ಬಡವರು ಬಂದು ಎಂದೇ ಖ್ಯಾತಿಯಾಗಿರುವಾ ಭುವನ್ ಕೊಡುವ ದಿನಿಸಿ ಕಿಟ್ನಲ್ಲಿ ಏನೇನಿರುತ್ತೆ ನೋಡಿ, ತಿಳಿದರೆ ಭೇಷ್ ಎನ್ನುವಿರಿ !!

12

ಸ್ನೇಹಿತರೆ, ಕರೋನ ಲಾಕ್ ಡೌನ್ ಇರುವುದರಿಂದ ಅನೇಕರಿಗೆ ನಟ ಭುವನ್ ಪೊನ್ನಣ್ಣ ಮತ್ತು ಹರ್ಷಿಕ ಪುಣಚ್ಚ ಇಬ್ಬರು ಸೇರಿ ಭುವನಂ ಫೌಂಡೇಶನ್ ಕಡೆಯಿಂದ ದಿನಸಿ ಪದಾರ್ಥಗಳನ್ನು ನೀಡಿ ಸಹಾಯ ಮಾಡಿದ್ದಾರೆ. ದಿನಸಿ ಪಡೆದ ಜನರು ಇಬ್ಬರಿಗೂ ಹೃದಯಪೂರ್ವಕ ಧನ್ಯವಾದ ತಿಳಿಸುತ್ತಿದ್ದಾರೆ. ಹೌದು ಸ್ಯಾಂಡಲ್ ವುಡ್ ನಟಿ ಹರ್ಷಿಕ ಪುಣಚ್ಚ ಮತ್ತು ಬಿಗ್ ಬಾಸ್ ಖ್ಯಾತಿಯ

ಭುವನ್ ಪೊನ್ನಣ್ಣ ಅವರೀಗ ಕರೋನ ಮತ್ತು ಕಠಿಣ ಕರ್ಫ್ಯೂ ದಿಂದ ಸಂಕಷ್ಟದಲ್ಲಿರುವ ಜನರಿಗೆ ಆಹಾರ, ಔಷಧ ಮತ್ತು ಆಮ್ಲಜನಕ ನೀಡುವ ನೈಜ ಭಾಂದವರಾಗಿ ಕೆಲಸ ಮಾಡುತ್ತಿದ್ದಾರೆ. ಒಂದು ಉಸಿರು ಇದ್ದಿದ್ದರೆ ಆ ಜೀವಗಳು ಬದುಕುಳಿಯು ತ್ತಿತ್ತೇನೋ ಎಂದು ಎಲ್ಲರೂ ಮರುಗುತ್ತಿರುವ ಈ ಹೊತ್ತಿನಲ್ಲಿ ನಟಿ ಹರ್ಷಿಕ ಪುಣಚ್ಚ ಮತ್ತು ಭುವನ್ ಪೊನ್ನಣ್ಣ ಅಗತ್ಯವಿದ್ದವರಿಗೆ ಪ್ರಾಣವಾಯು ನೀಡಲು ರೋಡಿಗೆ ಇಳಿದಿದ್ದಾರೆ.

ಶ್ವಾಸ ಎಂಬ ಪರಿಕಲ್ಪನೆಯಡಿ ಅವರು ಆರಂಭಿಸಿರುವ ಎರಡು ಆಕ್ಸಿಜನ್ ಎಕ್ಸ್ಪ್ರೆಸ್ ಬಸ್ಸುಗಳಲ್ಲಿ 5 ಆಕ್ಸಿಜನ್ ಟ್ರಾನ್ಸಾಕ್ಷನ್ಗಳನ್ನು ಅಳವಡಿಸಿದ್ದಾರೆ. ಅಲ್ಲದೆ ಸರ್ಕಾರಿ ಆಸ್ಪತ್ರೆಯ ಐಸಿಯು ಬೆಡ್ಗಾಗಿ ಕಾಯುತ್ತಿರುವ ರೋಗಿಗಳಿಗೆ ಅದು ಸಿಗುವವರೆಗೂ ಆಮ್ಲಜನಕವನ್ನು ಪೂರೈಸುವ ಸೇವೆಯನ್ನು ಆಕ್ಸಿಜನ್ ಎಕ್ಸ್ಪ್ರೆಸ್ ಬಸ್ಗಳಲ್ಲಿ ಉಚಿತವಾಗಿ ಮಾಡಲಾಗುತ್ತದೆ. ಇನ್ನು ಸಧ್ಯಕ್ಕೆ ಬೆಂಗಳೂರಿನ ವಿಕ್ಟೋರಿಯಾ ಮತ್ತು ಬೌರಿಂಗ್ ಆಸ್ಪತ್ರೆಗಳ ಮುಂದೆ ಇರಲಿವೆ. ಆನಂತರ ಈ ಆಕ್ಸಿಜನ್ ಎಕ್ಸ್ಪ್ರೆಸ್ ಬಸ್ಸುಗಳು ಪ್ರಮುಖ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಸೇವೆಯನ್ನು ವಿಸ್ತರಿಸಲಿದೆ. ಜೊತೆಗೆ ಸರಳ ಊಟ, ನೀರು, ಬೇಸಿಕ್ ಮೆಡಿಸನ್ ಕೊಡಲಾಗುತ್ತದೆ. ಬಸ್ಸಲ್ಲಿ ಸಣ್ಣ ಟಿವಿ ಅಳವಡಿಸಿ ಅದರಲ್ಲಿ ರೋಗಿಗಳಿಗೆ ಪಾಸಿಟಿವಿಟಿ ಹಾಗೂ ಧೈರ್ಯ ತುಂಬುವ ಮತ್ತು ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ವಿಡಿಯೋಗಳನ್ನು ಹಾಕಲಾಗುತ್ತಿದೆ.

ಇದೆಲ್ಲದರ ನಡುವೆ ಕರೋನದ ಕಷ್ಟಕಾಲದಲ್ಲಿ ಒಂದು ಹೊತ್ತು ಊಟಕ್ಕೂ ಕಷ್ಟ ಪಡುತ್ತಿರುವಂತಹ ಜನರಿಗೆ ದಿನಸಿ ಕಿಟ್ಟುಗಳನ್ನು ಭುವನಂ ಫೌಂಡೇಶನ್ ಎಂಬ ಹೆಸರಿನಲ್ಲಿ ಬಡಜನರಿಗೆ ನೀಡಲಾಗುತ್ತಿದೆ. 10 ಕೆಜಿ ಅಕ್ಕಿ, ಒಂದು ಕೆಜಿ ಗೋಧಿ ಹಿಟ್ಟು, ಸಾಂಬಾರ್ ಪುಡಿ, ಟೀ ಪುಡಿ, ಸಕ್ಕರೆ, ಬೇಳೆ, ಅಡುಗೆ ಎಣ್ಣೆ, ಆ ಕಿಟ್ನಲ್ಲಿ ಇರುತ್ತದೆ. ಇದರಿಂದ ಕಡು ಬಡ ಜನರಿಗೆ ಅದೆಷ್ಟು ಸಹಾಯವಾಗುತ್ತಿದೆ. ಭುವನ್ ಮತ್ತು ಹರ್ಷಿಕ ಪುಣಚ್ಚ ಅವರ ಈ ಕೆಲಸದ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ…