ಬಿಗ್ ಬಾಸ್ ಮನೆಯಿಂದ ಹೊರಬಂದ ಚಿಕ್ಕವಯಸ್ಸಿನ ವಿಶ್ವನಾಥ್ಗೆ ಸಿಕ್ಕ ಸಂಭಾವನೆ ಎಷ್ಟು ಎಂದು ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ..!

16

ಸ್ನೇಹಿತರೆ, ಸದ್ಯ ಕನ್ನಡ ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅತಿ ದೊಡ್ಡ ಹಾಗೂ ಜನಪ್ರಿಯ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಹೌದು ಬಿಗ್ ಬಾಸ್ ಸೀಸನ್ ಎಂಟರ ಅತ್ಯಂತ ಕಿರಿಯ ಸ್ಪರ್ಧಿಯಾಗಿ ಮನೆಯೊಳಗೆ ಹೋದವರು ಗಾಯಕ ವಿಶ್ವನಾಥ್ ಆರಂಭದ ದಿನಗಳಲ್ಲಿ ಸ್ವಲ್ಪ ಹೆದರಿ ನಂತರದ ದಿನಗಳು ಆಟವನ್ನು ಬಹಳ ಚೆನ್ನಾಗಿ ಆಡುತ್ತಿದ್ದರು. ಈ ವಾರ ಮಾತ್ರ ಅವರು ಹಿಂದೆ ಸರಿದಿದ್ದು ಇದೇ ಕಾರಣದಿಂದಾಗಿ ಅವರು ಮನೆಯಿಂದ ಹೊರ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ವಿಶ್ವನಾಥ್ ಅವರು ಕ್ಯಾಪ್ಟನ್ ಆದ ದಿನವನ್ನು ಹೊರತುಪಡಿಸಿದರೆ ಪ್ರತಿವಾರವೂ ಕೂಡ ಎಲಿಮಿನೇಷನ್ ಎಂಬ ಸುಳಿಯಲ್ಲಿ ಸಿಲುಕಿಕೊಂಡಿದ್ದರು.

ಪ್ರತಿವಾರವೂ ಕೂಡ ಟಾಸ್ಕ್ನಲ್ಲಿ ಒಳ್ಳೆಯ ಪರ್ಫಾರ್ಮೆನ್ಸ್ ನೀಡಿ ಪ್ರೇಕ್ಷಕರ ಮನಗೆಲ್ಲುತ್ತಾ ಸಾಗುತ್ತಿದ್ದ ಇವರು ಕಿರಿಯ ಸ್ಪರ್ಧೆಯಾದರೂ ಕೂಡ ಪ್ರತಿ ಸದಸ್ಯರಿಗೂ ಉತ್ತಮ ಪೈಪೋಟಿ ನೀಡುತ್ತಿದ್ದರು. ಇನ್ನು ಆರು ಹಾಗೂ ಎರಡನೇ ವಾರ ಬ್ರೋ ಗೌಡ ಖ್ಯಾತಿಯ ಶಮಂತ್ ಅವರ ಮನೆಯಿಂದ ಹೊರನಡೆಯುತ್ತಾರೆ ಎಂದು ಪ್ರತಿಯೊಬ್ಬ ಸದಸ್ಯರು ಭಾವಿಸಿದ್ದರು. ಆದರೆ ಅದೃಷ್ಟವಶಾತ್ ವೈಜಯಂತಿ ಅವರ ನಿರ್ಣಯದ ಅನುಸಾರ ಶಮಂತ್ ಅವರು ಮತ್ತೆ ಮನೆಯೊಳಗೆ ಉಳಿದುಕೊಳ್ಳುವ ಮೂಲಕ ಅದೃಷ್ಟದ ಸ್ಪರ್ಧೆ ಎನಿಸಿಕೊಂಡಿದ್ದಾರೆ. ಈ ಬಾರಿ ಖಂಡಿತ ಶಮಂತ್ ಅವರೇ ಮನೆಯಿಂದ ಹೊರ ಹೋಗುತ್ತಾರೆ ಎಂದು ಪ್ರೇಕ್ಷಕರು ಕೂಡ ಭಾವಿಸಿದ್ದರು. ಆದರೆ ಏಳನೇ ವಾರದಲ್ಲಿ ಶಮಂತ್ ಪರ್ಫಾರ್ಮೆನ್ಸ್ ಹಾಗೂ ಮನೋರಂಜನೆ ಎಲ್ಲವೂ ಕೂಡ ಇಷ್ಟವಾಗಿದ್ದು ಮತ್ತೊಮ್ಮೆ ಅವರ ಅದೃಷ್ಟ ಕೈಹಿಡಿದಿದೆ.

ಆದರೆ ಇವರ ಅದೃಷ್ಟ ಕೈ ಕೊಟ್ಟಿದ್ದು ಮಾತ್ರ ಕಿರಿಯ ಗಾಯಕ ವಿಶ್ವನಾಥ್ ಅವರಿಗೆ ಇನ್ನು ಕಿರಿಯ ಸ್ಪರ್ಧಿಯಾಗಿ ಮನೆಯೊಳಗೆ ತೆರಳಿದ ವಿಶ್ವನಾಥ್ ಅವರು ಸಂಭಾವನೆಯನ್ನು ಲಕ್ಷ ಲಕ್ಷಗಟ್ಟಲೆ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಹೌದು ವಿಶ್ವನಾಥ್ ಅವರಿಗೆ ವಾರಕ್ಕೆ 45 ಸಾವಿರದಂತೆ ಸಂಭಾವನೆಯನ್ನು ನಿಗದಿ ಮಾಡಲಾಗಿದ್ದು, ಏಳು ವಾರಗಳ ಜರ್ನಿ ಅನ್ನು ಪೂರ್ಣಗೊಳಿಸಿರುವ ವಿಶ್ವನಾಥ 3.15 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರಕಿದೆ.