ವಿಶ್ವದ ಮೂಲೆ ಮೂಲೆಯಿಂದ ಭಕ್ತರು ಬರುವ ತಾಯಿ ಸಿಗಂದೂರು ಚೌಡೇಶ್ವರಿ ತಾಯಿಯ ದೇವಸ್ಥಾನ ನಿರ್ಮಾಣ ಹೇಗಾಯಿತು ಗೊತ್ತೇ??

61

ನಮಸ್ಕಾರ ಸ್ನೇಹಿತರೇ, ಕರ್ನಾಕಟದಲ್ಲಿನ ಜನರಿಗೆ ಕಷ್ಟ ಎಂದು ಬಂದಾಗ ನೆನಪಾಗುವ ಪುಣ್ಯ ಕ್ಷೇತ್ರಗಳಲ್ಲಿ ತಾಯಿ ಸಿಗಂದೂರು ಚೌಡೇಶ್ವರಿಯ ದೇವಸ್ಥಾನ ಕೂಡ ಒಂದು. ಇಲ್ಲಿಗೆ ಕಷ್ಟ ಎಂದು ಹೋದರೆ ತಾಯಿ ಚೌಡೇಶ್ವರಿಯು ಎಲ್ಲರ ಕಷ್ಟಗಳನ್ನು ನಿವಾರಣೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದೇ ಕಾರಣಕ್ಕಾಗಿ ಕೇವಲ ಕರ್ನಾಟಕದಿಂದ ಅಷ್ಟೇ ಅಲ್ಲದೇ ದೇಶದ ಮೂಲೆ ಮೂಲೆಯಿಂದ ಭಕ್ತರು ತಾಯಿಯ ದರ್ಶನ ಮಾಡಲು ಬರುತ್ತಾರೆ. ಇಂತಹ ಮಹಿಮೆ ಹೊಂದಿರುವ ದೇವಸ್ಥಾನದ ಕುರಿತು ಇಂದು ನಾವು ದೇವಸ್ಥಾನ ಕಟ್ಟಿದ ಕಥೆ ಹೇಳುತ್ತೇವೆ ನೋಡಿ.

ಸ್ನೇಹಿತರೇ 25 ವರ್ಷಗಳ ಹಿಂದೆ ತಾಯಿ ಶರಾವತಿ ನದಿಯ ತೀರದಲ್ಲಿ ಅರಣ್ಯದ ಗುಹೆಯೊಂದರಲ್ಲಿ ಕೇವಲ ಕೆಲವು ಜನರು ಮಾತ್ರ ಪೂಜೆ ಮಾಡುತ್ತಿದ್ದ ಸಿಗಂದೂರು ಚೌಡೇಶ್ವರಿ ತಾಯಿಯ ದೇವಸ್ಥಾನದ ನಿರ್ಮಾಣದ ಕಥೆಯ ಕುರಿತು ನಾವು ಮಾತನಾಡುವುದಾದರೆ, ಶೇಷಪ್ಪ ಎಂಬುವವರು ಇಲ್ಲಿನ ಕಾಡಿನಲ್ಲಿ ಕಳೆದು ಹೋದಾಗ ವಾಪಸು ಬರಲು ತಿಳಿಯದೆ ಮರದ ಕೆಳಗಡೆ ವಿಶ್ರಮಿಸುತ್ತಾ ಇರುವಾಗ ನಿದ್ದೆ ಬಂದು ಬಿಡುತ್ತದೆ. ಆಗ ಕನಸಿನಲ್ಲಿ ತಾಯಿ ಚೌಡೇಶ್ವರಿ ತಾಯಿ ಬಂದು ನದಿಯಲ್ಲಿರುವ ವಿಗ್ರಹದ ಕುರಿತು ತಿಳಿಸಿ ದೇವಸ್ಥಾನ ನಿರ್ಮಾಣ ಮಾಡುವಂತೆ ಹೇಳುತ್ತಾರೆ.

ಕನಸನ್ನು ನಿರ್ಲಕ್ಷ ಮಾಡದೆ ಶೇಷಪ್ಪನವರು ಕೂಡಲೇ ನದಿಯಲ್ಲಿ ದೇವಿಯ ವಿಗ್ರಹವನ್ನು ಹುಡುಕಿಸಿ ದೇವಾಲಯವನ್ನು ನಿರ್ಮಾಣ ಮಾಡಿ ತಾಯಿ ಚೌಡೇಶ್ವರಿ ದೇವಿಯನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಅಂದಿನಿಂದ ಸಿಗಂದೂರು ಚೌಡೇಶ್ವರಿ ತಾಯಿಯ ದೇವಸ್ಥಾನ ಹೆಚ್ಚಿನ ಪ್ರಸಿದ್ದಿ ಪಡೆಯಲು ಆರಂಭವಾಗುತ್ತದೆ. ಇನ್ನು ಅಂದಿನಿಂದ ಇಂದಿನವರೆಗೂ ಈ ಪ್ರದೇಶದಲ್ಲಿ ಯಾವುದೇ ಕಳ್ಳತನಗಳು ಕೂಡ ನಡೆದಿಲ್ಲ, ಇಲ್ಲಿನ ಸುತ್ತಮುತ್ತಲಿನ ಜನರು ಜಮೀನು ಮತ್ತು ಹೊಲಗಳಿಗೆ ರಕ್ಷಣೆಯನ್ನು ಪಡೆಯಲು ಚೌಡೇಶ್ವರಿ ತಾಯಿಯ ಕಾವಲಿದೆ ಎಂದು ಬೋರ್ಡ್ ಗಳನ್ನು ಹಾಕಿರುತ್ತಾರೆ, ಅದೇ ಸಮಯದಲ್ಲಿ ಇಲ್ಲಿ ಭಕ್ತರ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತದೆ ಎಂಬ ಬಲವಾದ ನಂಬಿಕೆ ಇದ್ದು ಅದು ನಿಜ ಕೂಡ ಆಗಿದೆ.