ನಮ್ಮನೆ ಯುವರಾಣಿ ಮೀರಾ ರವರ ನಿಜ ಜೀವನದ ಕ್ರಶ್ ಯಾರು ಗೊತ್ತೇ?? ಯಾರು ಊಹಿಸದ ವ್ಯಕ್ತಿ.

225

ನಮಸ್ಕಾರ ಸ್ನೇಹಿತರೇ ಭಾಷೆ ಯಾವುದೇ ಇರಲಿ ಅದರ ಮೆರಗು ಹೆಚ್ಚೋದು ಆ ಭಾಷೆಯನ್ನು ಸರಿಯಾಗಿ ಬಳಸಿದಾಗಲೇ, ಸ್ಪಷ್ಟವಾಗಿ ಮತನಾಡಿದಾಗಲೆ. ಅಂಥ ಒಂದು ಅದ್ಭುತ ಕನ್ನಡ ಭಾಷೆಯೂ ಕೂಡ ಕೆಲವರ ಮಾತಿನ ಮೂಲಕ ತನ್ನ ಅಂದವನ್ನು ಹೆಚ್ಚಿಸಿಕೊಳ್ಳುತ್ತದೆ. ಕನ್ನಡ ತಾರೆಯರಲ್ಲಿ ಹೀಗೆ ಅತ್ಯುತ್ತಮವಾಗಿ ಮಾತನಾಡುವವರಿದ್ದಾರೆ. ಈ ಹಿಂದೆ ಅಪರ್ಣ ಅವರು ತಮ್ಮ ಸ್ಪಷ್ಟ ಕನ್ನಡದಿಂದ ಗುರುತಿಸಿಕೊಂಡಿದ್ದಾರೆ ಇದೀಗ ಅವರಂತೆ ನಮ್ಮನೆ ಯುವರಾಣಿ ಧಾರಾವಾಹಿಯ ಮೀರಾ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ.

ನಮ್ಮನೆ ಯುವರಾಣಿಯಲ್ಲಿ ಮೀರಾ ಪಾತ್ರಕ್ಕೆ ಜೀವ ತುಂಬಿರುವ ಅಂಕಿತಾ ಅಮರ್. ಶಿಕ್ಷಣದಲ್ಲಿಯೂ ಕೂಡ ಮುಂದೆ ಇದ್ದಾರೆ. ಮೈಸೂರಿನ ಜೆಎಸ್‌ಎಸ್ ಕಾಲೇಜಿನಲ್ಲಿ ಮೆಡಿಕಲ್ ಬಯೋ ಕೆಮಿಸ್ಟ್ರಿಯಲ್ಲಿ ಎಂಎಸ್‌ಸಿ ಮಾಡಿದ್ದಾರೆ ಅಂಕಿತ. ಅಧ್ಯಯನದ ವೇಳೆ ಸುಧಾಮೂರ್ತಿಯವಫಿಂದ ಗೋಲ್ಡ್ ಮೆಡಲ್ ಪಡೆದ ಬುದ್ಧಿವಂತೆ ಕೂಡ. ಇನ್ನು ಅಂಕಿತಾ ಅವರ ನಟನೆಯ ಬಗ್ಗೆ ಇನ್ನೊಂದು ಮಾತಿಲ್ಲ ಬಿಡಿ. ಟಿವಿ ನೋಡೇ ನಟನೆಯನ್ನು ಕಲಿತ ಅಂಕಿತಾ ಅವರ ತಂದೆ ತಾಯಿ ಕೂಡ ರಂಗಭೂಮಿ ಕಲಾವಿರೆ ಎನ್ನುವುದು ವಿಶೇಷ. ಅಂಕಿತಾ ಅವರು ನಟನೆಯ ಜೊತೆ ಜೊತೆಯಲ್ಲಿ ನೃತ್ಯ, ಸಂಗೀತವನ್ನೂ ಕೂಡ ಮೈಗೂಡಿಸಿಕೊಂಡಿದ್ದಾರೆ. ಸಾಕಷ್ಟು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ ಕೂಡ. ಇನ್ನು ಅಂಕಿತಾ ಬಗ್ಗೆ ಅಷ್ಟಾಗಿ ಯಾರಿಗೂ ತಿಳಿದಿಲ್ಲ.

ಆದರೆ ಅನುಬಂಧ ಅವಾರ್ಡ್ ನಲ್ಲಿ ತನ್ನ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿರುವ ಈಕೆ ನಮ್ಮನೆ ಯುವರಾಣಿ ತಂಡದ ಹಾಗೆ ಸಾಕೇತ್ ಅನಿಕೇತ್ ತರಹದ ಸ್ನೇಹಿತರು ನನಗೆ ನಿಜಜೀವನದಲ್ಲಿ ಇಲ್ಲ ಎಂದಿದ್ದಾರೆ. ಕನ್ನಡದಲ್ಲಿ ಹರಳುಹುರಿದ ಹಾಗೆ ಪಟಪಟ ಅಂತ ಮಾತಾಡೋ ಈ ಪಟಾಕಿ ಅಂಕಿತಾ ನಟನೆ ಬಗ್ಗೆ ನಿಮಗೆ ಗೊತ್ತೇ ಇದೆ. ಇದೀಗ ನಿರೂಪಕಿಯಾಗಿಯೂ ಕೂಡ ಅಂಕಿತಾ ಜನರ ಮೆಚ್ಚುಗೆ ಗಳಿಸುತ್ತಿದ್ದಾರೆ. ಕಲರ್ಸ್ ನಲ್ಲಿ ಪ್ರಸಾರವಾಗುತ್ತಿರುವ ಎಸ್ ಪಿ ಬಿಯವರ ನೆನಪಿನಲ್ಲಿ ನಡೆಸುತ್ತಿರುವ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ನಿಮ್ಮ ನೆಚ್ಚಿನ ಮೀರಾ. ಇನ್ನು ಅಂಕಿತಾ ಅಮರ್ ಗೆ ಕಾಲೇಜ್ ಲೆಕ್ಚರ್ ಒಬ್ಬರು ಮೊದಲ ಕ್ರಶ್ ಅಂತೆ. ಮೊಗ್ಗಿನ ಮನಸ್ಸು ಚಿತ್ರ ಬಿಡುಗಡೆಯಾದ ಸಮಯದಲ್ಲಿ ನಾವೆಲ್ಲರೂ ರಾಧಿಕಾ ಪಂಡಿತ್ ಎಂದೇ ಭವಿಸಿಕೊಂಡು ಇಬ್ಬ ಲೆಕ್ಚರರ್ ಅವರ ಕ್ಲಾಸ್ ನಲ್ಲಿ ಅವರನ್ನು ನೋಡುವುದಕ್ಕಾಗಿಯೇ ಕೂರುತ್ತಿದ್ದೆವು ಎಂದಿದ್ದಾರೆ ಅಂಕಿತಾ. ಅದೇನೇ ಇರಲಿ ಇದೀಗ ಈ ಮೀರಾಳನ್ನು ಅದೆಷ್ಟು ಮಾಧವರು ಕಾದು ಕುಳಿತಿದ್ದಾರೋ ಗೊತ್ತಿಲ್ಲ!