ಕನ್ನಡ ಚಿತ್ರರಂಗದ ಟಾಪ್ ನಟಿ, ಸಾಧನೆಗಳ ಮೇಲೆ ಸಾಧನೆ ಮಾಡಿರುವ ರಚಿತಾ ರಾಮ್ ಎಷ್ಟು ಚಿಕ್ಕ ವಯಸ್ಸಿನವರು ಗೊತ್ತೇ?? ಯಪ್ಪಾ ಇಷ್ಟೊಂದಾ !!

28

ಸ್ನೇಹಿತರೆ, ರಚಿತರಾಮ್ ಕನ್ನಡದ ನಂಬರ್ ಒನ್ ನಟಿ ಎಂದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಷಯ. ಬುಲ್ ಬುಲ್ ಚಿತ್ರದಿಂದ ತಮ್ಮ ಸಿನಿ ಜೀವನ ಆರಂಭಿಸಿದವರು. ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ಗುಳಿಕೆನ್ನೆ ಬೆಡಗಿ ರಚಿತರಾಮ್. ಕನ್ನಡದ ಎಲ್ಲಾ ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿರುವ ರಚಿತರಾಮ್ 2013ರಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. 2013ರಲ್ಲಿ ತೆರೆಕಂಡ ಬುಲ್ ಬುಲ್ ಚಿತ್ರದ ಮೂಲಕ ನಾಯಕ ನಟಿಯಾಗಿ ಸ್ಯಾಂಡಲ್ವುಡ್ಗೆ ಪ್ರವೇಶಿಸಿದರು ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ರವರ ಅಂಬರೀಶ, ಗೋಲ್ಡನ್ ಸ್ಟಾರ್ ಗಣೇಶ್ರವರ ದಿಲ್ ರಂಗೀಲಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ರವರ ಜೊತೆ ರನ್ನ, ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರ ಜೊತೆ ರಥಾವರ, ಪುನೀತ್ ರಾಜಕುಮಾರ್ ಅವರ ಜೊತೆ ನಟಸಾರ್ವಭೌಮ, ಚಕ್ರವ್ಯೂಹ, ಇನ್ನು ನೀನಾಸಂ ಸತೀಶ್ ಅವ್ರ ಜೊತೆ ಅಯೋಗ್ಯ ಚಿತ್ರದಲ್ಲಿ ನಡೆಸುವುದರ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.

ಸುದೀಪ್ರವರ ಜೊತೆ ನಡೆಸಿದ ರನ್ನ ಚಿತ್ರಕ್ಕಾಗಿ ಸೈಮಾ ಉತ್ತಮ ನಟಿ ಪ್ರಶಸ್ತಿ ಮತ್ತು ಫಿಲಂಫೇರ್ ಸೌತ್ ಪ್ರಶಸ್ತಿ ಕೂಡ ಲಭಿಸಿದೆ. ಅಷ್ಟೇ ಅಲ್ಲದೆ ರಚಿತರಾಮ್ರವರು ರಿಯಾಲಿಟಿ ಶೋಗಳ ಬಗ್ಗೆ ಹೆಚ್ಚು ಆಕರ್ಷಿತರಾಗಿದ್ದು 2016ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಿಕ್ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತದನಂತರ ಕಾಮಿಡಿ ಟಾಕೀಸ್ ಮತ್ತು ಮಜಾಭಾರತ ಸೀಸನ್ 2ರ ತೀರ್ಪುಗಾರರಾಗಿ ಸಹ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಕಾಲೇಜು ದಿನಗಳಲ್ಲೇ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ಇವರ ವಯಸ್ಸು ಕೇಳಿದರೆ ನಿಮ್ಮೆಲ್ಲರಿಗೂ ನಿಜಕ್ಕೂ ಶಾಕ್ ಆಗುವುದಂತೂ ಖಂಡಿತ. ಹೌದು ಸ್ನೇಹಿತರೆ ಇವರು ಹುಟ್ಟಿದ್ದು 3 ಅಕ್ಟೋಬರ್ 1992 ಪ್ರಸ್ತುತ ಇವರಿಗೆ 28 ವರ್ಷ ವಯಸ್ಸು. ತಮ್ಮ ಗುಳಿಕೆನ್ನೆ ಇಂದಲೇ ಹಲವಾರು ಪಡ್ಡೆಹುಡುಗರ ಮನಸ್ಸನ್ನು ಗೆದ್ದಿರುವಂತಹ ರಚಿತರಾಮ್ರವರಿಗೆ ಇನ್ನಷ್ಟು ಒಳ್ಳೆಯ ಸಿನಿಮಾಗಳ ಅವಕಾಶ ಒದಗಿ ಬರಲಿ ಎಂದು ಹಾರೈಸೋಣ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ…