ನೂರಕ್ಕೂ ಹೆಚ್ಚು ಸಿನಿ ಕಾರ್ಮಿಕರಿಗೆ ರವಿಚಂದ್ರನ್ ಪುತ್ರ ಕೊಟ್ಟಿರುವ ಹಣ ಏಷ್ಟು ನೋಡಿ, ಪರ್ವಾಗಿಲ್ಲ ರಿ ಮೆಚ್ಚಲೇಬೇಕು !!

10

ಸ್ನೇಹಿತರೆ, ಈ ಕರೋನಾ ಮಹಾಮಾರಿಯ ಅಟ್ಟಹಾಸದಿಂದಾಗಿ ರಾಜ್ಯದೆಲ್ಲೆಡೆ ಲಾಕ್ಡೌನ್ ಜಾರಿಯಾಗಿದೆ. ಇದರಿಂದಾಗಿ ಹಲವಾರು ವ್ಯಾಪಾರ-ವಹಿವಾಟು, ಕಾರ್ಖಾನೆಗಳು, ಆಫೀಸ್ ಅಲ್ಲದೆ ಸಿನಿಮಾರಂಗ ಕೂಡ ಸಂಪೂರ್ಣವಾಗಿ ಸ್ತಬ್ದಗೊಂಡಿದೆ. ಅದರಲ್ಲೂ ಮುಖ್ಯವಾಗಿ ಸಿನಿಮಾ ಯೂನಿಟ್ಗಳಲ್ಲಿ ಕೆಲಸ ಮಾಡುವವರಿಗಂತೂ ಸಾಕಷ್ಟು ಸಂಕಷ್ಟವುಂಟಾಗಿದೆ, ದಿನಗೂಲಿ ಕಾರ್ಮಿಕರಿಗೆ ತೀವ್ರ ತೊಂದರೆಯಾಗಿದೆ ಅಂತ.

ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದಕ್ಕೆ ಸುದೀಪ್, ದರ್ಶನ್, ಭುವನ್ ಪೊನ್ನಣ್ಣ, ರಾಗಿಣಿ ತ್ರಿವೇದಿ, ಕಿರಣ್ ರಾಜ್ಗಳಂತಹ ಅನೇಕ ಸೆಲೆಬ್ರಿಟಿಗಳು ಮುಂದೆ ಬರುತ್ತಿದ್ದಾರೆ. ಇದೀಗ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಅವರು ಕೂಡ ತಾವು ನಟಿಸುತ್ತಿರುವ ಮುಗಿಲ್ ಪೇಟೆ ಚಿತ್ರ ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ.

ಹೌದು ಸುಮಾರು ನೂರಕ್ಕೂ ಅಧಿಕ ಸದಸ್ಯರಿಗೆ ತಲಾ ಐದು ಸಾವಿರ ರೂಪಾಯಿ ನೀಡುವುದಕ್ಕೆ ಮುಂದಾಗಿದ್ದಾರೆ. ಈ ಸಾಂಕ್ರಾಮಿಕ ರೋಗವಾದ ಕರೋನವೈರಸ್ ಜಗತ್ತನ್ನು ಆವರಿಸಿ ಒಂದು ವರ್ಷಕ್ಕೂ ಜಾಸ್ತಿ ಆಗಿದೆ. ಈ ವೈರಸ್ಗೆ ಅನೇಕ ಕುಟುಂಬಗಳು ನಲುಗಿ ಹೋಗಿದೆ. ಅವುಗಳಲ್ಲಿ ನನ್ನ ಕನ್ನಡ ಸಿನಿಮಾ ಕಲಾವಿದರ ಕುಟುಂಬ ಹೊರತಲ್ಲ. ಮನೆಯಲ್ಲಿ ಇದ್ದಿದ್ದರೆ ಸುರಕ್ಷಿತವಾಗಿಯೇನೋ ಇರುತ್ತೇವೆ. ಆದರೆ ನನ್ನ ಅನೇಕ ಕಲಾವಿದ ಸ್ನೇಹಿತರು ಈ ಕರೋನ ಸಂದರ್ಭದಲ್ಲಿ ಜೀವನ ನಡೆಸುವುದಕ್ಕೆ ಕಷ್ಟಪಡುತ್ತಿದ್ದಾರೆ.

ಆದರೆ ಈ ಸಮಯದಲ್ಲಿ ನನ್ನ ಸ್ನೇಹಿತರಿಗೆ ಸಹಾಯ ಮಾಡಬೇಕಾಗಿರುವುದು ನನ್ನ ಕರ್ತವ್ಯವೆಂದು ಮನೋರಂಜನ್ ಹೇಳಿದ್ದಾರೆ. ಸದ್ಯ ಮುಗಿಲ್ಪೇಟೆ ಸಿನಿಮಾದಲ್ಲಿ ಮನೋರಂಜನ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಈ ಒಂದು ವರ್ಷದ ಪ್ರಾಜೆಕ್ಟ್ನಲ್ಲಿ ನೂರಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ನನ್ನ ಸಿನಿಮಾಗಳಿಗೆ ತನುಮನವನ್ನು ಅರ್ಪಿಸಿದ್ದಾರೆ.

ಈಗಿನ ಸಂಕಷ್ಟದ ಸಮಯದಲ್ಲಿ ಅವರ ಕಷ್ಟಕ್ಕೆ ಹೆಗಲು ಕೊಡಬೇಕಾಗಿರುವುದು ನನ್ನ ಜವಾಬ್ದಾರಿ. ಹೀಗಾಗಿ ಮುಗಿಲ್ಪೇಟೆ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರಿಗೂ ನನ್ನ ಕಡೆಯಿಂದ 5000 ಹಣವನ್ನು ಅವರ ಖಾತೆಗೆ ಹಾಕುವ ನಿರ್ಣಯ ಮಾಡಿದ್ದೇನೆ. ನನ್ನವರಿಗಾಗಿ ಈ ಸಂದರ್ಭದಲ್ಲಿ ನನ್ನ ಕೈಲಾದ ಸಹಾಯ ಮಾಡುವ ಸಣ್ಣ ಪ್ರಯತ್ನ ದಯವಿಟ್ಟು ಎಲ್ಲರೂ ಮನೆಯಲ್ಲಿ ಸುರಕ್ಷಿತವಾಗಿರಿ ನಿಮ್ಮ ಕೈಲಾದಷ್ಟು ಇತರರಿಗೆ ಸಹಾಯ ಮಾಡಿ ಎಂದು ನಟ ಮನೋರಂಜನ್ ರವಿಚಂದ್ರನ್ ಹೇಳಿದ್ದಾರೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ…