ಬಾಯಲ್ಲಿ ನೀರು ತರಿಸುವ, ನಮ್ಮ ಹಿರಿಯರ ಶೈಲಿಯ ಹೆಸರುಬೇಳೆ ಮತ್ತು ಸೌತೆಕಾಯಿ ಕೋಸಂಬರಿ ಮಾಡುವ ವಿಧಾನ ಹೇಗಿದೆ ನೋಡಿ !!

36

ಸ್ನೇಹಿತರೆ, ಲಾಕ್ಡೌನ್ ಇರುವ ಕಾರಣ ಮನೆಯಲ್ಲಿ ಇರುವವರು ಏನಾದರೂ ತಿನ್ನುತ್ತಲೇ ಇರುತ್ತಾರೆ. ಇನ್ನಷ್ಟು ರುಚಿಕರ ಆಹಾರವನ್ನು ತಯಾರಿಸಿಕೊಂಡು ಸೇವನೆ ಮಾಡಲು ಬಯಸುತ್ತಾರೆ. ಆದರೆ ಎಲ್ಲರೂ ಸಾಮಾನ್ಯವಾಗಿ ನಮಗೆ ಬೇಡದ ಎಣ್ಣೆ ಪದಾರ್ಥಗಳನ್ನು ಬಾಯಿ ರುಚಿಗಾಗಿ ಮಾಡಿ ತಿನ್ನುತ್ತಾರೆ ಆದರೆ ಇಂತಹ ವಿಶೇಷವಾದ ಹೆಸರುಬೇಳೆ ಮತ್ತು ಸೌತೆಕಾಯಿನಿಂದ ಮಾಡಿದ ಕೋಸಂಬರಿ ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ರೀತಿಯಾದಂತಹ ಲಾಭಗಳು ದೊರೆಯುತ್ತವೆ. ಸ್ವಲ್ಪವೂ ಎಣ್ಣೆ ಬಳಸದೆ ದೇಹಕ್ಕೆ ಬೇಕಾಗಿರುವಂತಹ ಪದಾರ್ಥಗಳನ್ನು ಉಪಯೋಗಿಸಿ ಮಾಡುವ ಈ ಕೋಸಂಬರಿ ಆರೋಗ್ಯವನ್ನು ವೃದ್ಧಿಸುತ್ತದೆ.

ಹಾಗಾಗಿ ನಾವು ಈ ಹೆಸರುಬೇಳೆ ಮತ್ತು ಸೌತೆಕಾಯಿ ಕೋಸಂಬರಿ ಮಾಡುವ ವಿಧಾನ ನಿಮಗೆ ತಿಳಿಸಲಿದ್ದೇವೆ. ಸಾಮಾನ್ಯವಾಗಿ ಕೋಸಂಬರಿಯನ್ನು ಶ್ರೀರಾಮನವಮಿ ಹಬ್ಬಕ್ಕೆ ಎಲ್ಲರ ಮನೆಯಲ್ಲಿಯೂ ಮಾಡುತ್ತಾರೆ, ಆದರೆ ಈ ಲಾಕ್ ಡೌನ್ನಲ್ಲಿಯೂ ಮಾಡಿ ಸವಿಯಿರಿ. ಕೋಸಂಬರಿ ಮಾಡುವುದಕ್ಕೆ ಏನೆಲ್ಲ ಪದಾರ್ಥಗಳು ಬೇಕು? ಮಾಡುವ ವಿಧಾನ ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೆಸರುಬೇಳೆ ಮತ್ತು ಸೌತೆಕಾಯಿ ಕೋಸಂಬರಿ ಮಾಡಲು ಬೇಕಾಗುವ ಪದಾರ್ಥಗಳು: ಅರ್ಧ ಬಟ್ಟಲು ಹೆಸರುಬೇಳೆ, ಮುಕ್ಕಾಲು ಬಟ್ಟಲು ಸಣ್ಣಗೆ ಹಚ್ಚಿದ ಸೌತೆಕಾಯಿ, ಕಾಲು ಬಟ್ಟಲು ತೆಂಗಿನ ತುರಿ, 2 ಚಮಚ ಕ್ಯಾರೆಟ್ ತುರಿ, ಸ್ವಲ್ಪ ಕೊತ್ತಂಬರಿ ಸೊಪ್ಪು, 1 ಹಸಿಮೆಣಸಿನಕಾಯಿ, ಅರ್ಧ ಚಮಚ ನಿಂಬೆರಸ, ಸ್ವಲ್ಪ ಕಾಳು ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.

ಇನ್ನು ಕೋಸಂಬರಿಯನ್ನು ಮಾಡುವ ವಿಧಾನ ಮೊದಲಿಗೆ ತೆಗೆದುಕೊಂಡ ಹೆಸರು ಬೇಳೆಗೆ ನೀರನ್ನು ಹಾಕಿ ಒಂದು ಗಂಟೆಗಳ ಕಾಲ ನೆನೆಯಲು ಬಿಡಿ. ಒಂದು ಗಂಟೆಗಳ ನಂತರ ಹೆಸರುಬೇಳೆಯನ್ನು ನೀರಿನಿಂದ ತೆಗೆದು ಒಂದು ಬಟ್ಟಲಿಗೆ ಹಾಕಿ, ಒಂದು ದೊಡ್ಡ ಬಟ್ಟಲಲ್ಲಿ ನೆನೆಸಿದ ಹೆಸರುಬೇಳೆ, ಸಣ್ಣಗೆ ಹಚ್ಚಿದ ಸ್ವಲ್ಪ ಸೌತೇಕಾಯಿ, ಕಾಲು ಬಟ್ಟಲು ತೆಂಗಿನತುರಿ, ಕ್ಯಾರೆಟ್ ತುರಿ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ನಿಂಬೆರಸ, ಕಾಳುಮೆಣಸಿನಪುಡಿ, ಹಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಹೆಸರುಬೇಳೆ ಮತ್ತು ಸೌತೆಕಾಯಿ ಕೋಸಂಬರಿ ಸವಿಯಲು ಸಿದ್ಧ…