ಕೊನೆಗೂ ಬಾರಿ ಸಿಹಿ ಸುದ್ದಿ ಕೊಟ್ಟ ವಿನೋದ್ ರಾಜ್, ಏನಿದು ಗೊತ್ತೆ..?
ಸ್ನೇಹಿತರೆ, ಜಗತ್ತಿನಲ್ಲಿ ಅದೆಷ್ಟೋ ಮಂದಿಗೆ ಪ್ರತಿಭೆ ಹಾಗೂ ಸಾಮರ್ಥ್ಯ ಇದ್ದರೂ ಕೂಡ ಅವಕಾಶಗಳು ಸಿಗುವುದಿಲ್ಲ. ಇದು ಅವರ ಬಾಳಲ್ಲಿ ಆ ದೇವರು ಮಾಡಿರುವಂತಹ ಮೋಸ ಎಂದು ಹೇಳಬಹುದು. ಆದರೆ ದೇವರು ಒಳ್ಳೆಯವರನ್ನು ಎಂದು ಸಹ ಕೈಬಿಡುವುದಿಲ್ಲ ಎನ್ನುವುದಕ್ಕೆ ಇವರೇ ಉದಾಹರಣೆ. ಹೌದು ಕನ್ನಡದ ಜನಪ್ರಿಯ ನಟಿ ಲೀಲಾವತಿಯವರ ಪುತ್ರ ವಿನೋದ್ ರಾಜ್ ಅವರು 1987ರಲ್ಲಿ ಡ್ಯಾನ್ಸ್ ರಾಜ ಡ್ಯಾನ್ಸ್ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದರು. ಆ ಸಮಯದಲ್ಲಿ ಕರ್ನಾಟಕದ ಮೈಕಲ್ ಜಾಕ್ಸನ್ ಎಂದೇ ಹೆಸರುವಾಸಿಯಾಗಿದ್ದರು. ಆದರೆ ಕಾಲ ಕಳೆದಂತೆ ನಟನೆಯಿಂದ ದೂರ ಉಳಿದಿದ್ದಂತಹ ವಿನೋದ್ ರಾಜ್ ಅವರು ತಮ್ಮ ತಾಯಿಯೊಂದಿಗೆ ಫಾರ್ಮ್ ಹೌಸ್ನಲ್ಲಿ ಜೀವನ ನಡೆಸುತ್ತಿದ್ದಾರೆ.
ಇದೀಗ ಇದ್ದಕ್ಕಿದ್ದ ಹಾಗೆ ದಿಡೀರ್ ಎಂದು ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಅಷ್ಟಕ್ಕೂ ಸಿಹಿಸುದ್ದಿ ಆದರೂ ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಇತ್ತೀಚಿಗೆ ಕಿರುತೆರೆ ಲೋಕದಲ್ಲಿ ರಿಯಾಲಿಟಿ ಶೋಗಳ ಅಬ್ಬರ ಜಾಸ್ತಿಯಾಗಿದ್ದು, ಡ್ಯಾನ್ಸ್ ಮತ್ತು ಸಂಗೀತ ಕಾರ್ಯಕ್ರಮಗಳು ಬಹಳ ಮುಂಚೂಣಿಯಲ್ಲಿವೆ. ಆದರೆ ಡ್ಯಾನ್ಸ್ ಕಾರ್ಯಕ್ರಮದಲ್ಲಿ ನೃತ್ಯದಲ್ಲಿ ಗಂಧ-ಗಾಳಿಯೂ ಗೊತ್ತಿಲ್ಲದವರನ್ನು ಜಡ್ಜ್ ಆಗಿ ನೇಮಕ ಮಾಡಿರುವುದು ವೀಕ್ಷಕರಿಗೆ ಅಸಮಾಧಾನವಾಗಿದೆ. ಡ್ಯಾನ್ಸ್ ಕಾರ್ಯಕ್ರಮದಲ್ಲಿ ಯಾರು ಯಾರನ್ನೊ ತೀರ್ಪುಗಾರರಾಗಿ ಮಾಡುವ ಬದಲು ವಿನೋದ್ ರಾಜ್ ಅವರನ್ನು ಕೂರಿಸಿ ಎಂದು ವೀಕ್ಷಕರು ಪದೇಪದೇ ತಮ್ಮ ಧ್ವನಿಯನ್ನು ಹೇಳುತ್ತಲೇ ಇದ್ದರು ಮತ್ತು ವಾಹಿನಿಯ ಮುಖ್ಯಸ್ಥರ ಬಳಿ ಹೇಳಿಕೊಳ್ಳುತ್ತಿದ್ದರು.
ಆದರೆ ಇದ್ಯಾವುದನ್ನೂ ಲೆಕ್ಕಿಸದ ವಾಹಿನಿಯ ಮುಖ್ಯಸ್ಥರು ವಿನೋದ್ ರಾಜ್ ಅವರಿಗೆ ಅವಕಾಶವನ್ನು ನೀಡಿರಲಿಲ್ಲ. ಆದರೆ ಇದೀಗ ಕಿರುತೆರೆಯಲ್ಲಿ ಅವಕಾಶ ಸಿಗದೆ ಹೋದರು ಬೆಳ್ಳಿತೆರೆಯಲ್ಲಿ ಒಂದು ದೊಡ್ಡ ಆಫರ್ ಬಂದಿದೆ. ಹೌದು ಮುಖವಾಡ ಚಿತ್ರತಂಡ ತಮ್ಮ ಸಿನಿಮಾಗೆ ವಿನೋದ್ ರಾಜ್ ಅವರನ್ನು ಕರೆತರುವ ತಯಾರಿಯನ್ನು ನಡೆಸಿರುವ ಬಗ್ಗೆ ಜಾಲತಾಣಗಳಲ್ಲಿ ಸುದ್ದಿಯನ್ನು ಹರಿದಾಡುತ್ತಿದೆ. ಆದರೆ ವಿನೋದ್ ರಾಜ್ ಅವರು ಅದರ ಬಗ್ಗೆ ಸ್ಪಷ್ಟನೆಯನ್ನು ನೀಡಿಲ್ಲ ಇದೇ ವೇಳೆಯಲ್ಲಿ ವಿನೋದ್ ರಾಜ್ ಅವರು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಅಭಿಮಾನಿಗಳು ಖುಷಿ ಪಡುವುದರಲ್ಲಿ ಎರಡನೇ ಮಾತೇ ಇಲ್ಲ ಎಂದು ಹೇಳಬಹುದು. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.