ಬರಲಿದೆ ಶಿವ ರಾಜ್ ಕುಮಾರ್ ರವರ 124 ನೇ ಚಿತ್ರ, ಈ ಚಿತ್ರಲ್ಲಿ ಸುದೀಪ್ ರವರಿಗೇನು ಕೆಲಸ ಗೊತ್ತಾ??
ನಮಸ್ಕಾರ ಸ್ನೇಹಿತರೇ ’ದಿ ವಿಲನ್’ ನಲಿ ಜೊತೆಯಾಗಿ ಕಾಣಿಸಿಕೊಂಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಕ್ಕತ್ ಯಶಸ್ಸು ಕಂಡಿದ್ರು. ಈ ಜೋಡಿ ಮತ್ತೆ ಜೊತೆಯಾಗಿ ಚಿತ್ರದಲ್ಲಿ ನಟಿಸಬೇಕು ಎಂಬುದು ಸಿನಿ ಪ್ರಿಯರ ಆಶಯವಾಗಿತ್ತು. ಈ ಆಸೆ ಈಡೇರುವ ಮಾತು ಚಂದನವನದಲ್ಲಿ ಕೇಳಿ ಬರುತ್ತಿದೆ.
ನಟ ಶಿವರಾಜ್ ಕುಮಾರ್ ನಟನೆಯ 124 ನೇ ಚಿತ್ರ ’ ನೀ ಸಿಗೋವರೆಗೂ’ ಈ ಚಿತ್ರದ ಮೂಹೂರ್ತ ಸಂದರ್ಭ ಎಲ್ಲಿಲ್ಲದ ಸಂಭ್ರಮದಿಂದ ಕೂಡಿತ್ತು. ಏಕೆಂದರೆ ಶಿವಣ್ಣ ಅವರ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳೋಕೆ ಬಂದಿದ್ದು ಕಿಚ್ಚ ಸುದೀಪ್. ಹೌದು ಸ್ನೇಹಿತರೆ ಈ ಅಭಿನಯ ಮಹಾರಥಿಗಳ ಸ್ನೇಹಸಮ್ಮಿಲನಕ್ಕೆ ಸಾಕ್ಷಿಯಾಗಿದ್ದು ’ನೀ ಸಿಗೋವರೆಗೂ ಚಿತ್ರದ ಮುಹೂರ್ತ ಸಮಾರಂಭ. ಇನ್ನು ಈ ಚಿತ್ರದಲ್ಲಿ ಈ ಇಬ್ಬರೂ ಅದ್ಭುತ ನಟರು ಒಂದಾಗಿ ನಟಿಸುತ್ತಿದ್ದಾರೆ ಎಂದು ಕೊಳ್ಳಬೇಡಿ. ಆದರೆ ಈ ಜೋಡಿ ಮುಂದಿನ ದಿನಗಳಲ್ಲಿ ಒಂದಾಗಿ ಕೆಲಸ ಮಾಡುತ್ತಾರೆ ಎನ್ನಬಹುದು. ಸುದೀಪ್ ಬಳಿ ಒಳ್ಳೆಯ ಕಥೆಗಳಿವೆ ಅವರು ಉತ್ತಮ ನಿರ್ದೇಶಕ ಕೂಡ. ಹಾಗಾಗಿ ಅವರು ನಿರ್ದೇಶನ ಮಾಆಡುವ ಚಿತ್ರದಲಿ ತಾನು ನಟಿಸುತ್ತೇನೆ ಎಂದಿದ್ದಾರೆ ಶಿವಣ್ಣ.
ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್ ತನ್ನ ನಿರ್ದೇಶನದ ಶಾಂತಿ ನಿವಾಸ ಚಿತ್ರದ ಹಾಡೊಂದರಲ್ಲಿ ಶಿವಣ್ಣ ನಟಿಸಿದ್ದರು. ಇಂಥ ಮೆರು ನಟರೇ ತನಗೆ ನಿರ್ದೇಶನ ಮಾಡಿ ಎಂದಾಗ ಖುಷಿಯಾಗುತ್ತದೆ. ಮುಂದೆ ಸಂದರ್ಭ ಬಂದರೆ ಮಾಡುತ್ತೇನೆ ಎಂದಿದ್ದಾರೆ. ’ನೀ ಸಿಗೋವರೆಗೂ’ ಚಿತ್ರ ಲವ್ ಹಾಗೂ ಎಮೋಶನ್ಸ್ ಒಳಗೊಂಡ ಚಿತ್ರವಾಗಿದ್ದು ಶಿವಣ್ಣ ಅವರು ಇದರಲ್ಲಿ ನಟಿಸುತ್ತಿರುವುದು ವಿಶೇಷ. ಜೊತೆಗೆ ಒಬ್ಬ ಸ್ಟಾರ್ ನಟ ಇನ್ನೊಬ್ಬ ಅದ್ಭುತ ನಟನೆಯ ಜ್ತೆಗೆ ನಿರ್ದೇಶನವನ್ನೂ ಪ್ರೋತ್ಸಾಹಿಸುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ಒಂದು ಒಳ್ಳೆಯ ಬೆಳವಣಿಗೆ ಎನ್ನಬಹುದು.