ಸೋನು ಸೂದ್ ರನ್ನ ಭೇಟಿಯಾಗಲು 1200 ಕಿಲೋಮೀಟರ್ ಸೈಕಲ್ ತುಳಿದು ಬಂದ ಅಭಿಮಾನಿ!
ಸ್ನೇಹಿತರೆ, ಬಾಲಿವುಡ್ ನಟ ಸೋನು ಸೂದ್ ಕೊರೋನಾ ಸಂಕಷ್ಟದ ಸಮಯದಲ್ಲಿ ಸಾಕಷ್ಟು ಜನರಿಗೆ ಸಹಾಯ ಹಸ್ತವನ್ನು ಚಾಚುವ ಮೂಲಕ ದೇಶಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ ಅಂತನೇ ಹೇಳಬಹುದು. ಅಷ್ಟೇ ಅಲ್ಲದೆ ಇವರ ಸಾಮಾಜಿಕ ಕಾರ್ಯಕ್ರಮಗಳನ್ನು ಮೆಚ್ಚಿ ಹಲವಾರು ಸಂಸ್ಥೆಗಳು ಹಾಗೂ ಟ್ರಸ್ಟ್ ಗಳು ಗೌರವ ಸಲ್ಲಿಸಿದೆ. ಇನ್ನೂ ಇಂತಹ ಸಂಕಷ್ಟ ಸಮಯದಲ್ಲಿ ತಮ್ಮ ಕಾರ್ ಹಾಗೂ ಮನೆಯನ್ನು ಮಾರಿ ಬಡವರ ನೆರವಿಗೆ ನಿಂತಿರುವ ಸೋನು ಸೂದ್ ಅವರನ್ನು ನೋಡಲು ಅವರ ಮನೆಗೆ ಅಭಿಮಾನಿಗಳು ಪ್ರತಿನಿತ್ಯ ಹೋಗುತ್ತಾರೆ.
ಇನ್ನು ಇದೇ ರೀತಿ ರಿಯಲ್ ಹೀರೋ ಸೋನು ಸೂದ್ ಅವರನ್ನು ಭೇಟಿಯಾಗುವ ಸಲುವಾಗಿ ಅಭಿಮಾನಿಯೊಬ್ಬರು ಬರೋಬರಿ 1200 ಕಿಲೋಮೀಟರ್ ದೂರದಿಂದ ಸೈಕಲ್ ತುಳಿದುಕೊಂಡು ಬಂದಿದ್ದಾರೆ. ಹೌದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋಗಳಲ್ಲಿ ದಬಾಂಗ್ ನಟ ದುಬೈನ ತಮ್ಮ ನಿವಾಸದ ಎದುರು ಆಗಮಿಸಿದ ಅಭಿಮಾನಿಯನ್ನು ಪ್ರೀತಿಯಿಂದ ಬರ ಮಾಡಿಕೊಳ್ಳುತ್ತಿರುವುದನ್ನ ಕಾಣಬಹುದಾಗಿದೆ.
ಹೌದು ಅಷ್ಟೇ ಅಲ್ಲದೆ ಅಭಿಮಾನಿಯ ಬಳಿ ಮಾತನಾಡಿದ ಸೋನು ಸೂದ್ ಬರಿಗಾಲಿನಲ್ಲಿ ಬರುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನೆ ಮಾಡಿದ್ದಾರೆ, ಮಾತ್ರವಲ್ಲದೆ ಈ ರೀತಿ ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ಮನವಿ ಕೂಡ ಮಾಡಿದ್ದಾರೆ. ಇದಾದ ಬಳಿಕ ಅಭಿಮಾನಿಯೂ ಸೂದ್ ಗೆ ಹೂವಿನ ಮಾಲೆಯನ್ನು ಅರ್ಪಿಸಲು ಮುಂದಾಗಿದ್ದಾರೆ. ಆದರೆ ಈ ಮಾಲೆಯನ್ನು ತಮ್ಮ ಕೊರಳಿಗೆ ಹಾಕಿಕೊಳ್ಳದ ಸೋನು ಸೂದ್ ಅದನ್ನ ಅಭಿಮಾನಿಯ ಕೊರಳಿಗೆ ಹಾಕಿ ಮತ್ತೊಮ್ಮೆ ಎಲ್ಲರ ಮನಗೆದ್ದರು. ಸ್ನೇಹಿತರೆ ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಮೆಂಟ್ ಮಾಡಿ ತಿಳಿಸಿ ಹಾಗೂ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಒಂದು ಲೈಕ್ ಮಾಡಿ.