ಪ್ರಶಾಂತ್ ನೀಲ್ ಮಾಡಿದ ಕೆಲಸ ಸರಿನಾ ?? ಇದರ ಬಗ್ಗೆ ನಿಮ್ಮ ಅಭಪ್ರಾಯವೇನು ಕಾಮೆಂಟ್ ಬಾಕ್ಸ್ ತಪ್ಪದೇ ತಿಳಿಸಿ !!

15

ಸ್ನೇಹಿತರೆ, ನಿಮಗೆಲ್ಲ ಗೊತ್ತು ನಮ್ಮ ಸ್ಯಾಂಡಲ್ ವುಡ್ಗೆ ಬಿಗ್ ಡೈರೆಕ್ಟರ್ಗಳ ಅಗತ್ಯತೆ ಎಷ್ಟಿದೆಯೆಂದು, ಆದರೆ ನಮ್ಮ ಡೈರೆಕ್ಟರುಗಳು ಬೇರೆ ಇಂಡಸ್ಟ್ರಿಯನ್ನು ಉದ್ದಾರ ಮಾಡುವುದರಲ್ಲೇ ಇರುತ್ತಾರೆ. ಬೇರೆ ಇಂಡಸ್ಟ್ರಿಯಿಂದ ಹೀರೋಯಿನ್ಗಳನ್ನು ಕರಿಸುವುದು, ಅಲ್ಲಿನ ದೊಡ್ಡ ಆಕ್ಟರ್ಗಳ ಬುಲಾವು ಬಂದರೆ ಹೆಚ್ಚಾಗಿ ಪ್ರಾಮುಖ್ಯತೆ ಕೊಡುವುದು, ಈಗೆಲ್ಲ ಮಾಡುವುದು ಅವರಿಷ್ಟ ಆದರೆ ನಮ್ಮವರು ತಮ್ಮವರು ಎನ್ನುವುದು ಇರಬೇಕಾದ ಭಾವನೆ. ಈಗಾಗಲೇ ಪ್ರಶಾಂತ್ ನೀಲ್ ತೆಲುಗು ನಟ ಪ್ರಭಾಸ್ ಚಿತ್ರ ಸಲಾರ್ ಸಿನಿಮಾ ಮಾಡುತ್ತಿದ್ದಾರೆ, ಮಾಡಲಿ ಬಿಡಿ. ಅದೇನೂ ತಪ್ಪಲ್ಲ ಎಲ್ಲರೂ ಮಾಡುವ ಹಾಗೆ ಇವರು ನೇಮ್ ನೇಮ್ ಬಂದಮೇಲೆ ಕನ್ನಡ ಇಂಡಸ್ಟ್ರಿಯನ್ನು ಮರೆತು ಬೇರೆ ಇಂಡಸ್ಟ್ರಿ ಅವರ ಜೊತೆ ಸಿನಿಮಾ ಮಾಡುತ್ತಿದ್ದಾರೆ.

ಹೀಗೆ ಪ್ರಶಾಂತ್ ನೀಲ್ ಟಾಲಿವುಡ್ ಟಾಪ್ ಸ್ಟಾರ್ಗಳಾದ ಪ್ರಭಾಸ್ ಅವರ ಜೊತೆ ಸಲಾರ್ ಸಿನಿಮಾ ಮಾಡಿದ ನಂತರ ಜೂನಿಯರ್ ಎನ್ಟಿಆರ್ ಅವರ 31ನೇ ಸಿನಿಮಾ ಪ್ರಶಾಂತ್ ನೀಲ್ ಮಾಡುತ್ತಾರೆ ಎಂಬ ಅನ್ನೌನ್ಸ್ಮೆಂಟ್ ಆಗಿದೆ. ಬ್ಯಾಕ್ ಟು ಬ್ಯಾಕ್ ಟಾಲಿವುಡ್ ಸಿನಿಮಾವನ್ನು ಕನ್ನಡದ ಟಾಪ್ ಡೈರೆಕ್ಟರ್ ಮಾಡುತ್ತಿರುವುದು ಬೇಸರದ ಸಂಗತಿ. ಪ್ರಶಾಂತ್ ನೀಲ್ ಮಾತ್ರವಲ್ಲ ಹಿಂದೇ ನಮ್ಮ ಫೇವರೆಟ್ ಉಪ್ಪಿ ಅವರು ಕೂಡ ಇದೇ ಕೆಲಸ ಮಾಡಿದರು ಓಂ ಸಿನಿಮಾ ಸಕ್ಸಸ್ ಆದಮೇಲೆ ತುಂಬಾ ಹೆಸರು ಮಾಡಿದ ಉಪೇಂದ್ರ ತೆಲುಗಿನಲ್ಲಿ ಇದೆ ಸಿನಿಮಾವನ್ನು ಓಂಕಾರ ಎಂದು ಮಾಡಿದರು. ಅಷ್ಟೇ ಅಲ್ಲ ಓಂಕಾರ್ ಸಿನಿಮಾದ ನಂತರ ಚಿರಂಜೀವಿ ಅವರ ಜೊತೆಗೆ ಸಿನಿಮಾ ಮಾಡುತ್ತಿದ್ದರು ನಂತರ ಉಪ್ಪಿ ವಾಪಸ್ ಕನ್ನಡಕ್ಕೆ ಬಂದರು.

ಈಗ ಪ್ರಶಾಂತ್ ನೀಲ್ ಅವರ ಕಾಲ, ಟಾಲಿವುಡ್ನ ಎರಡು ಸಿನಿಮಾಗಳನ್ನು ಮುಗಿಸಿ ಮತ್ತೆ ವಾಪಸ್ ಕನ್ನಡಕ್ಕೆ ಬರುತ್ತಾರಾ ಎಂಬುದನ್ನು ಕಾದುನೋಡಬೇಕಿದೆ. ಆದರೂ ಪ್ರಶಾಂತ್ ನೀಲ್ ಕನ್ನಡ ಮತ್ತು ತೆಲುಗು ಎರಡು ನಟರನ್ನು ಸೇರಿಸಿ ಮಲ್ಟಿಸ್ಟಾರರ್ ಸಿನಿಮಾ ಮಾಡಿದರೆ ಚೆನ್ನಾಗಿರುತ್ತಿತ್ತು. ಪ್ರೇಮ ಮತ್ತು ರವಿಚಂದ್ರನ್ ಅವರನ್ನು ನಾವು ನೆನಪು ಮಾಡಿಕೊಳ್ಳಲೇ ಬೇಕು ಏಕೆಂದರೆ ಅವರಿಗೆ ಎಷ್ಟೊಂದು ಅವಕಾಶಗಳು ಬಂದರೂ ಕೂಡ ಅವರು ನಮ್ಮ ಕನ್ನಡ ಇಂಡಸ್ಟ್ರಿಯನ್ನು ತೊರೆದು ಹೋಗಲಿಲ್ಲ.

ಆದರೂ ಕೆಜಿಎಫ್ ಕ್ರಿಯೇಟ್ ಮಾಡಿದ ಹವಾ ಮತ್ತು ರೆಸ್ಪೆಕ್ಟ್ ಅನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ನಮ್ಮ ಇಂಡಸ್ಟ್ರಿ ಏನು ಬೇಕಾದರೂ ಮಾಡಬಹುದು ಮಾರ್ಕೆಟ್ ಅನ್ನುವ ಬೌಂಡರಿಯನ್ನು ಬಿಟ್ಟು ಕೆಲಸ ಮಾಡಬಹುದು ಎಂಬುದನ್ನು ತೋರಿಸಿದ್ದು ಪ್ರಶಾಂತ್ ನೀಲ್. ಮತ್ತೊಮ್ಮೆ ಪ್ರಶಾಂತ್ ನಮ್ಮ ಕನ್ನಡ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ…