ನಮ್ಮ ಕನ್ನಡ ನಟರ ವಿದ್ಯಾಭ್ಯಾಸ ಎಷ್ಟು ಗೊತ್ತಾ? ಇಲ್ಲಿದೆ ನೋಡಿ ಅಸಲಿ ಸತ್ಯ..!

15

ಸ್ನೇಹಿತರೆ, ಕರ್ನಾಟಕ ರಾಜ್ಯವು ಕಲೆಯ ತವರೂರು ಎಂದೇ ಹೇಳಬಹುದು ಇಲ್ಲೇ ಹುಟ್ಟಿ ಬೆಳೆದು ಇಲ್ಲಿಂದಲೇ ತಮ್ಮ ವೃತ್ತಿಜೀವನವನ್ನು ಆರಂಭಿಸಿ ನಂತರ ಪರಭಾಷೆಯಲ್ಲಿ ಅವಕಾಶ ಗಿಟ್ಟಿಸಿಕೊಂಡು ಅಲ್ಲಿನ ಚಿತ್ರರಂಗವನ್ನು ಆಳುತ್ತಿರುವ ಅದೆಷ್ಟು ಕಲಾವಿದರುಗಳು ನಮ್ಮ ಇಂಡಸ್ಟ್ರಿಯಲ್ಲಿ ಇದ್ದಾರೆ. ಹಾಗೆಯೇ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಸಾಕಷ್ಟು ನಟ ಪರಭಾಷೆಯಲ್ಲಿ ಅವಕಾಶ ಸಿಕ್ಕರೂ ಕೂಡ ಅದನ್ನು ತ್ಯಜಿಸಿ ಕನ್ನಡದಲ್ಲಿ ಕಲಾ ಸೇವೆ ಮಾಡುತ್ತಿದ್ದಾರೆ. ಅದೇನೇ ಇರಲಿ ಪ್ರೇಕ್ಷಕರಿಗೆ ತಮ್ಮ ನೆಚ್ಚಿನ ನಟನನ್ನು ತೆರೆಯಮೇಲೆ ನೋಡುವುದೇ ಒಂದು ಹಬ್ಬ. ಅಂತೆಯೇ ಅವರ ವೈಯಕ್ತಿಕ ಜೀವನವನ್ನು ಕೂಡ ತಿಳಿಯುವ ಆಸಕ್ತಿ ಹಲವು ಅಭಿಮಾನಿಗಳಿಗೆ ಇರುತ್ತದೆ.

ತಮ್ಮ ನೆಚ್ಚಿನ ನಟ ಏನು ಓದಿದ್ದಾರೆ ಅವರ ವಿದ್ಯಾರ್ಹತೆ ಏನು, ಏಕೆ ಅವರು ಮುಂದೆ ಓದಲಿಲ್ಲ ಎನ್ನುವ ಕುತೂಹಲ ಕೆಲವರಿಗೆ ಮೂಡಿರುತ್ತದೆ ಅಂತಹ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಶಿಕ್ಷಣ ಬೇಕು ಆದರೆ ಕಲೆ ಇಲ್ಲದೆ ಉತ್ತಮ ಸಾಧನೆ ಮಾಡಲು ಸಾಧ್ಯವೇ ಇಲ್ಲ ಎಂಬ ಮಾತನ್ನು ಅಕ್ಷರಶಃ ನಿಜ ಮಾಡಿದ್ದು, ಶಿಕ್ಷಣದ ಸಹವಾಸವೇಬೇಡ ಎಂದೆನಿಸಿ ತಮ್ಮ ಕನಸನ್ನು ಬೆನ್ನುಹತ್ತಿದ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ. ಹೌದು ಕನ್ನಡ ಚಿತ್ರರಂಗದ ವರನಟ ನಟಸಾರ್ವಭೌಮ ಕನ್ನಡಿಗರ ಆರಾಧ್ಯ ದೈವ ನಟ ಡಾಕ್ಟರ್ ರಾಜಕುಮಾರ್ ಅವರು ಓದಿರುವುದು ಕೇವಲ 3ನೇ ಕ್ಲಾಸ್.

ಆದರೆ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ 8ನೇ ವಯಸ್ಸಿಗೆ ಮುತ್ತುರಾಜ್ ಅವರು ಶಾಲೆಗೆ ತೆರಳುವುದನ್ನು ನಿಲ್ಲಿಸಿ ತನ್ನ ತಂದೆ ಪುಟ್ಟಸ್ವಾಮಿ ಹಾಗೂ ತಾಯಿ ಲಕ್ಷ್ಮಮ್ಮ ಇಬ್ಬರ ಜೊತೆ ರಂಗಭೂಮಿ ನಾಟಕಗಳಲ್ಲಿ ನಟಿಸಲು ಶುರು ಮಾಡಿ ನಂತರ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು. ಇದೀಗ ಕರುನಾಡ ಆರಾಧ್ಯದೈವರಾಗಿ ಅಜರಾಮರವಾಗಿ ಉಳಿದಿದ್ದಾರೆ. ಕನ್ನಡ ಚಿತ್ರರಂಗದ ಅಭಿನಯ ಭಾರ್ಗವ ಹಾಗೂ ಅಭಿಮಾನಿಗಳ ಸಾಹಸಸಿಂಹ ವಿಷ್ಣುವರ್ಧನ್ ಅವರು ಹುಟ್ಟಿದ್ದು ಮೈಸೂರಿನಲ್ಲಿ ಹಾಗೂ ಅಲ್ಲಿನ ಗೋಪಾಲಸ್ವಾಮಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು ನಂತರ ಬೆಂಗಳೂರಿಗೆ ಬಂದಮೇಲೆ ಪ್ರೌಢ ಶಿಕ್ಷಣ ಮುಗಿಸಿ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.

ಅಷ್ಟೇ ಅಲ್ಲದೆ ನಮ್ಮ ಸ್ಯಾಂಡಲ್ವುಡ್ನ ಇತ್ತೀಚಿಗಿನ ನಾಯಕ-ನಾಯಕಿಯರು ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಹೌದು ಅವರುಗಳಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೂಡ ಒಬ್ಬರು ಮೂಲತಹ ಶಿವಮೊಗ್ಗದಲ್ಲಿ ಜನಿಸಿದ ಕಿಚ್ಚ ವಾಸವಿ ವಿದ್ಯಾಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಾಡಿದ್ದಾರೆ. ನಂತರ ಬೆಂಗಳೂರಿನಲ್ಲಿ ದಯಾನಂದ ಸಾಗರ್ ಕಾಲೇಜಿನಲ್ಲಿ ಇಂಡಸ್ಟ್ರಿಯಲ್ ಹಾಗೂ ಪ್ರೊಡಕ್ಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ತಮ್ಮ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ಇನ್ನು ಅಭಿಮಾನಿಗಳ ಒಡೆಯ ಡಿ ಬಾಸ್ ದರ್ಶನ್ ಅವರ ಅಪ್ಪ ಚಿತ್ರರಂಗದ ದೊಡ್ಡ ಕಲಾವಿದರಾದ ಕಾರಣವೆನಿಸುತ್ತದೆ.

ನಟನೆಯ ಮೇಲೆ ಆಸೆ ಇದ್ದು, ಅದಕ್ಕಾಗಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ ದರ್ಶನ್ ಅವರು ಮೈಸೂರಿನಲ್ಲಿ ಪಿಯುಸಿವರೆಗಿನ ಶಿಕ್ಷಣವನ್ನು ಮುಗಿಸಿದ್ದಾರೆ ಇನ್ನು ಚಿತ್ರರಂಗದ ಮೋಸ್ಟ್ ಹಂಡ್ಸಂ ಹೀರೋ ರಮೇಶ್ ಅರವಿಂದ್ ಅವರು ಇಂಜಿನಿಯರಿಂಗ್ ಪದವಿ ಪಡೆದಿದ್ದು, ಬೆಂಗಳೂರಿನ UVCE ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಸ್ನೇಹಿತರೆ ಈ ಮೇಲ್ಕಂಡ ನಟರಲ್ಲಿ ನಿಮ್ಮ ನೆಚ್ಚಿನ ನಟ ಯಾರು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.