ಸಲ್ಲು ಭಾಯ್ ಹಾದಿಯಲ್ಲೇ K3, ಸಲಗ, ಭಜರಂಗಿ 2 ಸಿನಿಮಾಗಳು ಓಟಿಟಿ ಸೇರುತ್ತವಾ ?? ಸಿನಿರಸಿಕರಿಗೆ ಸಿಹಿಸುದ್ದಿ !!
ಸ್ನೇಹಿತರೆ, ನಮ್ಮೆಲ್ಲರ ಲೈಫ್ ಮೇಲೆ ಹಾಗೂ ಸಿನಿಮಾ ಇಂಡಸ್ಟ್ರಿ ಮೇಲೆ ಕೊರೊನಾ ಕೊಟ್ಟಿರುವ ಹಾವಳಿ ಒಂದಷ್ಟು ಇದೆ. ಇದನ್ನು ಅರಗಿಸಿಕೊಳ್ಳುವುದಕ್ಕೆ ಇನ್ನೂ ಒಂದೆರಡು ವರ್ಷವಾದರೂ ಬೇಕು ಎನಿಸುತ್ತದೆ ಇದರ ಬೆನ್ನಲ್ಲೇ ಕರೋನಾ ಫಸ್ಟ್ ವೇವ್ ಆದಮೇಲೆ ಸುಧಾರಿಸಿಕೊಳ್ಳುವುದಕ್ಕೆ ಒಂದಿಷ್ಟು ದಿನ ಸಮಯ ಕೊಟ್ಟಿತ್ತು ಆ ಸಮಯದಲ್ಲಿ ದರ್ಶನ್ ಅವರ ರಾಬರ್ಟ್ ಸಿನಿಮಾ, ಧ್ರುವ ಸರ್ಜಾ ಅವರ ಪೊಗರು, ಪುನೀತ್ ರಾಜಕುಮಾರ್ ಅವರ ಯುವರತ್ನಗಳಂತಹ ಸಿನಿಮಾಗಳು ರಿಲೀಸ್ ಆಗಿ ಯಶಸ್ಸು ಕಂಡಿದ್ದವು. ಎಲ್ಲಾ ಸರಿ ಇದೆ ಎನ್ನುವಾಗ ರಿಲೀಸ್ ಆಗಬೇಕಿದ್ದ ಕೋಟಿಗೊಬ್ಬ ಥ್ರೀ, ಸಲಗ, ಭಜರಂಗಿ 2 ರಿಲೀಸ್ ಆಗುವುದಕ್ಕೆ ಆಗಲಿಲ್ಲ. ಇದಕ್ಕೆ ಮುಖ್ಯ ಕಾರಣ ಕೊರೋನಾದ ಎರಡನೆಯ ಅಲೆ ಬಂದು ಮತ್ತೆ ಕಾಟ ಕೊಡಲು ಶುರುಮಾಡಿದೆ.
ಸಲ್ಲು ಭಾಯ್ ಅವರ ರಾಧೆ ಸಿನಿಮಾದಂತೆ ನಮ್ಮ ಕನ್ನಡ ಚಿತ್ರಗಳು ಕೂಡ ಓಟಿಟಿಯಲ್ಲಿ ರಿಲೀಸ್ ಆಗುತ್ತಾ ಎನ್ನುವುದನ್ನು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಆಗಲೇ ಹೇಳಿದ ಹಾಗೆ ಕರುನಾಡಿನಲ್ಲಿ ಕೊರೋನಾದ ಎರಡನೆ ಅಲೆಯ ಹೊಡೆತ ಜೋರಾಗಿದೆ. ಅಷ್ಟೇ ಅಲ್ಲದೆ ಇದು ಇತ್ತೀಚಿಗೆ ರಿಲೀಸ್ ಆದ ಪುನೀತ್ ರಾಜಕುಮಾರ್ ಅವರ ಯುವರತ್ನ ಸಿನಿಮಾಕ್ಕೂ ತಟ್ಟಿತ್ತು. ಇದರಿಂದ ಬಚಾವ್ ಆಗುವುದಕ್ಕೆ ಯುವರತ್ನ ಸಿನಿಮಾವನ್ನು ಅಮೆಜಾನ್ ಪ್ರೈಮ್ನಲ್ಲಿ ಸೇಲ್ ಮಾಡಿದರು. ಇದನ್ನೆಲ್ಲ ತಲೆಯಲ್ಲಿಟ್ಟುಕೊಂಡು ಬಾಲಿವುಡ್ನ ಬಾದ್ ಷಾ ಸಲ್ಮಾನ್ ಖಾನ್ರವರು ತಮ್ಮ ರಾಧೆ ಚಿತ್ರವನ್ನು ಮೇ 13ಕ್ಕೆ ಫ್ಲೆಕ್ಸ್ ಓಟಿಟಿಯಲ್ಲಿ ರಿಲೀಸ್ ಮಾಡಲು ಮುಂದಾಗಿದ್ದಾರೆ.
ಆಡಿಯನ್ಸ್ ನಿಧಾನವಾಗಿಯಾದರೂ ಸಿನಿಮಾರಂಗದಲ್ಲಿ ಮೂಡುತ್ತಿರುವ ಇಂತಹ ಡೆವಲಪ್ಮೆಂಟ್ಗೆ ಅಡ್ಜಸ್ಟ್ ಆಗುತ್ತಾರೆ ಎಂಬ ನಂಬಿಕೆಯ ಚಿತ್ರತಂಡದ್ದು. ಪ್ರಭುದೇವ ಮತ್ತು ಸಲ್ಲು ಬಾಯ್ ಕಾಂಬಿನೇಷನ್ ಎಂದರೆ ಅದು ಪಕ್ಕಾ ಪೈಸಾ ವಸೂಲ್ ಕಮರ್ಷಿಯಲ್ ಸಿನಿಮಾ ಎನ್ನುವ ನಂಬಿಕೆಯನ್ನು ರಾಧೆ ಸಿನಿಮಾದ ಟೀಸರ್ ರಿಲೀಸ್ ಆಗಿ ಸಕ್ಕತ್ ಸದ್ದು ಮಾಡುವುದರ ಜೊತೆಗೆ ಪ್ರೂ ಮಾಡಿತ್ತು. ನಮ್ಮೆಲ್ಲರಿಗೂ ಥಿಯೇಟರ್ನಲ್ಲಿ ಸಿನಿಮಾವನ್ನು ನೋಡಿ ಎಂಜಾಯ್ ಮಾಡಬೇಕು ಎಂದು ಅನಿಸಿದರೂ ಕೂಡ ಕೊರೋನಾ ಸಂದರ್ಭದಲ್ಲಿ ಇಂತಹದ್ದನ್ನೆಲ್ಲ ಮಾಡುವುದು ಅಸಾಧ್ಯ. ಹೀಗಾಗಿ ಕನ್ನಡದಲ್ಲಿ ಕೂಡ ಚಿತ್ರೀಕರಣ ಮುಗಿಸಿ ರಿಲೀಸ್ ಆಗದೆ ಹಲವರು ಸಿನಿಮಾಗಳು ಹಾಗೆಯೇ ಉಳಿದುಕೊಂಡಿದೆ. ಅದರಲ್ಲೂ ಕೋಟಿಗೊಬ್ಬ ಥ್ರೀ ಸಿನಿಮಾ ಶುರುವಾಗಿ ಮೂರು ವರ್ಷಕ್ಕೂ ಹೆಚ್ಚಾಯಿತು. ಇದರಿಂದಾಗಿ ನಮ್ಮ ಕನ್ನಡ ಚಿತ್ರಗಳು ಕೂಡ ರಾಧೆ ಸಿನಿಮಾ ತಂಡದ ತರಹ ಓಟಿಟಿಯಲ್ಲಿ ರಿಲೀಸ್ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಇಂತಹ ಮೂರು ಅದ್ಭುತ ಸಿನಿಮಾಗಳು ಆನ್ಲೈನ್ ಮುಖಾಂತರ ರಿಲೀಸ್ ಆಗುತ್ತಾ? ಅಲ್ಲವಾ ಕಾದು ಕೊರೋನಾದ ಅಲೆ ಕಡಿಮೆಯಾದ ನಂತರ ಥಿಯೇಟರ್ಗಳಲ್ಲಿ ಪ್ರೇಕ್ಷಕರ ಮುಂದೆ ಬರುತ್ತವಾ ಎಂಬುದನ್ನು ಕಾದು ನೋಡಬೇಕಿದೆ…