ಕೆಜಿಎಫ್ ಚಾಪ್ಟರ್ ಟು ಸಿನಿಮಾದ ಹೊಸ ರಿಲೀಸ್ ಡೇಟ್ ಹೊರಬಿದ್ದಿದೆ..?

6

ಸ್ನೇಹಿತರೆ, ಇವತ್ತಿನ ತಾಜಾ ಸುದ್ದಿ ಏನಪ್ಪಾ ಎಂದರೆ ಕೆಜಿಎಫ್ ಚಾಪ್ಟರ್ ಟು ಹೊಸ ರಿಲೀಸ್ ಡೇಟ್ ಅನೌನ್ಸ್ ಆಗುವ ಸಾಧ್ಯತೆ ಇದೆ. ನಾವೆಲ್ಲ ಈ ಸಿನಿಮಾಗೆ ಸಿಕ್ಕಾಪಟ್ಟೆ ವೈಟ್ ಮಾಡುತ್ತಿದ್ದೇವೂ, ಕಳೆದ ಬಾರಿಯ ಚಾಪ್ಟರ್ ವನ್ರಂತೆ ಚಾಪ್ಟರ್ ಟು ಮತ್ತೆ ಏನೆಲ್ಲ ರೆಕಾರ್ಡ್ಸ್ ಕ್ರಿಯೇಟ್ ಮಾಡುತ್ತೇ ಎಂದು ಎದುರುನೋಡುತ್ತಿದ್ದೀವಿ. ಜುಲೈ 16ರಂದು ವರ್ಲ್ಡ್ ವೈಡ್ ರಿಲೀಸ್ ಆಗಬೇಕಿದ್ದಂತಹ ಸಿನಿಮಾ ಕೆಜಿಎಫ್ ಚಾಪ್ಟರ್ ಟು. ಕೊರೋನ ಎರಡನೇ ಅಲೆಯಿಂದ ರಿಲೀಸ್ ಡೇಟ್ ಮುಂದೂಡಿದ್ದಾರೆ ಚಿತ್ರತಂಡ. ಅಲ್ಮೋಸ್ಟ್ 3 ಕೋಟಿ ಬಜೆಟ್ನಲ್ಲಿ ತಯಾರಾಗಿರುವ ಕೆಜಿಎಫ್ ಟು ಚಿತ್ರವನ್ನು ನೋಡುವುದಕ್ಕೆ ಬರಿ ಅಭಿಮಾನಿಗಳು ಮಾತ್ರವಲ್ಲದೆ ಎಲ್ಲಾ ಚಿತ್ರರಂಗಗಳು ಸಹ ಕಾಯುತ್ತಿದ್ದಾರೆ.

ಎಲ್ಲಾ ಇಂಡಸ್ಟ್ರಿಯಲ್ಲಿ ಒಮ್ಮೆಯಾದರೂ ಕೆಜಿಎಫ್ ಚಿತ್ರದ ಬಗ್ಗೆ ಮಾತನಾಡಿರುತ್ತಾರೆ ಇತ್ತೀಚಿಗಷ್ಟೇ ಅಲ್ಲು ಅರ್ಜುನ್ ಅವರ ಪುಷ್ಪ ಸಿನಿಮಾದ ಟೀಸರ್ ಲಾಂಚಿಂಗ್ ಸಮಯದಲ್ಲಿ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾದ ಕೆಜಿಎಫ್ ಸಿನಿಮಾದ ಬಗ್ಗೆ ಮಾತನಾಡಿದರು. ಇನ್ನು ನಮಗೆ ಈಗಾಗಲೇ ಗೊತ್ತಿರುವ ವಿಷಯ ಎಂದರೆ ಕೆಜಿಎಫ್ ಮಾತ್ರವಲ್ಲ ಮುಂಬರುವ ಎರಡು ತಿಂಗಳು ಯಾವುದೇ ಚಿತ್ರಗಳು ರಿಲೀಸ್ ಆಗುತ್ತಿಲ್ಲ. ಯಾಕೆಂದರೆ ಕೊರೋನ ಮಹಾಮಾರಿಯ ಆರ್ಭಟದಿಂದ ಜುಲೈನಲ್ಲಿ ಥಿಯೇಟರ್ ಓಪನ್ ಅವಕಾಶ ಕೊಟ್ಟರು, 50% ರಷ್ಟು ಮಾತ್ರ ಅನುಮತಿ ನೀಡುತ್ತಾರೆ. ಹೀಗಾಗಿ ಕೆಜಿಎಫ್ ಸಿನಿಮಾ ತನ್ನ ರಿಲೀಸ್ ಡೇಟ್ ಅನ್ನು ಮುಂದಕ್ಕೆ ಹಾಕಲೇಬೇಕು.

ಅಕಸ್ಮಾತ್ ಸಿನಿಮಾ ರಿಲೀಸಿಂಗ್ ಡೇಟ್ ಮುಂದಕ್ಕೆ ಹಾಕಿದರೂ, ಅಕ್ಟೋಬರ್ನಲ್ಲಿ ರಿಲೀಸ್ ಮಾಡಬಹುದು ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಅಷ್ಟೇ ಅಲ್ಲದೆ ಇದು ಬಹುತೇಕ ಪಾಲು ನಿಜ ಆಗುವ ಸಾಧ್ಯತೆ ಕೂಡ ಹೆಚ್ಚಿದೆ. ಯಾಕೆಂದರೆ ಆಗಸ್ಟ್ ತಿಂಗಳ ಒಳಗೆ ಕರೋನದ ಆರ್ಭಟ ಕಡಿಮೆಯಾಗುವ ಸೂಚನೆ ಇರುವುದರಿಂದ ಅಕ್ಟೋಬರ್ ತಿಂಗಳಲ್ಲಿ ಸಿನಿಮಾ ಕ್ಷೇತ್ರ ಮತ್ತೆ ಪುಟಿದೇಳುತ್ತದೆ. ಅಷ್ಟೇ ಅಲ್ಲದೆ ಈಗಾಗಲೇ ಆರ್ ಆರ್ ಆರ್ ಸಿನಿಮಾ ಅಕ್ಟೋಬರ್ನಲ್ಲಿ ರಿಲೀಸ್ ಮಾಡಲು ಚಿತ್ರತಂಡ ಸಿದ್ಧರಾಗಿದ್ದರು. ಆದರೆ ಚಿತ್ರೀಕರಣ ಮುಗಿಯದ ಕಾರಣ 2022 ರಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆಯಂತೆ. ಇದರಿಂದಾಗಿ ಅಕ್ಟೋಬರ್ನ ಬಿಗ್ ಅಂಡ್ ಬೆಸ್ಟ್ ಅವಕಾಶ ಇರುವುದರಿಂದ ಚಿತ್ರ ಹಿಟ್ ಆಗುವ ಎಲ್ಲ ಸಾಧ್ಯತೆ ಇದೆ ಹೀಗಾಗಿ ಚಿತ್ರತಂಡ ಅಕ್ಟೋಬರ್ ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತಾರೆ ಎಂಬ ಸುದ್ದಿ ಕೇಳಿಬರುತ್ತಿದೆ.