ಶನಿ ಧಾರಾವಾಹಿಯಲ್ಲಿ ಶನಿ ಪತ್ನಿ ದಾಮಿನಿ ಪಾತ್ರದಾರಿ ಈಗ ಏನು ಮಾಡುತ್ತಿದ್ದಾರೆ ಗೊತ್ತಾ? ಮತ್ತೆ ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತಾರೆ. ಹೇಗೆ ಗೊತ್ತೇ??

4

ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಂತೂ ಬಣ್ಣದ ಲೋಕದ ಸೆಳೆತ ಎಷ್ಟರ ಮಟ್ಟಿಗೆ ಇದೆಯೆಂದರೆ ಒಮ್ಮೆ ಈ ಲೋಕಕ್ಕೆ ಕಾಲಿಟ್ಟವರು ಮತ್ತೆ ಹಿಂತಿರುಗಿ ಹೋಗುವ ಅಲೋಚನೆ ಮಾಡುವುದಿಲ್ಲ. ಎಲ್ಲದಕ್ಕಿಂತಲೂ ಮುಖ್ಯವಾಗಿ ಕಿರುತೆರೆಯ ಮೂಲಕ ಬಣ್ಣದ ಪಯಣ ಶುರು ಮಾಡಿದವರು ಮುಂದಿನ ದಿನಗಳಲ್ಲಿ ಹಿರಿತೆರೆಯಲ್ಲಿ ನಟಿಸುತ್ತಾರೆ.

ಅಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಂತೂ ಅದು ತೀರಾ ಮಾಮೂಲಿ ಸಂಗತಿಯಾಗಿದೆ. ಕಿರುತೆರೆಯ ಮೂಲಕ ನಟಿಯರಾಗಿ ಹಿರಿತೆರೆಗೆ ಪರಿಚಯವಾದ ರಾಧಿಕಾ ಪಂಡಿತ್, ರಚಿತಾ ರಾಮ್, ಅದಿತಿ ಪ್ರಭುದೇವ ಈಗಾಗಲೇ ಆಕ್ಟಿಂಗ್ ನಲ್ಲಿ ಕಮಲ್ ಮಾಡುತ್ತಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಹಿರಿತೆರೆ ಅಥವಾ ಕಿರುತೆರೆಯಲ್ಲಿ ಚಾನ್ಸ್ಗಳನ್ನು ಪಡೆಯಲು ಅದೆಷ್ಟು ಜನ ಸೋಷಿಯಲ್ ಮೀಡಿಯಾಗಳ ಮೂಲಕ ಪ್ರಯತ್ನಪಟ್ಟು ಅವಕಾಶಗಳಲ್ಲಿ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಇದರ ಜೊತೆಗೆ ಸುಪ್ರೀತಾ ಸತ್ಯನಾರಾಯಣ, ತೇಜಸ್ವಿನಿ ಶೇಕಡಾ, ಮೋಕ್ಷಿತ ಪೈಗಳಂತ ನಟಿಯರು ಕಿರುತೆರುಯಿಂದ ಇದ್ದಾಗಲೇ ಮುಖ ಮಾಡಿದ್ದಾಗಿದೆ. ಹೀಗೆ ಕಿರುತೆರೆಯಿಂದ ಹಿರಿತೆರೆಗೆ ಮತ್ತೊಂದು ಚಂದುಳ್ಳಿ ಚೆಲುವೆ ಸೇರ್ಪಡೆಗೊಳ್ಳುತ್ತಿದ್ದಾರೆ. ಆಕೆ ಯಾರು? ಯಾವ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಕಿರುತೆರೆಯಿಂದ ಬಣ್ಣದಲೋಕಕ್ಕೆ ಅಂದರೆ ಹಿರಿತೆರೆಗೆ ಪ್ರವೇಶಿಸುತ್ತಿರುವ ಚಂದುಳ್ಳಿ ಚೆಲುವೆಯ ಹೆಸರು ಬೃಂದಾ ಆಚಾರ್ಯಾ. ಕಿರುತೆರೆ ಮೂಲಕ ಬಣ್ಣದಲೋಕಕ್ಕೆ ಪರಿಚಯವಾದ ಈ ಸುರಸುಂದರಿ ಇದೀಗ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರಂತೆ. ಚಂದನವನದಲ್ಲಿ ಜನಪ್ರಿಯರಾಗಿರುವ ಪ್ರೇಮ್ ಅಭಿನಯದ 25ನೇ ಚಿತ್ರ ಪ್ರೇಮಂ ಪೂಜ್ಯಂನಲ್ಲಿ ನಟಿಯಾಗಿ ನಟಿಸುವ ಮೂಲಕ ಹಿರಿತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬೃಂದಾ ಆಚಾರ್ಯ.

ಹೌದು ಕನ್ನಡದ ಪೌರಾಣಿಕ ಧಾರವಾಹಿಗಳಾದ ಮಹಾ ಕಾಳಿ ಸೀರಿಯಲ್ನಲ್ಲಿ ಸಣ್ಣ ಪಾತ್ರ ಮಾಡಿ, ಶನಿ ಧಾರಾವಾಹಿಯಲ್ಲಿ ಶನಿ ಪತ್ನಿಯಾಗಿ ನಟಿಸಿದ ಬೃಂದಾ ಆಚಾರ್ಯ ಇದೀಗ ಪ್ರೇಮಂ ಪೂಜ್ಯಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಮೇ 2ರಿಂದ ಪ್ರೇಮ್ ನಾಯಕತ್ವದ ಪ್ರೇಮಂ ಪೂಜ್ಯಂ ಸಿನಿಮಾ ಶೂಟಿಂಗ್ ಆರಂಭವಾಗಿದೆ. ಚಿತ್ರತಂಡವನ್ನು ಸೇರಿಕೊಂಡ ನಟಿ ಬೃಂದಾ ಅಂತೂ ನಾನು ಪೌರಾಣಿಕ ಪಾತ್ರಗಳಿಂದ ಹೊರಬಂದಿದ್ದೇನೆ.

ಮಹಾಕಾಳಿ ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿ ಆ ಪಾತ್ರದಲ್ಲಿ ಗುರುತಿಸಿಕೊಂಡು ನಂತರ ಶನಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಶನಿ ಧಾರಾವಾಹಿಯಲ್ಲಿ ನಟಿಸಿದ ನಂತರ ನನ್ನ ಅದೃಷ್ಟವೇ ಬದಲಾಗಿದೆ ಎಂದು ಹೇಳಬಹುದು ಏಕೆಂದರೆ ಅದರಿಂದಾಗಿ ನಾನು ನೆನಪಿರಲಿ ಪ್ರೇಮ್ ಸರ್ ಅವರ ಜೊತೆಗೆ ಪ್ರೇಮಂ ಪೂಜ್ಯಂ ಸಿನಿಮಾ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ…