ಮಾವಿನಹಣ್ಣಿನಲ್ಲಿ ರಾಸಾಯನಿಕ ಹಾಕಿದ್ದಾರೆಂದು ಕಂಡುಹಿಡಿಯುವುದು ಹೇಗೆ ಗೊತ್ತಾ.? ಸಕ್ಕತ್ ಸುಲಭ, ಈ ರೀತಿ ಮಾಡಿ ಸಾಕು !!
ಸ್ನೇಹಿತರೆ, ಮಾವಿನ ಹಣ್ಣು ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಚಿಕ್ಕ ವಯಸ್ಸಿನವರಿಂದ ಹಿಡಿದು ದೊಡ್ಡವರವರೆಗೂ ಮಾವಿನ ಹಣ್ಣು ಎಂದರೆ ಪಂಚಪ್ರಾಣ. ಅದೆಷ್ಟೋ ಮಂದಿ ಮಾವಿನ ಹಣ್ಣಿನ ಸೀಸನ್ ಬರಲೆಂದೇ ಕಾಯುತ್ತಿರುತ್ತಾರೆ ಇಂದಿನ ವೈಜ್ಞಾನಿಕ ಯುಗದಲ್ಲಿ ವರ್ಷಪೂರ್ತಿ ಮಾವಿನಹಣ್ಣು ಸಿಗುತ್ತಿದ್ದರು ಕೂಡ ಏಪ್ರಿಲ್-ಮೇ ಹಾಗೂ ಜೂನ್ ತಿಂಗಳಲ್ಲಿ ಸಿಗುವ ಹಣ್ಣಿನ ರುಚಿ ಸಂಪೂರ್ಣವಾಗಿ ಬಹಳ ಅದ್ಭುತ. ಹೌದು ಈ ಮೂರು ತಿಂಗಳುಗಳು ಮಾವಿನಹಣ್ಣಿನ ನೈಸರ್ಗಿಕವಾಗಿ ಸಿಗುತ್ತದೆ. ಆದ್ದರಿಂದ ಈ ಹಣ್ಣುಗಳು ಬಹಳ ಸ್ವಾದಭರಿತವಾಗಿ ರುಚಿಯಿಂದ ಕೂಡಿರುತ್ತವೆ.
ಇದೀಗ ಕೊನೆಗೂ ಆ ಸಮಯ ಬಂದಿದೆ ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಾವಿನ ಹಣ್ಣಿನ ಸೀಸನ್ ಬಂದಾಗಿದೆ. ಆದಕಾರಣ ಪ್ರತಿಯೊಬ್ಬರು ಕೂಡ ಮಾವಿನ ಹಣ್ಣಿನ ರುಚಿಯನ್ನು ನೋಡುತ್ತಿದ್ದಾರೆ ಅದೇ ರೀತಿ ಗ್ರಾಹಕರನ್ನು ತಮ್ಮತ್ತ ಆಕರ್ಷಿಸುವಲ್ಲಿ ಅನೇಕರು ಮುಂದಾಗಿದ್ದಾರೆ. ಹೌದು ಮಾವು ಬೇಗ ಹಣ್ಣಾಗಲಿ ಎಂದು ಹಲವಾರು ರಾಸಾಯನಿಕಗಳನ್ನು ಹಾಕುತ್ತಾರೆ. ಇಂಥ ಹಣ್ಣುಗಳ ಸೇವನೆ ಆರೋಗ್ಯಕ್ಕೆ ಅನೇಕ ದುಷ್ಪರಿಣಾಮ ಬೀರುತ್ತದೆ ಆದ್ದರಿಂದ ತೆಗೆದುಕೊಳ್ಳಬೇಕಾದರೆ ಯಾವುದು ರಾಸಾಯನಿಕ ಭರಿತವಾದ ಹಣ್ಣು ಎಂದು ಕಂಡು ಹಿಡಿಯುವ ಸುಲಭ ವಿಧಾನ ಯಾವುದು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಸಾಮಾನ್ಯವಾಗಿ ಮಾವಿನ ಹಣ್ಣುಗಳ ಮೇಲೆ ರಾಸಾಯನಿಕಗಳ ರಾಶಿಯನ್ನು ಬಳಸಲಾಗುತ್ತದೆ. ಹೌದು ಸಾಮಾನ್ಯವಾಗಿ ಕಣ್ಣಿಗೆ ಒಳ್ಳೆಯದು, ದೇಹಕ್ಕೆ ಸಾಕಷ್ಟು ಶಕ್ತಿಯನ್ನು ನೀಡುವ ಹಣ್ಣು ಎಂದು ಹಲವಾರು ಜನ ಇದನ್ನು ಸೇವಿಸುತ್ತಾರೆ. ಆದರೆ ರಾಸಾಯನಿಕ ಬಳಸುವುದರಿಂದ ಉಪಯೋಗವಾಗುವ ಬದಲು ದೇಹದ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡುತ್ತದೆ. ಇದರಿಂದಾಗಿ ನಾವು ಮಾರುಕಟ್ಟೆಗೆ ಹೋದಾಗ ರಾಸಾಯನಿಕ ಬಳಸಿದ ಹಣ್ಣುಗಳು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.
ಹೌದು ಮಾವಿನಹಣ್ಣು ಸಂಪೂರ್ಣವಾಗಿ ಹಳದಿಯಾಗಿ ಒಣಗಿದಂತೆ ಕಂಡರು ಕೂಡ ಅವುಗಳ ತೊಟ್ಟು ಮಾತ್ರ ಹಸಿರಾಗಿದ್ದರೆ, ಆ ಹಣ್ಣುಗಳ ಮೇಲೆ ರಾಸಾಯನಿಕ ಬಳಸಲಾಗಿದೆ ಎಂದರ್ಥ. ಇನ್ನೂ ಅಷ್ಟೇ ಅಲ್ಲದೆ ಒಂದು ಬಕೇಟ್ನಲ್ಲಿ ನೀರು ಹಾಕಿ ಅದಕ್ಕೆ ನೀವು ತಂದಿರುವ ಮಾವಿನಹಣ್ಣುಗಳನ್ನು ಹಾಕಿ ಆಗ ಹಣ್ಣುಗಳು ತೇಲಲು ಆರಂಭಿಸಿದರೆ ಮಾವಿನ ಹಣ್ಣುಗಳಲ್ಲಿ ರಾಸಾಯನಿಕ ಬಳಸಿದ್ದಾರೆ ಎಂದರ್ಥ. ಹೀಗಾಗಿ ಸ್ನೇಹಿತರೆ ಮಾವಿನ ಹಣ್ಣನ್ನು ತೆಗೆದುಕೊಳ್ಳಬೇಕಾದರೆ ಪರೀಕ್ಷಿಸಿ ತರುವುದು ಉತ್ತಮ…