ಸೋನು ಸೂದ್ ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ? ಈ ನಟನಿಗೆ ಇಷ್ಟೊಂದು ದುಡ್ಡು ಎಲ್ಲಿಂದ ಬರುತ್ತದೆ ಎಂದು ತಿಳಿದರೆ ಶಾಕ್ ಆಗ್ತೀರಾ..!

13

ಸ್ನೇಹಿತರೆ, ದಕ್ಷಿಣ ಭಾರತ ಹಾಗೂ ಹಲವಾರು ಹಿಂದಿ ಚಿತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಸೋನು ಸೂದ್ ಪ್ರತಿ ಸಿನಿಮಾದಲ್ಲೂ ವಿಲನ್ ಆಗಿ ಕಾಣಿಸಿಕೊಳ್ಳಲು ಪಡೆಯುವ ಸಂಭಾವನೆ ಎಷ್ಟು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ತೆರೆಯಮೇಲೆ ವಿಲ್ಲನ್ ಪಾತ್ರಗಳಲ್ಲಿ ಅಭಿನಯಿಸಿದರೂ, ನಟ ಸೋನು ಸೂದ್ ಅನೇಕರ ಪಾಲಿಗೆ ರಿಯಲ್ ಹೀರೋ ಆಗಿದ್ದಾರೆ. ಈ ಕೊರೋನಾ ಸಂಕಷ್ಟದ ಸಮಯದಲ್ಲಿ ಸೋನು ಸೂದ್ ಮಾಡುತ್ತಿರುವ ಸಹಾಯಕ್ಕೆ ಎಲ್ಲಾಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದರ ಜೊತೆಗೆ ಇಷ್ಟೊಂದು ಜನರಿಗೆ ಸಹಾಯ ಮಾಡಲು ಈತನಿಗೆ ಹಣ ಎಲ್ಲಿಂದ ಬರುತ್ತದೆ ಎಂಬ ಗೊಂದಲ ಕೂಡ ಹಲವರಲ್ಲಿ ಮೂಡಿದೆ. ಇಂತಹ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಬೇಕಾದರೆ ಮುಂದೆ ಓದಿ..
ಹೌದು ದಕ್ಷಿಣ ಭಾರತದ ಟಾಪ್ ವಿಲನ್ ಆಗಿರುವ ಸೋನು ಸೂದ್ ಒಂದು ಸಿನಿಮಾದಲ್ಲಿ ನಟಿಸಲು ಸುಮಾರು ಎರಡು ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ. ಸೋನು ಸೂದ್ ಇನ್ಮುಂದೆ ವಿಲನ್ ಪಾತ್ರ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದರು. ಅಲ್ಲದೆ ಸಂಭಾವನೆಯನ್ನು ಎರಡರಿಂದ ಏಳು ಕೋಟಿ ರೂಪಾಯಿಗೆ ಏರಿಸಿಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು.

ಇದು ನಿರ್ಮಾಪಕರಿಗೆ ಸ್ವಲ್ಪ ಭಾರ ಎನಿಸಿದರೂ ಕೆಲ ನಿರ್ಮಾಪಕರು ಸೋನು ಸೂದ್ ಅವರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಇಂತಹ ಕೊರೋನಾ ಸಂಕಷ್ಟದ ಕಾಲದಲ್ಲಿ ಸೋನು ಸೂದ್ ತಮ್ಮ ಚಾರಿಟೇಬಲ್ ಫೌಂಡೇಶನ್ ಮೂಲಕ ಎಲ್ಲರಿಗೂ ಸಹಾಯ ಮಾಡಲು ಮುಂದಾಗಿದ್ದಾರೆ. ಈ ಫೌಂಡೇಶನ್ಗೆ ಒಂದಿಷ್ಟು ಹಣ ಅವರ ದುಡಿಮೆಯಿಂದಲೇ ಬಂದರೆ, ಇನ್ನು ಕೆಲ ಹಣ ಸಂಸ್ಥೆಗಳು ಮತ್ತು ದಾನಿಗಳು ನೀಡುತ್ತಿದ್ದಾರೆ. ಈ ಹಣವನ್ನು ಸಂಕಷ್ಟದಲ್ಲಿರುವವರ ಸಹಾಯಕ್ಕೆ ಬಳಕೆ ಮಾಡುತ್ತಿದ್ದು, ಇವರ ಸಹಾಯದಿಂದಲೇ ಅನೇಕರ ಪ್ರಾಣ ಉಳಿಸಿದೆ ಎಂದು ಹೇಳಿದರೆ ತಪ್ಪಾಗಲಾರದು.

ಸಾಕಷ್ಟು ಮಂದಿ ಸೋನು ಸೂದ್ ಅವರನ್ನು ದೇವರ ರೀತಿಯಲ್ಲಿ ಕಾಣುತ್ತಿದ್ದಾರೆ. ಹಾಲಿನ ಅಭಿಷೇಕ ಕೂಡ ಮಾಡಿ ಅಭಿನಂದನೆ ತಿಳಿಸುತ್ತಿದ್ದಾರೆ, ಅಷ್ಟೇ ಅಲ್ಲದೆ ಇನ್ನು ಕೆಲವರು ಸೋನು ಸೂದ್ ಅವರ ಫೋಟೋವನ್ನು ದೇವರ ಮನೆಯಲ್ಲಿ ಇಟ್ಟು ಪೂಜಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗುತ್ತಿದೆ ಇದನ್ನು ನೋಡಿದ ಸೋನು ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ…