ದಿವ್ಯ ಸುರೇಶ ಮನೆಯಲ್ಲಿ ನಡೆದುಹೋಯಿತೆ ನಿಶ್ಚಿತಾರ್ಥ.?? ಎಲ್ಲರಿಗೂ ಶಾಕ್, ಅಷ್ಟಕ್ಕೂ ನಡೆದ್ದದೇನು ಗೊತ್ತೇ??

27

ನಮಸ್ಕಾರ ಸ್ನೇಹಿತರೇ ಈ ಬಾರಿಯ ಬಿಗ್ ಬಾಸ್ ಗೆದ್ದವರಿಗಿಂತ ಹೆಚ್ಚಾಗಿ ಪ್ರೀತಿಯಲ್ಲಿ ಬಿದ್ದವರು ಹೆಸರೇ ಜಾಸ್ತಿಯಾಗಿ ಓಡಾಡಿಕೊಂಡಿತ್ತು. ಮೊದಲಿಗೆ ಅರವಿಂದ್ ಹಾಗೂ ದಿವ್ಯ ರವರ ಪ್ರೇಮಕಹಾನಿ ಎಲ್ಲರ ಮನಗೆದ್ದಿದ್ದರೆ, ಇನ್ನೊಂದು ಕಡೆ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ರವರ ಪ್ರೇಮ್ ಕಹಾನಿ ಎಲ್ಲೆಡೆ ಪ್ರಸಿದ್ಧವಾಗಿದೆ.

ಹೌದು ಸ್ನೇಹಿತರೆ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ರವರು ಪರಿಚಯವಿಲ್ಲದೆ ಬಿಗ್ಬಾಸ್ ಮನೆಗೆ ಕಾಲಿಟ್ಟು ನಂತರದ ದಿನಗಳಲ್ಲಿ ಸ್ನೇಹದಿಂದ ಡೈರೆಕ್ಟ್ ಪ್ರೀತಿಗೆ ಕನ್ವರ್ಟ್ ಆಗಿ ಸಾಕಷ್ಟು ಸುದ್ದಿಯಲ್ಲಿದ್ದರು. ನಂತರದ ದಿನಗಳಲ್ಲಿ ಇವರಿಬ್ಬರು ಪರಸ್ಪರ ಭಿನ್ನಾಭಿಪ್ರಾಯಗಳಿಂದಾಗಿ ದೂರಾದರು ಕೂಡಾ ಬಿಗ್ಬಾಸ್ ಮುಗಿಯ ಸಂದರ್ಭದಲ್ಲಿ ಮತ್ತೊಮ್ಮೆ ಸ್ನೇಹಿತರಾಗಿದ್ದರು. ಮಂಜು ಪಾವಗಡ ರವರು ಬಿಗ್ ಬಾಸ್ ಗೆದ್ದಾಗ ಕೂಡ ದಿವ್ಯ ಸುರೇಶ್ ರವರು ಕುಣಿದು ಕುಪ್ಪಳಿಸಿದರು. ಮಾತ್ರವಲ್ಲದೆ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಕೂಡ ಇವರಿಬ್ಬರು ಸಾಕಷ್ಟು ಸುದ್ದಿಯಲ್ಲಿದ್ದರು ಮತ್ತು ಒಟ್ಟಿಗೆ ತಿರುಗಾಡುತ್ತಿದ್ದರು.

ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ರವರು ಹೆಜ್ಜೆಹಾಕಿದ್ದ ರೊಮ್ಯಾಂಟಿಕ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಇನ್ನು ಈಗ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ರವರ ಎಂಗೇಜ್ಮೆಂಟ್ ಸದ್ದಿಲ್ಲದೆ ಮನೆಯಲ್ಲಿ ಸರಳವಾಗಿ ನಡೆದಿದೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಈ ಗಾಳಿಸುದ್ದಿ ಎಷ್ಟರ ಮಟ್ಟಿಗೆ ಸತ್ಯ ಎಷ್ಟರಮಟ್ಟಿಗೆ ಸುಳ್ಳು ಎಂಬುದನ್ನು ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ರವರು ಹೇಳಬೇಕಾಗಿದೆ.