ಬಿಗ್ ಬಾಸ್ ಎಂಟರ ನಂಬರ್1 ಶ್ರೀಮಂತ ಸ್ಪರ್ಧಿ ಯಾರು ಗೊತ್ತಾ ?? ಇವರು ಎಲ್ಲರಿಗಿಂತ ಶ್ರೀಮಂತರು !!

13

ಸ್ನೇಹಿತರೆ, ಬಿಗ್ ಬಾಸ್ ಸೀಸನ್ ಎಂಟರಲ್ಲಿ ನಟ-ನಟಿಯರು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಸ್ಪರ್ಧಿಗಳಿದ್ದಾರೆ. ಹಾಗಾದರೆ ಎಲ್ಲ ಸ್ಪರ್ಧಿಗಳು ಇಲ್ಲಿಯವರೆಗೂ ಎಷ್ಟು ಸಂಪಾದನೆ ಮಾಡಿದ್ದಾರೆ ಮತ್ತು ಬಿಗ್ ಬಾಸ್ ಸೀಸನ್ ಎಂಟರ ನಂಬರ್1 ಶ್ರೀಮಂತ ಸ್ಪರ್ಧೆ ಯಾರು ಎಂದು ತಿಳಿದುಕೊಳ್ಳಬೇಕಾದರೆ ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಟಿಕ್ ಟಾಕ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೆಸರು ಮಾಡಿದ್ದ ಶಮಂತ್ ಅಳಿಯಾಸ್ ಬ್ರೋ ಗೌಡರವರು ಇಲ್ಲಿಯವರೆಗೂ ಎಂಟರಿಂದ 10 ಲಕ್ಷ ಸಂಪಾದನೆ ಮಾಡಿದ್ದು ತಿಂಗಳಿಗೆ 35 ರಿಂದ 40 ಸಾವಿರ ಸಂಭಾವನೆಯನ್ನು ಪಡೆಯುತ್ತಾರೆ. ರಘು ಗೌಡ ಅವರು ತಮ್ಮದೇ ಆದ ರಘು ವೈನ್ ಸ್ಟೋರ್ ಎನ್ನುವ ಯೂಟ್ಯೂಬ್ ಚಾನೆಲ್ ಹೊಂದಿದ್ದು ವರ್ಷಕ್ಕೆ 15 ರಿಂದ 20 ಲಕ್ಷ ಸಂಪಾದನೆ ಮಾಡಿದ್ದಾರೆ ಹಾಗೂ ತಿಂಗಳಿಗೆ 50 ರಿಂದ 60 ಸಾವಿರ ಸಂಭಾವನೆ ಪಡೆಯುತ್ತಿದ್ದಾರೆ.

ಗಣಪ ಚಿತ್ರದ ನಟಿ ಪ್ರಿಯಾಂಕ ತಿಮ್ಮೇಶ್ರವರು ಸದ್ಯಕ್ಕೆ ಹಲವಾರು ಚಿತ್ರಗಳಲ್ಲಿ ನಟಿಸುತ್ತಿದ್ದು, 70 ರಿಂದ 80 ಲಕ್ಷ ಸಂಪಾದನೆ ಮಾಡಿದ್ದಾರೆ. ಬೈಕರ್ ಅರವಿಂದ್ ಕೆಪಿ ಅವರು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ಸುಮಾರು 40 ರಿಂದ 50 ಲಕ್ಷ ಸಂಪಾದಿಸಿದ್ದಾರೆ. ಪತ್ರಕರ್ತ ಹಾಗೂ ಸಮಾಜ ಸೇವಕ ಚಕ್ರವರ್ತಿ ಚಂದ್ರಚುಡ್ ಅವರು ಸಿನಿಮಾ ಕ್ಷೇತ್ರದಲ್ಲೂ ಕೂಡ ಸಕ್ರಿಯರಾಗಿದ್ದು, ಒಂದರಿಂದ ಎರಡು ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಹುಲಿರಾಯ ಖ್ಯಾತಿಯ ದಿವ್ಯ ಉರುಡುಗರವರು ಸಾಕಷ್ಟು ಸೀರಿಯಲ್ ಮತ್ತು ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ್ದು, 50 ರಿಂದ 60 ಲಕ್ಷ ಸಂಪಾದನೆ ಮಾಡಿದ್ದಾರೆ. ಸಾಮಾಜಿಕ ಹೋರಾಟಗಾರ ಮತ್ತು ತಮ್ಮದೇಯಾದ ಬಿಜಿನೆಸ್ ಹೊಂದಿರುವ ಪ್ರಶಾಂತ್ ಸಂಬರ್ಗಿ ಅವರು ಐದರಿಂದ ಆರು ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

ಕೆಪಿಎಲ್ ಆಟಗಾರ ಮತ್ತು ನಾಯಕ ನಟರಾಗಿರುವ ರಾಜೀವ್ ಅವರು ಸುಮಾರು ಎರಡರಿಂದ ಮೂರು ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಮಾಡೆಲ್ ಮತ್ತು ನಾಯಕಿಯಾಗಿ ಮಿಂಚುತ್ತಿರುವ ದಿವ್ಯ ಸುರೇಶ್ ಅವರು ಸೀರಿಯಲ್ ಹಾಗೂ ಕೆಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದು, ಸುಮಾರು ಒಂದು ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಮಜಾಭಾರತ ಕಾಮಿಡಿ ಶೋ ಮೂಲಕ ಹೆಸರು ಮಾಡಿರುವ ಮಂಜು ಪಾವಗಡ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದು, ದಾಸಪ್ಪ ಎನ್ನುವ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಸುಮಾರು 30 ರಿಂದ 40 ಲಕ್ಷ ಸಂಪಾದಿಸಿದ್ದಾರೆ.

ಸತತ ಹದಿನೇಳು ವರ್ಷಗಳಿಂದ ಚಿತ್ರರಂಗದಿಂದ ಸಕ್ರಿಯರಾಗಿರುವ ಶುಭಪುಂಜರವರು ಆರರಿಂದ ಏಳು ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಪಂಚರಂಗಿ ಬೆಡಗಿ ನಿಧಿ ಸುಬ್ಬಯ್ಯರವರು ಬಾಲಿವುಡ್ನಲ್ಲಿ ಕೂಡ ಮಿಂಚಿದ್ದೂ, ನಾಲ್ಕರಿಂದ ಐದು ಕೋಟಿ ಮೌಲ್ಯದ ಆಸ್ತಿಯನ್ನು ಸಂಪಾದಿಸಿದ್ದಾರೆ. ಹಲವಾರು ವರ್ಷಗಳ ಕಾಲ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿ ಕೆಲವು ಸಿನಿಮಾ ಮತ್ತು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದು ಸುಮಾರು ಎಂಟರಿಂದ 10 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ನಿಮ್ಮ ಪ್ರಕಾರ ಈ ಬಾರಿಯ ಯಾವ ಕಂಟೆಸ್ಟೆಂಟ್ ಸೀಸನ್ ಎಂಟರ ವಿನ್ನರ್ ಆಗುತ್ತಾರೆ ಎನ್ನುವುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ…