ವೀಕೆಂಡ್ನಲ್ಲಿ ಮತ್ತೆ ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಕಾಣಿಸಿಕೊಳ್ಳಲಿರುವ ಸುದೀಪ್! ಕಾರಣ ಏನು ಗೊತ್ತಾ ??

13

ಸ್ನೇಹಿತರೆ, ಬಿಗ್ ಬಾಸ್ ಕನ್ನಡ ಸೀಸನ್ 8 ಕರೋನದ ಕಾರಣದಿಂದ ಅನಿರೀಕ್ಷಿತವಾಗಿ ಅರ್ಧಕ್ಕೆ ನಿಲ್ಲುತ್ತದೆ ಎಂದು ಯಾರೂ ಊಹಿಸಿರಲಿಲ್ಲ‌. ಆದರೆ ಈ ಕರೋನವೈರಸ್ ವ್ಯಾಪಕವಾಗಿ ಹರಡುತ್ತಿರುವ ಕಾರಣದಿಂದಾಗಿ ಶೋ ನಿಲ್ಲಿಸುವುದು ಅನಿವಾರ್ಯವಾಯಿತು. 21ನೇ ದಿನಕ್ಕೆ ಎಲ್ಲಾ ಸ್ಪರ್ಧಿಗಳು ಮನೆಯಿಂದ ಹೊರ ಬರಬೇಕಾಯಿತು. ಆದರೆ ಇದೀಗ ಬಿಗ್ ಬಾಸ್ ಮುಗಿದರೂ ಕೂಡ ಅದರ ಮನೋರಂಜನೆ ಇನ್ನೂ ನಿಂತಿಲ್ಲ.

ಬಿಗ್ ಬಾಸ್ ತನ್ನ ಪ್ರೇಕ್ಷಕರಿಗೆ ಒಂದಲ್ಲಾ ಒಂದು ರಿತಿಯಲ್ಲಿ ಮನೋರಂಜನೆ ನೀಡಲು ಕಲರ್ಸ್ ಕನ್ನಡ ವಾಹಿನಿ ಪ್ರಯತ್ನಿಸುತ್ತಿದೆ. ಇದು ಮತ್ತೆ ಬಿಗ್ ಬಾಸ್ ಸ್ಪರ್ಧಿಗಳ ಜೊತೆಗೆ ಸುದೀಪ್ ವಾರದ ಕಥೆ ಪಂಚಾಯಿತಿ ಮಾಡಲಿದ್ದಾರೆ ಹೌದು ಬಿಗ್ ಬಾಸ್ ಮುಗಿದ ನಂತರ ಮನೆಗೆ ಬಂದ ಸ್ಪರ್ದಿಗಳೆಲ್ಲ ತಮ್ಮ ಬಿಗ್ ಬಾಸ್ ಮನೆಯ ಅನುಭವದ ಮಾತುಗಳನ್ನು ಜಸ್ಟ್ ಮಾತ್ ಮಾತಲ್ಲಿ ಕಾರ್ಯಕ್ರಮದಲ್ಲಿ ಹಂಚಿಕೊಳ್ಳುತ್ತಿದ್ದರು.

ಆದರೆ ಇದೀಗ ವಿಶೇಷ ಏನಪ್ಪಾ ಎಂದರೆ ಈ ಕಾರ್ಯಕ್ರಮಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೂಡ ಸೇರ್ಪಡೆಯಾಗಿದ್ದು, ವಾರಂತ್ಯದ ಪಂಚಾಯಿತಿಯನ್ನು ಸಹ ನಡೆಸಲಿದ್ದಾರೆ. ಪಂಚಾಯಿತಿ ನಡೆಸಿದಂತಹ ಸುದೀಪ್ ಯಾರ ಕಾಲೆಳೆದಿದ್ದಾರೆ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ‌.

ಪ್ರತಿ ವಾರ ಬಿಗ್ ಬಾಸ್ನಿಂದ ಎಲಿಮಿನೇಟ್ ಆದ ಸ್ಪರ್ಧಿಗಳನ್ನು ವೇದಿಕೆಗೆ ಕರೆದು ಕಿಚ್ಚ ಮಾತನಾಡಿಸುತ್ತಿದ್ದರು. ಆದರೆ ಕಾರ್ಯಕ್ರಮ ಮುಗಿಯುವುದಕ್ಕಿಂತ ನಾಲ್ಕು ವಾರ ಮುನ್ನವೇ ಸುದೀಪ್ಗೆ ಆರೋಗ್ಯ ಕೈ ಕೊಟ್ಟಿದ್ದರಿಂದ ಅವರು ವೀಕೆಂಡ್ ಎಪಿಸೋಡ್ಗಳನ್ನು ನಡೆಸಿಕೊಡಲು ಸಾಧ್ಯವಾಗಿರಲಿಲ್ಲ, ಯಾವುದೇ ಸ್ಪರ್ಧೆಯನ್ನು ವೇದಿಕೆಗೆ ಕರೆದು ಮಾತನಾಡಿಸಲಿಲ್ಲ. ಮನೆಯಿಂದ ಹೊರಬಂದ 11 ಸ್ಪರ್ಧಿಗಳಿಗೆ ಸುದೀಪ್ ಜೊತೆ ಮಾತನಾಡುವ ಅವಕಾಶ ಸಿಕ್ಕಿರಲಿಲ್ಲ.

ಈಗ ಸುದೀಪ್ ಜೊತೆ ಅವರೆಲ್ಲ ಮಾತುಕತೆಗಾಗಿ ಕಲರ್ಸ್ ಕನ್ನಡ ವಾಹಿನಿ ಒಂದು ವೇದಿಕೆ ಹೊಂದಿಸಿದೆ. ಸದ್ಯ ಎಲ್ಲೆಡೆ ಕರೋನವೈರಸ್ ಹಾವಳಿ ಜೋರಾಗಿರುವುದರಿಂದ ಯಾರನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಇದರ ಬೆನ್ನಲ್ಲೇ ವಿಡಿಯೋ ಕಾಲ್ ಮೂಲಕ ಎಲ್ಲರ ಜೊತೆ ಸುದೀಪ್ ಮಾತನಾಡಿದ್ದಾರೆ.

ಹೌದು ಆ ಮಾತುಕತೆಯ ಪೂರ್ಣ ಭಾಗವನ್ನು ಭಾನುವಾರ ಅಂದರೆ ಮೇ 23 ಸಂಜೆ ಆರು ಮೂವತ್ತಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಮಾಡಲಾಗುವುದು. ನಿಮ್ಮೆಲ್ಲರನ್ನು ನೋಡಿ ಖುಷಿಯಾಗುತ್ತಿದೆ ಎಲ್ಲರೂ ಹೇಗಿದ್ದೀರಾ? ಎನ್ನುತ್ತಾ ಸ್ಪರ್ಧಿಗಳ ಆರೋಗ್ಯ ವಿಚಾರಿಸಿದ್ದಾರೆ. ಅಷ್ಟೇ ಅಲ್ಲದೆ ರಘು ಹೇಗಿದ್ದೀರಾ? ಮನೆಯಿಂದ ನಿಮ್ಮನ್ನು ಹೊರಗಡೆ ಹಾಕಿಲ್ಲ ತಾನೇ ಎಂದು ರಘು ಗೌಡ ಅವರ ಕಾಲೆಳೆದಿದ್ದಾರೆ.

ಬಿಗ್ ಬಾಸ್ ಅರ್ಧಕ್ಕೆ ಮುಗೀತು ಅಂತ ಪ್ರಶಾಂತ್ ಸಂಬರ್ಗಿ ಅವರಿಗೆ ಬೇಸರವೇನೂ ಇದೆ, ಆದರೆ ಬೇರೆಯವರಿಗೆ ಗೆಲ್ಲೋಕೆ ಬಿಟ್ಟಿಲ್ಲವಲ್ಲ ಎಂಬ ಸಮಾಧಾನ ಕೂಡ ಇದೆ ಎಂದು ಕಿಚ್ಚ ಪ್ರಶಾಂತ್ ಸಂಬರ್ಗಿ ಅವರಿಗೆ ತಮಾಷೆ ಮಾಡಿದ್ದಾರೆ. ಇಂತಹ ಮಸ್ತ್ ಮಾತುಕತೆಯ ಪ್ರೋಗ್ರಾಮ್ ಅನ್ನು ಕಲರ್ಸ್ ಕನ್ನಡ ವಾಹಿನಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ…