ಸ್ಯಾಂಡಲ್ವುಡ್ನ ಟಾಪ್ ಟೆನ್ ಡ್ಯಾನ್ಸರ್ ಯಾರ್ಯಾರು ಗೊತ್ತಾ ? ಅದರಲ್ಲಿ ನಂಬರ್ ಒನ್ ಇವರೇ ನೋಡಿ !!
ಸ್ನೇಹಿತರೆ, ಕಲೆಯ ಪವರೇ ಹಂಗೆ ಇದಕ್ಕೆ ವಯಸ್ಸಿನ ಹಂಗಿಲ್ಲ, ಬೇಧಭಾವವಿಲ್ಲ ಬಡವ-ಶ್ರೀಮಂತ ಎನ್ನುವಂತಹ ಯಾವುದೇ ಮೇಲು-ಕೀಳು ಇಲ್ಲ. ಕಲೆ ಇರುವ ಜಾಗದಲ್ಲಿ ನಾವಿದ್ದರೂ ಕೂಡ ನಮಗೆ ಗೊತ್ತಿಲ್ಲದ ಹಾಗೆ ಆ ಕಲೆಗೆ ರಿಯಾಕ್ಟ್ ಮಾಡುತ್ತಿರುತ್ತೇವೆ.ಅದೇ ರೀತಿ ನಮ್ಮ ಸ್ಯಾಂಡಲ್ವುಡ್ನಲ್ಲಿಯೂ ಕೂಡ ಸಕ್ಕತ್ತಾಗಿ ಸ್ಟೆಪ್ ಹಾಕುವ ಡ್ಯಾನ್ಸರುಗಳು ಇದ್ದಾರೆ. ಟಾಪ್ 10 ಅಲ್ಲಿರುವ ನಟ ಉಪೇಂದ್ರ ಅವರು ಸದಾ ಎಲ್ಲಿ ಹೋದರು ನನಗೆ ಡ್ಯಾನ್ಸ್ ಬರುವುದಿಲ್ಲ ಎನ್ನುತ್ತಾರೆ. ಅವರ ಚಿತ್ರಗಳಲ್ಲಿ ವಿಭಿನ್ನ ರೀತಿಯಲ್ಲಿ ಹಾಕುವಂತಹ ಸ್ಟೆಪ್ಸ್ ಮೂಲಕ ಹಲವಾರು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇವರ ಏ, ಶಿವಂ, ಸೂಪರ್, ಉಪೇಂದ್ರ, ಕುಟುಂಬ ಇನ್ನು ಅನೇಕ ಸಿನಿಮಾಗಳಲ್ಲಿ ತಮ್ಮದೇ ಆದ ಸಿಗ್ನೇಚರ್ ಸ್ಟೆಪ್ಸ್ ಹಾಗೂ ವಿಭಿನ್ನವಾದ ಕಾಸ್ಟ್ಯೂಮ್ಗಳಿಂದ ಅಭಿಮಾನಿಗಳ ಗಮನವನ್ನು ಸೆಳೆಯುತ್ತಲೇ ಇದ್ದಾರೆ.ನಂಬರ್ 9 ಶರಣ್, ನಮ್ಮನೆಲ್ಲ ನಗಿಸುವ ಮೂಲಕ ಹಲವು ಸಿನಿಮಾಗಳ ನಂತರ ಪೂರ್ಣ ಪ್ರಮಾಣದ ನಾಯಕನಾಗಿ ತರೆ ಮೇಲೆ ಬಂದಂತಹ ಶರಣ್ ಅವರು ಅಧ್ಯಕ್ಷ, ರಾಂಬೊ2, ರಾಜ್ ವಿಷ್ಣು ಹೀಗೆ ಅನೇಕ ಸಿನಿಮಾಗಳಲ್ಲಿ ತಮ್ಮ ಡ್ಯಾನ್ಸ್ ಪರ್ಫಾರ್ಮೆನ್ಸ್ ನೀಡಿದ್ದಾರೆ. ಇವರ ವಯಸ್ಸಿಗೆ ಇಷ್ಟೊಂದು ಎನರ್ಜಿ ಇರುವುದನ್ನು ನೋಡಿ ನಾವೆಲ್ಲರೂ ಮೆಚ್ಚಲೇಬೇಕು.
ನಂಬರ್ 8 ವಿಜಯ ರಾಘವೇಂದ್ರ ಚಿಕ್ಕ ವಯಸ್ಸಿನಿಂದಲೇ ನಮ್ಮನ್ನು ತಮ್ಮ ಡ್ಯಾನ್ಸ್ ಮೂಲಕ ರಂಜಿಸುತ್ತಿರುವ ಇವರು ಪರಶುರಾಮ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ರವರ ಜೊತೆಗೆ ಇವರ ಡ್ಯಾನ್ಸ್ ಟ್ಯಾಲೆಂಟ್ ಅನ್ನು ತೋರಿಸಿದರು. ಇವರು ಪೂರ್ಣ ಪ್ರಮಾಣದಲ್ಲಿ ನಾಯಕನಟನಾಗಿ ಮಿಂಚಿದ ನಂತರ ಇಂದಿಗೂ ಅದೇ ಎನರ್ಜಿಯಲ್ಲಿ ಪರ್ಫಾರ್ಮೆನ್ಸ್ ಅನ್ನು ನೀಡುತ್ತಿದ್ದಾರೆ. ಬೆಳ್ಳಿತೆರೆಯಲ್ಲದೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿಯೂ ಕೂಡ ಇಂದಿನ ಪೀಳಿಗೆಗೆ ಜಡ್ಜ್ ಮಾಡುತ್ತಾ ತಮ್ಮದೇ ಸ್ಟೈಲ್ನಲ್ಲಿ ಒಳ್ಳೆಯ ಸಲಹೆಗಳನ್ನು ಕೂಡ ಕೊಡುತ್ತಿದ್ದಾರೆ.
ನಂಬರ್ 7 ವಿರಾಟ್, ಕಿರುತೆರೆಯಲ್ಲಿ ಮಿಂಚಿದ ವಿರಾಟ್ ತಮ್ಮ ಚೊಚ್ಚಲ ಚಿತ್ರದಲ್ಲೇ ಸೆಂಚುರಿ ಬಾರಿಸಿದರು. ಅಷ್ಟೇ ಅಲ್ಲದೆ ತಮ್ಮ ಡ್ಯಾನ್ಸ್ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ನಂಬರ್ 6 ಲೂಸ್ ಮಾದ ಯೋಗ, ದುನಿಯಾ ಸಿನಿಮಾದಲ್ಲಿ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಂತಹ ಯೋಗಿ ಜಿಂಕೆ ಮರಿನಾ ಸಾಂಗ್ ಮೂಲಕ ಸಕ್ಕತ್ ಸ್ಟೆಪ್ ಹಾಕಿ ಎಲ್ಲರ ಮನಸ್ಸನ್ನು ಗೆದ್ದಿದ್ದರು. ತದನಂತರ ಅಂಬಾರಿ, ನಂದ ಲವ್ಸ್ ನಂದಿತಾ, ಡಾರ್ಲಿಂಗ್, ದೂಳ್ ಸಿನಿಮಾದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದರು.
ನಂಬರ್ 5 ಧ್ರುವ ಸರ್ಜಾ, ಅದ್ದೂರಿ ಸಿನಿಮಾದ ಮೂಲಕ ಭರ್ಜರಿಯಾಗಿ ಎಂಟ್ರಿಕೊಟ್ಟ ಇವರನ್ನು ಡೈಲಾಗ್ ಕಿಂಗ್ ಎಂದೇ ಹೇಳಬಹುದು. ಎಷ್ಟೇ ಲೆಂತಿ ಡೈಲಾಗ್ ಇದ್ದರೂ ಸಹ ಪಟ ಪಟ ಅಂತ ಹೇಳುವ ಇವರು ನೋಡಕ್ಕೆ ಬಾಡಿಬಿಲ್ಡರ್ ಆಗಿದ್ದರು ಯಾವುದೇ ಸ್ಟೆಪ್ಸ್ ಕೇಳಿದರೂ ಸೂಪರ್ ಅಂಡ್ ಫ್ಲೆಕ್ಸಿಬಲ್ ಆಗಿ ಮಾಡಿಬಿಡುತ್ತಾರೆ. ನಂಬರ್ 4 ಅನಿಷ್ ತೇಜೇಶ್ವರ್, 2010ರಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅನಿಶ್ ಪೂರ್ಣಪ್ರಮಾಣದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದು ಅಕಿರಾ ಸಿನಿಮಾದ ಮೂಲಕ. ನಟನೆಯ ಜೊತೆಗೆ ತಮ್ಮ ಅದ್ಭುತ ಡ್ಯಾನ್ಸ್ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದ ಅನಿಷ್ ತೇಜೇಶ್ವರ್ ಪುನೀತ್ ರಾಜಕುಮಾರ್ನಂತರ ಮತ್ತೊಬ್ಬ ಟ್ಯಾಲೆಂಟೆಡ್ ಡ್ಯಾನ್ಸರ್ ಅಂಡ್ ಆಕ್ಟರ್ ನಮ್ಮ ಕನ್ನಡ ಇಂಡಸ್ಟ್ರಿಗೆ ಬಂದಿದ್ದು ಪ್ಲಸ್ಪಾಯಿಂಟ್ ಎಂದೇ ಹೇಳಬಹುದು.
ನಂಬರ್ 3 ರಾಕಿಂಗ್ ಸ್ಟಾರ್ ಯಶ್, ಈಗಾಗಲೇ ಫ್ಯಾನ್ ಇಂಡಿಯಾದಲ್ಲಿ ತಮ್ಮ ಅದ್ಭುತ ಅಭಿನಯದಿಂದ ಅಭಿಮಾನಿ ಬಳಗವನ್ನು ಹೊಂದಿರುವ ರಾಕಿಂಗ್ ಸ್ಟಾರ್ ಯಶ್ ಒಂದು ಟ್ಯಾಲೆಂಟೆಡ್ ಡ್ಯಾನ್ಸರ್ ಕೂಡ ಹೌದು. ಅನೇಕ ಸಿನಿಮಾಗಳಲ್ಲಿ ತಮ್ಮ ವಿಭಿನ್ನ ಡ್ಯಾನ್ಸ್ ಸ್ಟೆಪ್ಸ್ಗಳಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ನಂಬರ್ 2 ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಇವರಲ್ಲಿ ಯಾವ ಕಲೆಯಿಲ್ಲ ಎಂದು ಹೇಳುವುದಕ್ಕೆ ಆಗುವುದಿಲ್ಲ. ಇವರು ಹಾಕುವ ಪ್ರತಿಯೊಂದು ಸ್ಟೆಪ್ ಕೂಡ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಇರುತ್ತದೆ. ಕಲೆಗೆ ವಯಸ್ಸು ಮುಖ್ಯ ಅಲ್ಲ ಎನ್ನುವುದು ಶಿವಣ್ಣನನ್ನು ನೋಡಿ ಹೇಳಬಹುದು ಎಷ್ಟೇ ವಯಸ್ಸಾಗಿದ್ದರೂ ಕೂಡ ಇವರು ಹಾಕುವ ಸ್ಟೆಪ್ಸ್ನಲ್ಲಿ ಕಿಂಚಿತ್ತು ಎನರ್ಜಿ ಕಡಿಮೆಯಾಗುವುದಿಲ್ಲ.
ನಂಬರ್ 1 ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಅಭಿಮಾನಿಗಳು ಇವರ ನಟನೆ ನೋಡಲು ಥಿಯೇಟರ್ಗೆ ಬಂದರೆ ಇನ್ನಷ್ಟು ಅಭಿಮಾನಿಗಳು ಇವರ ಡ್ಯಾನ್ಸ್ ನೋಡಲೆಂದು ಬರುತ್ತಾರೆ. ಇನ್ನು ಡ್ಯಾನ್ಸ್ ಅಪ್ಪು ಡ್ಯಾನ್ಸ್ ಹಾಡಿನಲ್ಲಿ ಅಚ್ಚರಿ ಮೂಡಿಸುವಂತಹ ಸ್ಟೆಪ್ಸ್ಗಳನ್ನು ಹಾಕುವುದರ ಮೂಲಕ ತಮ್ಮ ಅಭಿಮಾನಿಗಳು ಮನಸ್ಸನ್ನು ಗೆದ್ದಿದ್ದಾರೆ. ಇವೆಲ್ಲದರ ಜೊತೆಗೆ ಇವರು ಅಭಿನಯಿಸುವಂಥ ಪ್ರತಿ ಸಿನಿಮಾದಲ್ಲೂ ಕೂಡ ಹೊಸದಾದಂತಹ ಸ್ಟೆಪ್ಸ್ ಇದ್ದೇ ಇರುತ್ತದೆ…