ಕನ್ನಡದ ಮತ್ತೊಂದು ನಟಿಗೆ ಕರೋನಾ ಪಾಸಿಟಿವ್, ಯಾರು ಗೊತ್ತಾ ಆ ಫೇಮಸ್ ನಟಿ, ನೀವು ಊಹಿಸಿರೋದಲ್ಲ !!

9

ಸ್ನೇಹಿತರೆ, ಈ ಕರೋನ ಸೋಂಕಿನಿಂದ ಇಡೀ ಜಗತ್ತೇ ತತ್ತರಿಸಿಹೋಗಿದೆ. ತನ್ನ ಮೊದಲನೇ ಅಲೆಯ ನಂತರ ಜನರಿಗೆ ಸ್ವಲ್ಪ ಸಮಯ ಅವಕಾಶವನ್ನು ಕೊಟ್ಟಂತಹ ಕರೋನಾ ಮಹಾಮಾರಿ ಈಗ ಮತ್ತೆ ತನ್ನ ಎರಡನೇ ಕಡೆಯಿಂದ ದೊಡ್ಡ ಪರಿಣಾಮವನ್ನು ಬೀರುತ್ತಿದೆ. ಮಹಾಮಾರಿಯಿಂದಾಗಿ ಅದೆಷ್ಟೋ ಸಾವು-ನೋವುಗಳನ್ನು ನಮ್ಮ ಕಣ್ಮುಂದೆ ನೋಡಬೇಕಾಯಿತು.

ಆಕ್ಸಿಜನ್ ಬೆಡ್ ಸಿಗದೇ ಅದೆಷ್ಟೋ ಜನರು ತಮ್ಮ ಕೊನೆಯುಸಿರೆಳೆದರು. ಈ ಕರೋನ ವೈರಸ್ ಶ್ರೀಮಂತರು, ಬಡವರು, ಸೆಲೆಬ್ರೆಟಿಗಳು, ಸಾಮಾನ್ಯ ಜನರು ಎಂಬ ಯಾವ ಇತಿಮಿತಿಯ ಇಲ್ಲದೆ ಎಲ್ಲೆಡೆ ಹರಡಿ ತನ್ನ ಪ್ರಭಾವವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಿದೆ. ಈ ಕರೋನವೈರಸ್ಗೆ ನಮ್ಮ ಸ್ಯಾಂಡಲ್ವುಡ್ನ ಇಪ್ಪತ್ತಕ್ಕೂ ಹೆಚ್ಚು ಕಲಾವಿದರು ಸಾವನ್ನಪ್ಪಿದ್ದರು.

ಇನ್ನೂ ಅದೆಷ್ಟೋ ಕಲಾವಿದರಿಗೆ ಕರೋನ ವೈರಸ್ ಸೋಂಕು ದೃಢಪಟ್ಟಿದ್ದು, ವೈದ್ಯರ ಮಾರ್ಗಸೂಚಿಯನ್ನು ಪಾಲಿಸಿ ಗುಣಮುಖರಾಗಿದ್ದಾರೆ. ಇದೀಗ ಕನ್ನಡದ ಮತ್ತೊಂದು ನಟಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆ ಯಾರು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಕಿರಿಕ್ ಪಾರ್ಟಿಯಿಂದ ಸಿನಿರಂಗಕ್ಕೆ ಪ್ರವೇಶ ಮಾಡಿದಂತಹ ನಟಿ ಸಂಯುಕ್ತ ಹೆಗ್ಡೆ, ತಮ್ಮ ಅಮೋಘವಾದ ಮತ್ತು ಆಕ್ಟಿವ್ ನಟನೆಯಿಂದ ಅದೆಷ್ಟೋ ಪಡ್ಡೆಹುಡುಗರ ಮನಸ್ಸನ್ನು ಗೆದ್ದಿದ್ದರು. ಅಷ್ಟೇ ಅಲ್ಲದೆ ಕಾಲೇಜ್ ಕುಮಾರ ಸಿನಿಮಾದಲ್ಲೂ ಕೂಡ ನಾಯಕ ನಟಿಯಾಗಿ ಮಿಂಚುವ ಮೂಲಕ ಇನ್ನಷ್ಟು ಅಭಿಮಾನಿಗಳ ಹೃದಯ ಕದ್ದಿರು. ಇದೀಗ ಸಂಯುಕ್ತ ಹೆಗ್ಡೆ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದನ್ನು ಸ್ವತಃ ಸಂಯುಕ್ತ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

ಎಲ್ಲರಿಗೂ ಹಾಯ್ ಎಲ್ಲರೂ ಆರಾಮಾಗಿದ್ದೀರಾ ಎಂದು ಭಾವಿಸುತ್ತೇನೆ, ಇಂದು ನನಗೆ ಕರೋನವೈರಸ್ ಪಾಸಿಟಿವ್ ಬಂದಿದೆ ವೈದ್ಯರ ಸಲಹೆಯಂತೆ ಕ್ವಾರೆಂಟೈನ್ ಆಗಿದ್ದೇನೆ ನೀವು ಮನೆಯಲ್ಲೇ ಸುರಕ್ಷಿತವಾಗಿರಿ. ನನ್ನ ಪೋಷಕರಿಗೆ ಕೂಡ ಕೋವಿಡ್ ತಗುಲಿತ್ತು ಆದರೆ ಈಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

ಇದೀಗ ನನಗೂ ಕೂಡ ಕೋವಿಡ್ ಪಾಸಿಟಿವ್ ಬಂದಿದ್ದು, ವೈದ್ಯರ ಸಲಹೆಯಂತೆ ಮನೆಯಲ್ಲೇ ಐಸೋಲೆಟ್ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ ಹಾಗೂ ಆದಷ್ಟು ಬೇಗ ಈ ಕರೋನಾ ವಿರುದ್ಧ ಹೋರಾಡಿ ಗೆದ್ದು ಬರುತ್ತೇನೆ ಎಂದು ಸ್ವತಹ ಸಂಯುಕ್ತ ಹೆಗಡೆ ಅವರು ಇನ್ಸ್ಟಾಗ್ರಾಂನಲ್ಲಿ ಈ ಕುರಿತು ಮಾಹಿತಿಯನ್ನು ನೀಡಿದರು. ಜೊತೆಗೆ ಬಿಬಿಎಂಪಿ ಕಾರ್ಯವೈಖರಿಯ ಬಗ್ಗೆಯೂ ಕೂಡ ಬರೆದುಕೊಂಡಿದ್ದಾರೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ…