ನಟಿ ಸುಧಾರಾಣಿಯವರು ಎಷ್ಟು ಮದುವೆಯಾಗಿದ್ದಾರೆ ಗೊತ್ತಾ..!

8

ಸ್ನೇಹಿತರೆ, ಕನ್ನಡದ ಹಲವಾರು ನಟಿಯರು ನಟನೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.ಇಂದಿಗೂ ಕೂಡ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಹಾಗೂ ಹಲವಾರು ನಟಿಯರ ಹೆಸರು ಹೇಳಿದರೆ ಸಾಕು ಅವರು ಅಭಿನಯಿಸಿದ ಚಿತ್ರಗಳು ಹಾಗೂ ಅವರ ಅಭಿನಯವು ಕಣ್ಣಮುಂದೆ ಕಟ್ಟಿ ಹಾಕಿದಂತೆ ಕಾಣಿಸತೊಡಗುತ್ತದೆ. ಅಂತಹ ನಟಿಯರಲ್ಲಿ ಸುಧಾರಣೆ ಕೂಡ ಒಬ್ಬರು. ಸುಧಾರಾಣಿ ಅವರು ಅಂದು ಅಷ್ಟೇ ಸುಂದರವಾಗಿರಲಿಲ್ಲ ಇಂದಿಗೂ ಕೂಡ ಅಷ್ಟೇ ಸುಂದರವಾಗಿದ್ದಾರೆ ತಮ್ಮ ಸೌಂದರ್ಯವನ್ನು ಅಂದಿನಂತೆಯೇ ಕಾಪಾಡಿಕೊಂಡಿದ್ದಾರೆ.

ಸುಧಾರಾಣಿ ಅವರು 1973 ಆಗಸ್ಟ್ 14ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು ಚಿ. ಉದಯಶಂಕರ್ ಹಾಗೂ ಚಿ.ಗುರು ದತ್ತ ಅವರ ಕುಟುಂಬಕ್ಕೆ ಸಂಬಂಧಪಟ್ಟವರಾಗಿದ್ದಾರೆ. ಇವರು ತಮ್ಮ ಮೂರನೇ ವಯಸ್ಸಿನಲ್ಲಿಯೇ ಪ್ರಿಂಟ್ ಅಡ್ಸ್ಗೆ ಮಾಡೆಲ್ ಆದವರು ನಂತರ ಐದನೇ ವಯಸ್ಸಿನಲ್ಲೇ ನೃತ್ಯ ತರಬೇತಿಗೆ ಸೇರಿ ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯ ಕಲಿತರು. ಇವರು ಬಾಲ್ಯದಲ್ಲಿಯೇ ೧೯೭೮ ರಲ್ಲಿ ಕಿಲಾಡಿ ಕಿಟ್ಟು ಎಂಬ ಚಿತ್ರದಲ್ಲಿ ನಟಿಸಿದರು. ಅನೇಕ ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸುವ ಅವಕಾಶವೂ ಸಿಕ್ಕಿತ್ತು.

ಸುಧಾರಾಣಿ ಅವರು ಮೊದಲು ಪೂರ್ಣ ಪ್ರಮಾಣದ ನಟಿಯಾಗಿ ಅಭಿನಯಿಸಿದ್ದು ಶಿವರಾಜ್ ಕುಮಾರ್ ಅವರ ಮೊದಲ ಸಿನಿಮಾ ಆನಂದ ಎಂಬ ಸಿನಿಮಾದಲ್ಲಿ ನಂತರ ಅವಕಾಶಗಳ ಮೇಲೆ ಅವಕಾಶಗಳ ಸುರಿಮಳೆ ದೊರಕಿ ರಣರಂಗ, ಪಂಚಮವೇದ, ಮೈಸೂರು ಮಲ್ಲಿಗೆ, ಮನೆದೇವರು, ಮಣ್ಣಿನ ದೋಣಿ ಮುಂತಾದ ಹತ್ತು ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. 2000ರಲ್ಲಿ ಕಿಚ್ಚ ಸುದೀಪ್ ಅವರೊಂದಿಗೆ ಸ್ಪರ್ಶ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಸುಧಾರಾಣಿ ಅವರು ರಾಜಕುಮಾರ್ ಅವರೊಂದಿಗೆ ದೇವತಾ ಮನುಷ್ಯ ಎಂಬ ಚಿತ್ರದಲ್ಲಿ ರಾಜಕುಮಾರ್ ಅವರ ಮಗಳಾಗಿ ಪಾತ್ರ ನಿರ್ವಹಿಸಿದರು.

ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಸ್ಸನ್ನು ಗೆದ್ದರು. ಇವರು ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು, ತುಳು ಮತ್ತು ಮಲೆಯಾಳಂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇವರಿಗೆ ಪಂಚಮವೇದ ಹಾಗೂ ಮೈಸೂರು ಮಲ್ಲಿಗೆಯ ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಫಿಲಂ ಅವರ್ಡ್ ಫಾರ್ ಬೆಸ್ಟ್ ಆಕ್ಟರ್ ಪ್ರಶಸ್ತಿ ಕೂಡ ಲಭಿಸಿದೆ. ಮತ್ತು 2015ರಲ್ಲಿ ನಟಿಸಿದ ವಾಸ್ತು ಪ್ರಕಾರ ಚಿತ್ರಕ್ಕಾಗಿ ಬೆಸ್ಟ ಸಪೋರ್ಟ್ ಆಕ್ಟರ್ ಪ್ರಶಸ್ತಿ ಕೂಡಗಳಿಸಿದ್ದಾರೆ. ಹಾಗೂ ಇಂದಿಗೂ ಸಹ ಅವರಿಗೆ ಸಿಕ್ಕುವ ಉತ್ತಮ ಪಾತ್ರಗಳಲ್ಲಿ ಅಭಿನಯಿಸಲು ಸದಾ ಸಿದ್ಧಾರಿರುತ್ತಾರೆ.

ಇನ್ನು ಇವರ ವೈಯಕ್ತಿಕ ಜೀವನಕ್ಕೆ ಬಂದರೆ ಇವರಿಬ್ಬರನ್ನು ಮದುವೆಯಾಗಿದ್ದು ಅಚ್ಚರಿಯನ್ನುಂಟು ಮಾಡುವ ವಿಚಾರ. ಇವರು ಮೊದಲು ಅನಸ್ತೇಶಿಯ ತಜ್ಞ ಸಂಜಯ ಅವರನ್ನು ಮದುವೆಯಾದರು ಆದರೆ ತದನಂತರ ಕಾರಣಾಂತರಗಳಿಂದ ವಿಚ್ಛೇದನ ಪಡೆದರು. ನಂತರ 2000ರಲ್ಲಿ ಗೋವರ್ಧನ ಎಂಬುವವರನ್ನು ಮದುವೆಯಾದರು ನಂತರ 2001 ಇವರಿಗೆ ಮಗಳು ಹುಟ್ಟಿದ್ದು, ಅವಳಿಗೆ ನಿಧಿ ಎಂಬ ಹೆಸರಿಟ್ಟರು ಈಗ ಇವರ ದಾಂಪತ್ಯ ಜೀವನ ಸುಗಮವಾಗಿ ಆನಂದದಿಂದ ಸಾಗುತ್ತಿದೆ.