ಲಕ್ಷ ಲಕ್ಷ ಹಣ ಖರ್ಚು ಮಾಡಿ ಸೋನು ಪಟೇಲ್ ಅವರ ತಾಯಿಯನ್ನು ಉಳಿಸಿಕೊಟ್ಟ ಸುದೀಪ್..!
ಸ್ನೇಹಿತರೆ, ಅಭಿಮಾನಿ ಚಕ್ರವರ್ತಿ ಕಿಚ್ಚ ಸುದೀಪ ಕೊರೋನ ಕಾಲದಲ್ಲಿ ಪ್ರಸ್ತುತ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಸಂಕಷ್ಟದಲ್ಲಿರುವ ಸಾಕಷ್ಟು ಮಂದಿಗೆ ಸುದೀಪ್ ನೆರವಾಗುತ್ತಿದ್ದಾರೆ. ಇತ್ತೀಚಿಗಷ್ಟೇ ಕೊರೋನ ಸೋಂಕಿಗೆ ಬಲಿಯಾಗಿ ಪ್ರಾಣಕಳೆದುಕೊಂಡ ಚಾಮರಾಜನಗರದ ಮೃತ ಕುಟುಂಬಗಳಿಗೆ ಸಹಾಯ ಮಾಡಿದರು. ಈಗ ಬಿಗ್ ಬಾಸ್ ಸ್ಪರ್ಧಿ ಸೋನು ಪಾಟೀಲ್ರವರ ತಾಯಿಯ ಚಿಕಿತ್ಸೆಗೆ ಲಕ್ಷ ಲಕ್ಷ ಹಣ ನೀಡುವ ಮೂಲಕ ತಾಯಿಯ ಪ್ರಾಣವನ್ನು ಉಳಿಸಿಕೊಟ್ಟಿದ್ದಾರೆ. ಹೌದು ಈ ಕುರಿತು ಇನ್ನಷ್ಟು ಮಾಹಿತಿ ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಯಾವುದು ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಈ ಬಗ್ಗೆ ಸೋನು ಪಾಟೀಲ್ ಅವರೇ ಸ್ವತಹ ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ. ಕಣ್ಣೀರು ಹಾಕುತ್ತಲೇ ತನ್ನ ತಾಯಿಯ ಅನಾರೋಗ್ಯದ ಬಗ್ಗೆ ಮತ್ತು ಕಷ್ಟದಲ್ಲಿ ನೆರವಾದ ಸುದೀಪ್ ಅವರ ಬಗ್ಗೆ ಹೇಳಿದ್ದಾರೆ. ಸೋನು ಪಾಟೀಲ್ ಅವರ ತಾಯಿ ನಿಮೋನಿಯ ರೋಗದಿಂದ ಬಳಲುತ್ತಿದ್ದರು, ಆಕೆಯನ್ನು ಉಳಿಸುವ ಸಲುವಾಗಿ ಸೋನು ಪಾಟೀಲ್ ಆಸ್ಪತ್ರೆಯಲ್ಲಿ ಪರದಾಡುತ್ತಿದ್ದರು. ಕಳೆದ ಐದಾರು ದಿನಗಳ ಹಿಂದೆ ಸೋನು ಪಾಟೀಲ್ ಅವರ ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯ ಖರ್ಚಿಗೆ ಹಣವಿಲ್ಲದೆ ಕಂಡಕಂಡವರ ಬಳಿ ಸಹಾಯ ಕೇಳಿದರೂ ಯಾರೂ ಕೂಡ ಮುಂದೆ ಬಂದು ಸಹಾಯ ಮಾಡಲಿಲ್ಲ. ಕೊನೆಗೆ ಕಿಚ್ಚ ಸುದೀಪ್ ಹಣಕಾಸಿನ ನೆರವು ನೀಡಿದರು ಎಂದು ಪೂರ್ವಕವಾಗಿ ಈ ಬಗ್ಗೆ ವಿಡಿಯೋ ಮೂಲಕ ಹಂಚಿಕೊಳ್ಳಲು ಸೋನು ಪಟೇಲ್.
ನನ್ನ ತಾಯಿಯ ಚಿಕಿತ್ಸೆಗೆ ಲಕ್ಷ ಲಕ್ಷ ಹಣ ಬೇಕಿತ್ತು, ಕಂಡಕಂಡವರ ಬಳಿ ಕೇಳಿದೆ ಆದರೆ ಯಾರೂ ಕೂಡ ಹೆಲ್ಪ ಮಾಡಲಿಲ್ಲ. ಕೊನೆಗೆ ನನಗೆ ತೋಚಿದ್ದು ಸುದೀಪ್ ಸರ್, ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಸುದೀಪ್ ಅವರಿಗೆ ವಿಶೇಷ ಕಾಳಜಿ ಹಾಗಾಗಿ ನಾನು ಅವರ ಬಳಿ ಸಹಾಯ ಮಾಡುವಂತೆ ಕೋರಿಕೊಂಡೆ. ಯಾವುದೇ ಮಾತನಾಡದೆ ತಾಯಿ ಚಿಕಿತ್ಸೆಗೆ ಲಕ್ಷ ಲಕ್ಷ ಹಣ ಕಟ್ಟಿದ್ದಾರೆ ನಮ್ಮ ಬಳಿ ಒಂದು ರೂಪಾಯಿ ಕೂಡ ಖರ್ಚು ಮಾಡಿಸಲಿಲ್ಲ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಅಷ್ಟೇ ಅಲ್ಲದೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ತನ್ನ ತಾಯಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡು ವಿಶ್ವ ತಾಯಿಯಂದಿರ ದಿನಾಚರಣೆಗೆ ಶುಭಾಶಯಗಳನ್ನು ಸಹ ಕೋರಿದ್ದಾರೆ ಮತ್ತು ಕಷ್ಟದ ಸಮಯದಲ್ಲಿ ಸಹಾಯ ಹಸ್ತ ಚಾಚಿದಂತಹ ಸುದೀಪ್ ಅವರಿಗೆ ಮನಸ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ ಸೋನು ಪಾಟೀಲ್.