ಗರ್ಭಿಣಿ ಮಹಿಳೆಗೆ ಅಂಬುಲೆನ್ಸ್ ಡ್ರೈವರ್ ಮಾಡಿದ ಕೆಲಸ ಈಗ ಎಲ್ಲರೂ ತಿರುಗಿ ನೋಡುವಂತೆ ಮಾಡಿದೆ! ಹಾಗಾದರೆ ಅಂಬುಲೆನ್ಸ್ ಡ್ರೈವರ್ ಮಾಡಿದ ಕೆಲಸವಾದರೂ ಏನು ಗೊತ್ತಾ..?

10

ಸ್ನೇಹಿತರೆ, ನಾವು ರೋಡಿನ ಮೇಲೆ ಹೋಗುವಾಗ ತುಂಬಾ ಅನಾಹುತಗಳು ಆಗುತ್ತದೆ ಅಪಘಾತವಾದಾಗ ಅವರನ್ನು ಕಾಪಾಡುವುದಕ್ಕೆ ಯಾರು ತಾನೇ ಮುಂದೆ ಬರುತ್ತಾರೆ ಹೇಳಿ? ಬದಲಾಗಿ ವಿಡಿಯೋಗಳನ್ನು ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡೋದ್ರಲ್ಲೇ ಇರ್ತಾರೆ ನಮ್ಮ ಜನ. ಇದರ ಮಧ್ಯದಲ್ಲಿ ಓರ್ವ ಅಂಬುಲೆನ್ಸ್ ಡ್ರೈವರ್ ಮಾಡಿದ ಕೆಲಸ ಎಲ್ಲೆಡೆ ತುಂಬಾ ಸದ್ದು ಮಾಡುತ್ತಿದೆ. ಅಸಲಿಗೆ ಈ ಘಟನೆಯಲ್ಲಿ ನಡೆದಿದ್ದು ಎಲ್ಲಿ? ಅಂಬುಲೆನ್ಸ್ ಡ್ರೈವರ್ ಮಾಡಿದ ಕೆಲಸವಾದರೂ ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಯಾರಾದ್ರೂ ತೊಂದರೆಯಲ್ಲಿದ್ದಾಗ ಅಂಬುಲೆನ್ಸ್ಗೆ ಕರೆ ಮಾಡಿದರೆ ಅಲ್ಲಿಗೆ ಬಂದು ಸಹಾಯ ಮಾಡುತ್ತಾರೆ. ಅಪಘಾತ ನಡೆದ ಜಾಗಕ್ಕೆ ಹೋಗಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸುವಲ್ಲಿ ಆಂಬುಲೆನ್ಸ್ ಡ್ರೈವರ್ಗಳದ್ದೇ ಮೇಲುಗೈ. ಹಾಗೆಯೇ ಇಲ್ಲೊಬ್ಬ ಅಂಬುಲೆನ್ಸ್ ಡ್ರೈವರ್ ತನ್ನ ಪ್ರಾಣವನ್ನು ಲೆಕ್ಕಿಸದೆ ಓರ್ವ ಗರ್ಭಿಣಿಯ ಪ್ರಾಣವನ್ನು ಕಾಪಾಡಿದ್ದಾನೆ. ಈ ಘಟನೆ ನಡೆದಿರುವುದು ತಮಿಳುನಾಡಿನ ಸೇಲಂ ಜಿಲ್ಲೆಯ ಸೆಂಬೂರು ಎಂಬುವ ಗ್ರಾಮದಲ್ಲಿ. ಓರ್ವ ಮಹಿಳೆ ತುಂಬು ಗರ್ಭಿಣಿಯಂತೆ ಕೆಲಸವನ್ನು ಮುಗಿಸಿ ಮಲಗಿಕೊಂಡಳು ಆದರೆ ಮಧ್ಯರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಂಬುಲೆನ್ಸ್ಗೆ ಕರೆಮಾಡಿದಾಗ ಅಂಬುಲೆನ್ಸ್ ಬಂದು ಕರೆದುಕೊಂಡು ಹೋಯಿತು.

ದಾರಿಯಲ್ಲಿ ಸಡನ್ನಾಗಿ ಒಂದು ಲಾರಿ ಬಂದು ಆಂಬುಲೆನ್ಸ್ಗೆ ಡಿಕ್ಕಿ ಹೊಡೆಯಿತು ಆಸ್ಪತ್ರೆಯೂ ಕೂಡ ಇನ್ನು ಸ್ವಲ್ಪ ದೂರದಲ್ಲಿತ್ತು. ಆದರೆ ಗಾಯಗೊಂಡ ಡ್ರೈವರ್ ತನ್ನ ಜೀವವನ್ನು ಲೆಕ್ಕಿಸದೆ ಮಹಿಳೆಯನ್ನು ಕೈಯಲ್ಲಿ ಎತ್ತಿಕೊಂಡು ಸ್ವಲ್ಪ ನಡೆದು ಹತ್ತಿರದಲ್ಲೇ ಇದ್ದ ಆಸ್ಪತ್ರೆಗೆ ಸೇರಿಸಿದ ಇದಾದ ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಯ ಡಾಕ್ಟರ್ ಬಂದು ಸರಿಯಾದ ಸಮಯಕ್ಕೆ ನೀವು ಬಂದು ಸೇರಿಸಿದ್ದಕ್ಕೆ ಮಗು ಮತ್ತು ತಾಯಿ ಆರೋಗ್ಯವಾಗಿ ಇದ್ದಾರೆ ಎಂದರು. ಅಂತಹ ರಾತ್ರಿಯ ಸಮಯದಲ್ಲಿ ತನ್ನ ಗಾಡಿ ಹಾಳಾಗಿದ್ದರೂ ಸಹಾ ಅದನ್ನು ಲೆಕ್ಕಿಸದೆ ತನ್ನ ಜೀವವನ್ನು ಒತ್ತೆ ಇಟ್ಟು ಆಸ್ಪತ್ರೆಗೆ ಸೇರಿಸಿದ ಅಂತಹ ಆ ಅಂಬುಲೆನ್ಸ್ ಡ್ರೈವರ್ಗೆ ಒಂದು ಹ್ಯಾಟ್ಸಾಫ್ ಹೇಳಲೇಬೇಕು. ಈ ಮೂಲಕ ಆ ಅಂಬುಲೆನ್ಸ್ ಡ್ರೈವರ್ ತನ್ನ ಮಾನವೀಯತೆಯನ್ನು ಎತ್ತಿ ಮೆರೆದಿದ್ದಾರೆ. ಈ ಘಟನೆಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.