ಕನ್ನಡ ಚಿತ್ರದ ಬಗ್ಗೆ ಬಹಿರಂಗ ಪತ್ರ ಬರೆದ ನಟಿ ಮಾಲಾಶ್ರೀ, ಆ ಪತ್ರದಲ್ಲಿ ಏನಿತ್ತು ಎಂದು ಗೊತ್ತಾದರೆ ನಿಜಕ್ಕೂ ಹಾಕ್ತಿರಾ..!

12

ಸ್ನೇಹಿತರೆ, ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಕೋಟಿ ರಾಮು ಏಪ್ರಿಲ್ 20ರಂದು ಕೋರೋಣ ಸೋಂಕಿಗೆ ಬಲಿಯಾದರು. ರಾಮು ಅವರನ್ನು ಕಳೆದುಕೊಂಡ ನಟಿ ಮಾಲಾಶ್ರೀ ಮತ್ತು ಅವರ ಕುಟುಂಬ ದುಃಖದಲ್ಲಿ ಮುಳುಗಿದ್ದು,ರಾಮು ಅವರಿಲ್ಲದ ಜೀವನವನ್ನು ನಟಿ ಮಾಲಾಶ್ರೀಗೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೋವಿನಲ್ಲಿರುವ ನಟಿ ಮಾಲಾಶ್ರೀಗೆ ಕನ್ನಡ ಚಿತ್ರರಂಗದ ಅನೇಕರು ಧೈರ್ಯ ತುಂಬುತ್ತಿದ್ದಾರೆ. ಅಷ್ಟೇ ಅಲ್ಲದೆ ಭೇಟಿಯಾಗಿ ಮಾತನಾಡಿಸುತ್ತಿದ್ದಾರೆ, ಕಣ್ಣೀರನ್ನು ವರೆಸು ಳವಂತಹ ಸ್ಥಿತಿಯು ಇಲ್ಲವಲ್ಲ ಎಂದು ಅನೇಕರು ನಂದುಕೊಳ್ಳುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಅನೇಕರು ಸಾಮಾಜಿಕ ಜಾಲತಾಣದ ಮೂಲಕವೇ ಸಾಂತ್ವನವನ್ನು ಹೇಳುತ್ತಿದ್ದಾರೆ. ಇದೀಗ ನಟಿ ಮಾಲಾಶ್ರೀ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುವ ಮೂಲಕ ಭಾವಪೂರ್ವಕ ಪತ್ರವೊಂದನ್ನು ಬರೆದುಕೊಂಡಿದ್ದಾರೆ ಆ ಪತ್ರದಲ್ಲಿ ಏನಿತ್ತು? ಯಾರ ಕುರಿತು ಪತ್ರ ಬರೆದರು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಈ ಸಂಕಷ್ಟದ ಸಮಯದಲ್ಲಿ ಧೈರ್ಯ ತುಂಬಿ ಬೆಂಬಲವನ್ನು ತೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ನಟಿ ಮಾಲಾಶ್ರೀ ಹೃದಯಸ್ಪರ್ಶಿ ಪತ್ರವೊಂದನ್ನು ಹಂಚಿಕೊಂಡಿದ್ದಾರೆ‌. ‌ಹೌದು ಕಳೆದ 12 ದಿನಗಳು ನನಗೆ ನನ್ನ ಕುಟುಂಬಕ್ಕೆ ತುಂಬಾ ನೋವಿನಿಂದ ಕೂಡಿದೆ‌. ನನಗೆ ದಾರಿ ಕಾಣದಂತಾಗಿದೆ ಕೋಟಿ ರಾಮು ಅವರ ಅಗಲಿಕೆಯಿಂದ ನನ್ನ ಹೃದಯ ಚಿದ್ರವಾಗಿದೆ. ಅವರು ಯಾವಾಗಲೂ ನಮಗೆ ಬೆನ್ನೆಲುವಾಗಿದ್ದರೂ ಮತ್ತು ಸದಾ ಸಲಹೆಗಳನ್ನು ನೀಡುತ್ತಿದ್ದರು ಎಂದು ಪತ್ರದಲ್ಲಿ ಪ್ರೀತಿಯಿಂದ ತಿಳಿಸಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಇಡೀ ಚಿತ್ರರಂಗ ಪ್ರೀತಿ ಮತ್ತು ಬೆಂಬಲವನ್ನು ತೋರಿದೆ ಇದಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ. ಪ್ರಸ್ತುತ ಸಮಯದಲ್ಲಿ ಪ್ರೀತಿ, ಬೆಂಬಲ ತೋರಿದ ಪ್ರತಿಯೊಬ್ಬ ಸಿನಿಮಾ ಮಂದಿ, ಮಾಧ್ಯಮ ಕಲಾವಿದರು, ನಿರ್ಮಾಪಕರು, ತಂತ್ರಜ್ಞರು, ರಾಮು ಅಭಿಮಾನಿಗಳು, ಸ್ನೇಹಿತರು ಮತ್ತು ಹಿತೈಷಿಗಳಿಗೆ ಧನ್ಯವಾದ ಎಂದು ಮಾಲಾಶ್ರೀ ಬರೆದುಕೊಂಡಿದ್ದಾರೆ.

ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮನೆಯಲ್ಲಿ ಇರಿ ಸುರಕ್ಷಿತವಾಗಿರಿ. ನಿಮ್ಮ ಪ್ರೀತಿಪಾತ್ರರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ವಿನಂತಿಯನ್ನು ಮಾಡಿಕೊಂಡಿದ್ದಾರೆ. ಜೊತೆಗೆ ತಮ್ಮ ಪ್ರೀತಿಯ ಪತಿಯಾದ ಕೋಟಿ ರಾಮು ಅವರ ಚಿತ್ರವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ನಟಿ ಮಾಲಾಶ್ರೀ.