವರು ಅಭಿಮಾನಿಗಳಿಗೆ ಸಂತಸ ಸುದ್ದಿಯನ್ನು ನೀಡಿದ್ದಾರೆ. ಇನ್ನು ಇತ್ತೀಚಿಗಷ್ಟೇ ಕನ್ನಡ ಚಿತ್ರರಂಗಕ್ಕೆ ಕೂಡ ಪಾದಾರ್ಪಣೆ ಮಾಡಿರುವ ಮೇಘ ಶೆಟ್ಟಿ ಅವರು ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬಹುನಿರೀಕ್ಷಿತ ಚಿತ್ರ ತ್ರಿಬಲ್ ರೈಡಿಂಗ್ ನಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನೀವು ಕೂಡ ಮೇಘ ಶೆಟ್ಟಿ ಅವರ ಅಭಿಮಾನಿ ಆಗಿದ್ದರೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ