ಬಿಗ್ ಬಾಸ್ ಕಂಟೆಸ್ಟೆಂಟ್ ರಾಜೀವ್ ಅವರ ಹೆಂಡತಿ ಯಾರು ಗೊತ್ತಾ? ತುಂಬಾನೇ ಫೇಮಸ್..!

14

ಸ್ನೇಹಿತರೆ, ರಾಜೀವ್ ಅವರು ಬಿಗ್ ಬಾಸ್ ಮನೆಯಲ್ಲಿ ಎರಡನೇ ವಾರ ಕ್ಯಾಪ್ಟನ್ ಆಗಿದ್ದ ಸಮಯ ನಿಮಗೆಲ್ಲರಿಗೂ ಗೊತ್ತಿದೆ. ರಾಜೀವ್ ಅವರು ಮೊದಲ ವಾರದಿಂದಲೂ ಸಹ ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿ ಆಟವಾಡುತ್ತಾ ಬಂದಿದ್ದಾರೆ. ಹಾಗೆ ಇವರು ಸುಖಸುಮ್ಮನೆ ಯಾರ ಜೊತೆಯಲ್ಲೂ ಸಹ ಜಗಳವಾಡುವುದಿಲ್ಲ. ಇನ್ನು ಬಿಗ್ ಬಾಸ್ ಪ್ರಿಯರು ರಾಜೀವ್ ಅವರ ನಡತೆಯನ್ನು ನೋಡಿ ತುಂಬಾ ಇಷ್ಟ ಪಟ್ಟಿದ್ದು, ಅವರು ಬಿಗ್ ಬಾಸ್ ಕೊನೆಯವರೆಗೂ ಹೋಗಿ ಗೆಲ್ಲಲಿ ಎಂದು ತಮ್ಮ ಅಭಿಪ್ರಾಯಗಳನ್ನು ಸಹ ತಿಳಿಸುತ್ತಿದ್ದಾರೆ. ರಾಜೀವ್ರವರು ಸುಮಾರು ವರ್ಷಗಳ ಹಿಂದೆ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಾರೆ ಆದರೆ ಇವರು ಹಿಟ್ ಸಿನಿಮಾ ಕೊಡಲು ವಿಫಲರಾಗಿದ್ದರು.

ರಾಜೀವ್ ಅವರ ಹೆಂಡತಿ ಹೆಸರು ರೇಷ್ಮಾ ಇವರದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ 2019ರಲ್ಲಿ ರಾಜೀವ್ ಹಾಗೂ ರೇಷ್ಮಾ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾನೆ. ಇವರ ಮದುವೆ ಸಮಾರಂಭದಲ್ಲಿ ಕಿಚ್ಚ ಸುದೀಪ್ ಅವರು ಕೂಡ ಭಾಗವಹಿಸಿದ್ದರು. ಇನ್ನು ಸುದೀಪ್ ಅವರಿಗೆ ರಾಜೀವ್ ಒಬ್ಬ ಒಳ್ಳೆಯ ಸ್ನೇಹಿತ ಕೂಡ ಹೌದು. ರಾಜೀವ್ ಅವರಿಗೆ ಸುದೀಪ್ ಅವರೆಂದರೆ ತುಂಬಾ ಅಭಿಮಾನ ಮತ್ತು ಪ್ರೀತಿ ಇವರು ಒಟ್ಟಿಗೆ ಸಿಸಿಎಲ್ ಕೂಡ ಆಡಿದ್ದಾರೆ. ರಾಜೀವ್ ಅವರ ಪತ್ನಿ ಈಗ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ ಅಷ್ಟೇ ಅಲ್ಲದೆ ರಾಜೀವ್ ಅವರ ತಂದೆ ಪೊಲೀಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರಂತೆ. ರಾಜೀವ್ ಒಬ್ಬ ತಮ್ಮ ಕೂಡ ಇದ್ದಾನೆ ಇದು ರಾಜೀವ್ ಅವರ ಸುಂದರ ಕುಟುಂಬದ ಫೋಟೋಸ್ಗಳು.

ಯಾವಾಗ ರಾಜೀವ್ ಅವರಿಗೆ ಸಿನಿಮಾರಂಗದಲ್ಲಿ ಅವಕಾಶ ಬರಲು ಕಡಿಮೆಯಾಗಿತ್ತು ಹಾಗ ಅವರಿಗೆ ಕೈಹಿಡಿದಿದ್ದು ಸಿಸಿಎಲ್, ಹೌದು ನಟ ಸುದೀಪ್ ಅವರು ರಾಜೀವ್ ಅವರಿಗೆ ಸಿಸಿಎಲ್ ನಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿದ್ದರು. ಅದರಂತೆಯೇ ಸಿಸಿಎಲ್ ನಲ್ಲಿ ಭಾಗವಹಿಸಲು ರಾಜೀವ್ ಒಪ್ಪಿಕೊಂಡು ಕರ್ನಾಟಕ ಬುಲ್ಡೋಜರ್ಸ್ ಟೀಮ್ನಲ್ಲಿ ಟಾಪ್ ಕಾಂಪಿಟೇಟರ್ ಎಂದು ಹೆಸರು ಸಹ ಪಡೆದಿದ್ದಾರೆ. ಈಗ ಬಿಗ್ ಬಾಸ್ ಮನೆಗೆ ರಾಜೀವ್ ಅವರು ಬರಲು ಕಾರಣ, ಮತ್ತೆ ಸಿನಿಮಾರಂಗದಲ್ಲಿ ನಟಿಸುವ ಆಸೆ ಇರುವುದರಿಂದ. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ಹೆಸರು ಪಡೆದು ಮತ್ತೆ ಚಿತ್ರರಂಗಕ್ಕೆ ಕಾಲಿಡುವ ಕನಸನ್ನು ಕಟ್ಟಿದ್ದಾರೆ. ಇನ್ನು ರಾಜೀವ್ ಅವರು ಬಿಗ್ ಬಾಸ್ ಮನೆಯಲ್ಲಿ ಉಳಿಯುತ್ತಾರೋ ಅಥವಾ ಎಲಿಮಿನೇಟ್ ಆಗುತ್ತಾರೆ ಎಂಬ ನಿಮ್ಮ ಅಭಿಪ್ರಾಯವನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.