ಮಜಾ ಟಾಕೀಸ್ನವೊಂದು ಎಪಿಸೋಡಿಗೆ ಸೃಜನ್ ಲೋಕೇಶ್ ಹಾಗೂ ಕುರಿ ಪ್ರತಾಪ್ ಪಡೆಯುವ ಸಂಭಾವನೆ ಎಷ್ಟು ಗೊತ್ತಾ? ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ..!

15

ಸ್ನೇಹಿತರೆ, ಕನ್ನಡ ಕಿರುತೆರೆಯ ಹಲವಾರು ವಿವಿಧ ರೀತಿಯ ಸಂಗೀತ ರಿಯಾಲಿಟಿ ಶೋಗಳು, ಡ್ಯಾನ್ಸ್ ರಿಯಾಲಿಟಿ ಶೋಗಳು, ಕಾಮಿಡಿ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿದೆ. ಈ ರಿಯಾಲಿಟಿ ಶೋಗಳು ಜನರಿಗೆ ಮನರಂಜನೆ ನೀಡುವುದರ ಮೂಲಕ ಮನಸ್ಸಿನಲ್ಲಿ ಹೊಸ ಹುಮ್ಮಸ್ಸನ್ನು ತುಂಬಿಸುತ್ತವೆ. ಇನ್ನು ಇಂತಹಾ ಕಾಮಿಡಿ ರಿಯಾಲಿಟಿ ಶೋಗಳಲ್ಲಿ ಮಜಾ ಟಾಕೀಸ್ ಕೂಡ ಒಂದು ಮಜಾ ಟಾಕೀಸ್ ರಿಯಾಲಿಟಿ ಶೋ ಕನ್ನಡಿಗರನ್ನು ನಕ್ಕುನಗಿಸುವಂತಹ ಕಾರ್ಯಕ್ರಮವಾಗಿದೆ. ಇದೀಗ ಈ ಕಾರ್ಯಕ್ರಮವು ಕರ್ನಾಟಕದಾದ್ಯಂತ ಜನರ ಮೆಚ್ಚುಗೆಯನ್ನು ಹಾಗೂ ಪ್ರೀತಿಯನ್ನು ಗಳಿಸಿಕೊಂಡಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಸಾಕಷ್ಟು ಹಾಸ್ಯ ನಟರು ಹಲವಾರು ರೀತಿಯ ಪಾತ್ರಗಳನ್ನು ಮಾಡುತ್ತ ಜನರನ್ನು ನಗಿಸುತ್ತಿದ್ದಾರೆ.

ಅಂತಹ ಹಾಸ್ಯಸ್ಪದ ನಟನೆಯೂ ಕೂಡ ಜನರಿಗೆ ಬಹಳ ಇಷ್ಟವಾಗಿದ್ದು, ನಟ ಸುಜನ್ ಲೋಕೇಶ್ರವರ ನಿರೂಪಣೆ ಮತ್ತು ಕುರಿ ಪ್ರತಾಪರವರ ಕಾಮಿಡಿ ಪಾತ್ರಗಳು ಕನ್ನಡಿಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೌದು ನಟ ಸೃಜನ್ ಲೋಕೇಶ್ ಅವರು ಮಜಾ ಟಾಕೀಸ್ ರಿಯಾಲಿಟಿ ಶೋನ ನಿರೂಪಕರಾಗಿ ಮತ್ತು ನಿರ್ಮಾಪಕರಾಗಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಬರುವ ಬೇರೆಬೇರೆ ಪಾತ್ರದವರೆಗೆ ಇವರು ಕೀಟಲೆ ಮಾಡುತ್ತಾ ಮನೋರಂಜನೆಯ ಮಜಾವನ್ನು ನೀಡುತ್ತಿದ್ದಾರೆ. ಈ ರಿಯಾಲಿಟಿ ಶೋನ ಕುರಿಪ್ರತಾಪ್ ಸಕ್ಕತ್ತಾಗಿ ಕಾಮಿಡಿ ಮಾಡುವುದರ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ ಎಂದು ಹೇಳಬಹುದು. ರಿಯಾಲಿಟಿ ಶೋಗಳಲ್ಲಿ ಮಾತ್ರವಲ್ಲದೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಕುರಿ ಪ್ರತಾಪ್ ಅವರು ತಮ್ಮ ಪಂಚಿಂಗ್ ಡೈಲಾಗ್ ಮೂಲಕವೇ ಸಾಕಷ್ಟು ಫೇಮಸ್ ಆಗಿದ್ದು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ಹೇಳಬಹುದು. ಮಜಾ ಟಾಕೀಸ್ ಜನರಿಗೆ ಮನರಂಜನೆ ನೀಡುವುದರ ಮೂಲಕ ತನ್ನ ಟಿಆರ್ಪಿಯಲ್ಲಿ ಕೂಡ ಮೊದಲಿಗಿಂತಲೂ ಉತ್ತಮ ಸಾಧನೆ ಮಾಡುತ್ತಿದೆ. ಇನ್ನು ಈ ಕಾರ್ಯಕ್ರಮದ ಮೂಲಕ ಸಾಕಷ್ಟು ಹೊಸ ಕಲಾವಿದರು ಕೂಡಾ ಸಿನಿರಂಗಕ್ಕೆ ಅಷ್ಟೇ ಅಲ್ಲದೆ ಹೊರ ಜಗತ್ತಿಗೆ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮವು ಹಾಸ್ಯನಟನಿಗೆ ಬದುಕಲು ದಾರಿ ಮಾಡಿಕೊಟ್ಟಿದೆ ಎಂದು ಹೇಳಿದರೆ ತಪ್ಪಾಗಲಾರದು. ಇನ್ನು ನಿರೂಪಕ ಹಾಗೂ ನಿರ್ಮಾಪಕರಾಗಿರುವ ಸುಜನ್ ಲೋಕೇಶ್ ಅವರ ಮಜಾ ಟಾಕೀಸ್ನ ಒಂದು ಎಪಿಸೋಡ್ಗೆ ಸುಮಾರು 70 ರಿಂದ 75 ಸಾವಿರ ರೂಪಾಯಿಗಳನ್ನು ಸಂಭಾವನೆ ಪಡೆಯುತ್ತಾರೆ.ಅದೇ ರೀತಿ ಕುರಿ ಪ್ರತಾಪ್ ಅವರು ಮಜಾ ಟಾಕೀಸ್ನ ಒಂದು ಎಪಿಸೋಡಿಗೆ ಸುಮಾರು ಐವತ್ತು ಸಾವಿರ ರೂಪಾಯಿಯನ್ನು ಸಂಭಾವನೆಯಾಗಿ ಪಡೆಯುತ್ತಾರೆ. ಮಜಾ ಟಾಕೀಸ್ನಲ್ಲಿ ಬರುವಂತಹ ನಿಮ್ಮ ನೆಚ್ಚಿನ ಕಾಮಿಡಿ ನಟ ನಟಿಯರು ಯಾರು ಎಂಬುದನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.