ಬಿಗ್ ಬಾಸ್ ಸೀಸನ್ ಎಂಟರ ಪ್ರಿಯಂಕ ತಿಮ್ಮೇಶ್ ರವರ ನಿಜವಾದ ವಯಸ್ಸೆಷ್ಟು ಗೊತ್ತ ?? ಯಪ್ಪಾ ಇಷ್ಟು ಚಿಕ್ಕವರ ??

19

ಸ್ನೇಹಿತರೆ ಬಿಗ್ ಬಾಸ್ ಸೀಸನ್ ಎಂಟರ ವೈಲ್ಡ್ ಕಾರ್ಡ್ ಎಂಟ್ರಿಯಾದ ಸ್ಪರ್ಧೆ ಪ್ರಿಯಂಕ ತಿಮ್ಮೇಶ್ ಅವರ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಜನರಲ್ಲಿ ಕುತೂಹಲವಿತ್ತು ಹಾಗೆಯೇ ನಿಮಗೂ ಕೂಡ ಪ್ರಿಯಾಂಕ ತಿಮ್ಮೇಶ್ರವರ ಹುಟ್ಟೂರು, ಅವರ ವಿದ್ಯಾಭ್ಯಾಸ, ಕುಟುಂಬ ಮತ್ತು ಲೈಫ್ ಸ್ಟೈಲ್ ಹೇಗಿದೆ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಪ್ರಿಯಾಂಕಾರವರ ಹುಟ್ಟೂರು ಭದ್ರಾವತಿ ಆದರೆ ಅವರು ಇರುವುದು ಬೆಂಗಳೂರಿನಲ್ಲಿ. ಇವರ ತಂದೆಯ ಹೆಸರು ತಿಮ್ಮೆಶ್ ಇವರೊಂದು ಬಿಸಿನೆಸ್ ಮ್ಯಾನ್ ಆಗಿದ್ದವರು ಇನ್ನು ಇವರ ತಾಯಿಯ ಹೆಸರು ಗಿರಿಜಾ ಇವರು ಹೌಸ್ವೈಫ್. ಮತ್ತು ಪ್ರಿಯಂಕ ತಿಮ್ಮೇಶ್ ಅವರಿಗೆ ಒಬ್ಬ ಬ್ರದರ್ ಕೂಡ ಇದ್ದಾರೆ ಅವರ ಹೆಸರು ಪ್ರೀತಮ್.

ಪ್ರಿಯಾಂಕ ತಮ್ಮ ಪ್ರೌಢ ಶಿಕ್ಷಣದವರೆಗೂ ಭದ್ರಾವತಿಯಲ್ಲಿ ಓದಿದ್ದರು ಸೈಂಟ್ ಹೈ ಸ್ಕೂಲ್ನಲ್ಲಿ. ಇದಾದ ನಂತರ ಇವರು ಡೈರೆಕ್ಟಾಗಿ ಡಿಪ್ಲೊಮಾವನ್ನು ಜಾಯಿನ್ ಆದರೂ ಕಂಪ್ಯೂಟರ್ ಸೈನ್ಸ್ ಎಂಬ ಟಾಪಿಕ್ನಲ್ಲಿ ಗವರ್ನ್ಮೆಂಟ್ ವುಮನ್ಸ್ ಪಾಲಿಟೆಕ್ನಿಕ್ ಕಾಲೇಜ್ ಶಿವಮೊಗ್ಗದಲ್ಲಿ. ಇದೆಲ್ಲದರ ನಡುವೆ ಪ್ರಿಯಾಂಕರವರಿಗೆ ಒಂದು ಸೀರಿಯಲ್ ನಲ್ಲಿ ನಟಿಸಲು ಅವಕಾಶ ಒದಗಿಬರುತ್ತದೆ. ಆ ಸೀರಿಯಲ್ನ ಹೆಸರು ಪ್ರೀತಿಯಿಂದ ಇದು 2011ರಲ್ಲಿ ಮೂಡಿಬಂದಿದ್ದು, ಅಲ್ಲಿಗೆ ನೋಡುವುದಾದರೆ ಇವರು ಕೇವಲ 16 ವರ್ಷವಿದ್ದಾಗಲೇ ಆಕ್ಟಿಂಗ್ ಫೀಲ್ಡಿಗೆ ಎಂಟ್ರಿ ಕೊಟ್ಟವರು. ಇವರು ಮಾಡಿದ್ದು ಒಂದೇ ಸೀರಿಯಲ್ ಅಲ್ಲದೆ ಇದು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು ಆ ಸೀರಿಯಲ್ ನಲ್ಲಿ ಇವರು ಗುಲಾಬಿ ಎನ್ನುವ ಕಾಶ್ಮೀರಿ ಗರ್ಲ್ ಪಾತ್ರದಲ್ಲಿ ಅಭಿನಯಿಸಿದ್ದರು.

ಇದಾದ ನಂತರ ಅವರು ಸಿನಿಮಾಗಳನ್ನು ನಟಿಸಲು ಶುರು ಮಾಡಿದರು 2015ರಲ್ಲಿ ಬಿಡುಗಡೆಯಾದ ಗಣಪ ಚಿತ್ರದಲ್ಲಿ ಬೃಂದಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡರು. ಆದರೆ ಈ ಸಿನಿಮಾದ ಶೂಟಿಂಗ್ ಶುರುವಾಗಿದ್ದು 2013ರಲ್ಲಿ ಇವರಿಗೆ 18 ವರ್ಷ ಇರುವಾಗಲೇ ಇವರು ಸಿನಿಮಾ ಸಹ ಮಾಡಿದ್ದರು. ನಿಮ್ಮೆಲ್ಲರಿಗೂ ತಿಳಿದ ಹಾಗೆ ಗಣಪ ಚಿತ್ರ ಸತ್ತಕ್ ಹಿಟ್ ಆಗುತ್ತದೆ ಹಾಗೆಯೇ ಬೇರೆಬೇರೆ ಸಿನಿಮಾಗಳ ಆಪರ್ಚುನಿಟಿ ಸಹ ಪ್ರಿಯಾಂಕರವರಿಗೆ ಒದಗಿಬರುತ್ತದೆ. ಇವರು ಕನ್ನಡ, ಮಲಯಾಳಂ ಹಾಗೆಯೇ ತಮಿಳು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಇವರ ಫೇವರೆಟ್ ಆಕ್ಟರ್ ದರ್ಶನ್ ಅವರಂತೆ ಹಾಗೆಯೇ ಇವರ ಫೇವರೆಟ್ ಆಕ್ಟ್ರೆಸ್ಸ್ ಸೌಂದರ್ಯರವರಂತೆ. ಇವರ ಫೇವರೆಟ್ ಸಾಂಗ್ ಅವರದೇ ಸಿನಿಮಾದ ಗಣಪಾದ ಮುದ್ದಾಗಿ ನೀನು ನನ್ನ ಕೂಗಿದೆ ಎನ್ನುವಂತಹ ಒಂದು ಸಾಂಗ್ ಅಂತೆ. ಇವರು ಹುಟ್ಟಿದ್ದು ಸೆಪ್ಟೆಂಬರ್ 4, 1996 ಮರಂದು ಅಲ್ಲಿಗೆ ಇವರಿಗೆ 24 ವರ್ಷ ವಯಸ್ಸಾಗಿದೆ. ಇದಿಷ್ಟು ಪ್ರಿಯಂಕ ತಿಮ್ಮೇಶ್ ರವರ ಬಗ್ಗೆ ಸಿಗುವಂತ ಕಿರು ಮಾಹಿತಿ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ…