ವರದಕ್ಷಿಣೆಗಾಗಿ ದುಬಾರಿ ಬಿಎಂಡಬ್ಲ್ಯೂ ಕಾರನ್ನು ಪಡೆದ ಮದುಮಗ.. ಮದುಮಗಳು ಮಾಡಿದ ಕೆಲಸಕ್ಕೆ ಕಣ್ಣೀರಿಟ್ಟ..!
ಸ್ನೇಹಿತರೆ, ಮದುವೆಯ ವರದಕ್ಷಿಣೆಯಾಗಿ ಕಾರನ್ನು ಕೇಳಿದರು ಮದುಮಗನ ಕಡೆಯವರು ಮತ್ತು ದುಬಾರಿ ಕಾರನ್ನು ಕೊಟ್ಟು ಮದುವೆ ಮಾಡಿದರು ವಧುವಿನ ಕಡೆಯವರು. ಆದರೆ ಮದುವೆಯಾದ ಮರುದಿನವೇ ಸಾಕಪ್ಪಾ ಈ ಜೀವನ ಅಂತ ಕಣ್ಣೀರುಹಾಕಿದ ಮದುಮಗ. ಅಸಲಿಗೆ ಅಲ್ಲಿ ನಡೆದದ್ದೇನು ಗೊತ್ತಾ? ಸಾಮಾನ್ಯವಾಗಿ ಹಳೆ ಕಾಲದಿಂದಲೂ ಸಹ ಮದುವೆ ಸಂಭ್ರಮಗಳಲ್ಲಿ ಗಂಡು ಮಕ್ಕಳ ಕಡೆಯವರು ವರದಕ್ಷಿಣೆ ಕೇಳಿ ಪಡೆಯುತ್ತಾರೆ. ಇನ್ನು ಕೆಲವು ಕಡೆ ವರದಕ್ಷಣೆ ಕೇಳದಿದ್ದರೂ ಸಹ ಹೆಣ್ಣುಮಕ್ಕಳ ಕಡೆಯವರು ತಮ್ಮ ಕೈಲಾದ ಎಲ್ಲ ಕರ್ತವ್ಯವನ್ನು ಮಾಡಿಕೊಡುತ್ತಾರೆ. ಪ್ರತಿದಿನ ನ್ಯೂಸ್ ಪೇಪರ್ನಲ್ಲಿ ಅಥವಾ ಟಿವಿಗಳಲ್ಲಿ ಒಂದು ವರದಕ್ಷಿಣೆ ಕಿರುಕುಳಗಳನ್ನು ಕೇಳಿರುತ್ತೇವೆ.
ಈ ಘಟನೆ ನಡೆದಿರುವುದು ಮಹಾರಾಷ್ಟ್ರದಲ್ಲಿ ಸೂರಜ್ ಎಂಬ ವ್ಯಕ್ತಿ ಪ್ರಿಯ ಎಂಬ ಹುಡುಗಿಯನ್ನು ಮದುವೆಯಾಗುತ್ತಾನೆ ಹಾಗೂ ವರದಕ್ಷಿಣೆಗಾಗಿ ಐಷಾರಾಮಿ ಬಿಎಂಡಬ್ಲ್ಯೂ ಕಾರನ್ನು ಕೂಡ ಕೇಳಿರುತ್ತಾರೆ. ಅದನ್ನು ಹುಡುಗಿ ಕಡೆಯವರು ಕೂಡ ಕೊಟ್ಟು ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ಮರುದಿನವೇ ಹುಡುಗ ಮತ್ತು ಹುಡುಗಿ ಕಾರಿನಲ್ಲಿ ಓಡಾಡಲು ಹೋಗುತ್ತಾರೆ. ನಂತರ ಕಾರನ್ನು ಬಹಳ ವೇಗವಾಗಿ ಓಡಿಸುತ್ತಾನೆ ಅದನ್ನು ನೋಡಿದ ಪ್ರಿಯ ಸ್ವಲ್ಪ ನಿಧಾನವಾಗಿ ಓಡಿಸಿ ಎಂದಾಗ ಇಷ್ಟು ದಿನ ಸ್ನೇಹಿತರ ಕಾರುಗಳನ್ನು ಓಡಿಸಿ ಸಾಕಾಗಿದೆ ಇನ್ನಾದರೂ ನನ್ನ ಕಾರನ್ನು ನಾನು ಇಷ್ಟ ಬಂದಂಗೆ ಡ್ರೈವಿಂಗ್ ಮಾಡುವ ಯೋಗ್ಯತೆ ನನಗಿಲ್ವಾ? ಅಂತ ಕೇಳುವಷ್ಟರಲ್ಲಿ ಬಿಕ್ಷುಕರಿಗೆ ಇನ್ನೇನು ಗುದ್ದಲು ಹೋಗಿದ ಸಡನ್ನಾಗಿ ಬ್ರೇಕ್ ಹಾಕಿದ ಇದನ್ನು ನೋಡಿ ಬಿಕ್ಷುಕ ನೆಲಕ್ಕುರುಳಿದ ನಂತರ ಪ್ರಿಯ ಓಡಿಹೋಗಿ ಅವರನ್ನು ಕೂರಿಸಿ ಮಾತನಾಡಿದಳು.
ದಯವಿಟ್ಟು ಕ್ಷಮಿಸಿ ನಾವು ಹೊಸದಾಗಿ ಮದುವೆಯಾಗಿ ಮಾತನಾಡುತ್ತ ಮೈಮರೆತೆವು ಅಂತ ಹೇಳಿ ಕೈಗೆ 500 ರೂಪಾಯಿ ಕೊಟ್ಟು ಸಮಾಧಾನ ಮಾಡಿದಳು. ಆಗ ಸುರಜ್ ಅಲ್ಲಿಗೆ ಬಂದು ನಿಮ್ಮಂಥವರಿಂದ ಇಂತಹ ಬಿಕ್ಷುಕರು ತಲೆಯಮೇಲೆ ಕೂತುಕೊಳ್ಳುವುದು ಅವರಿಗೆ ಯಾಕೆ ಈ ಉಪಚಾರ ಎಂದನು. ಇದಕ್ಕೆ ಕೋಪಗೊಂಡ ಪ್ರಿಯಾ ಭಿಕ್ಷಕರು ಅವರಲ್ಲ ಬದಲಾಗಿ ಹುಡುಗಿಯ ತಂದೆ ಹತ್ತಿರ ಬಿಟ್ಟಿಯಾಗಿ ಅವರು ಕಷ್ಟದಿಂದ ದುಡಿದ್ದದನ್ನೆಲ್ಲ ವರದಕ್ಷಿಣೆ ಹೆಸರಿನಲ್ಲಿ ದೋಚಿಕೊಂಡು. ಈ ರೀತಿ ಶೋಕಿ ಮಾಡುವವರು ನೀವು ಬಿಕ್ಷುಕರು ಎಂದಳು ಆಗ ಸೂರಜ್ಗೆ ಈ ಮಾತನ್ನು ಕೇಳಿ ತಲೆಯ ಮೇಲೆ ಆಕಾಶವೇ ಬಿದ್ದಂತಾಯಿತು. ಇಷ್ಟಾದ ಮೇಲೆ ನಾನು ಇದ್ದರೂ ಒಂದೇ ಸತ್ತರೂ ಒಂದೇ ಎನ್ನುತ್ತಾರೆ ನಡುರಸ್ತೆಯಲ್ಲಿ ಅಳತೊಡಗಿದ. ಮರೆಯಾಗಲಿ ವರದಕ್ಷಣೆ ಪಡೆಯುವುದು ತಪ್ಪು ಕೊಡುವುದು ತಪ್ಪು ಎನ್ನುವುದು ನನ್ನ ಅಭಿಪ್ರಾಯ. ಇದರ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.