ಗಗನಕ್ಕೇರಿದ ಚಿನ್ನದ ಬೆಲೆ ಇಂದಿನ ಚಿನ್ನದ ಬೆಲೆ ಎಷ್ಟು ಎಂದು ತಿಳಿದರೆ ಶಾಕ್ ಶಾಕ್ ಆಗ್ತೀರಾ..!

9

ಸ್ನೇಹಿತರೆ, ಈ ವರ್ಷದ ಏಪ್ರಿಲ್ ತಿಂಗಳು ಜನರಲ್ಲಿ ಆತಂಕ ಮೂಡಿಸಿದ ತಿಂಗಳು ಎಂದರೆ ತಪ್ಪಾಗಲಾರದು ಹೌದು ಏಪ್ರಿಲ್ ತಿಂಗಳು ಜನರಲ್ಲಿ ಆತಂಕ ಮೂಡಿಸುತ್ತಿದ್ದು ಒಂದು ಕಡೆ ಕರುಣದ ಎರಡನೆಯ ಹಾವಳಿಯಾದರೆ ಮತ್ತೊಂದು ಕಡೆ ಗಗನಕ್ಕೇರಿರುವ ಚಿನ್ನದ ಬೆಲೆ. ಹೌದು ಕಳೆದ ದಿನಗಳಿಂದ ಚಿನ್ನದ ಬೆಲೆ ದಿನ ದಿನಕ್ಕೆ ಏರುತ್ತಲೇ ಇದೆ ಅಷ್ಟೇ ಅಲ್ಲದೆ ದಾಖಲೆಯ ಮೊತ್ತವನ್ನು ಕೂಡ ತಲುಪುತ್ತಿದೆ. ಇನ್ನು ಈ ವಿಷಯ ಜನರಲ್ಲಿ ಆತಂಕ ಮೂಡಿಸಿದ್ದು ಚಿನ್ನ ಖರೀದಿಯಿಂದ ಜನರು ಹಿಂದುಳಿಯುತ್ತಿದ್ದಾರೆ. ಇನ್ನು ಕಳೆದ ತಿಂಗಳು ಚಿನ್ನದ ಬೆಲೆ ಇಳಿಕೆ ಕಂಡು ಜನರಲ್ಲಿ ಸಂತಸ ಮೂಡಿಸಿತ್ತು ಆದರೆ ಏಪ್ರಿಲ್ ತಿಂಗಳು ಮೊದಲ ವಾರದಿಂದ ಚಿನ್ನದ ಬೆಲೆ ಸ್ವಲ್ಪ ಮಟ್ಟದ ಏರಿಕೆ ಕಂಡು ಬರುತ್ತಿತ್ತು.

ಇದೀಗ ದಿನದಿಂದ ದಿನಕ್ಕೆ ಚಿನ್ನದ ಬೆಲೆ ಗಗನಕ್ಕೇರುತ್ತಿದೆ ಇದರಿಂದಾಗಿ ಆಭರಣ ಪ್ರಿಯರಲ್ಲಿ ಆತಂಕ ಮನೆ ಮಾಡಿದೆ ಹಾಗಾದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಒಂದು ಗ್ರಾಂ ಚಿನ್ನಕ್ಕೆ ಎಷ್ಟು ಬೆಲೆ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಚಿನ್ನದ ಬೆಲೆಯಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಂಡುಬರುತ್ತಿದೆ ಇನ್ನು ಕೆಲವರು ಕಳೆದ ತಿಂಗಳು ಚಿನ್ನದ ಬೆಲೆ ಇಳಿಕೆ ಕಂಡಿತ್ತು ಎಂದು ಕೂಡ ಯೋಚಿಸುತ್ತಿದ್ದಾರೆ. ಕಳೆದ ವರ್ಷ ಮಾರ್ಚ್ ತಿಂಗಳಾಂತ್ಯದಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಸುಮಾರು 41,155 ರೂಪಾಯಿ ನಿಗದಿಯಾಗಿತ್ತು. ಆರಂಭದಲ್ಲಿ ಚಿನ್ನದ ಬೆಲೆ ಏರಿಕೆ ಕಂಡು ಬಂದಿದ್ದು ತಿಂಗಳ ಮೊದಲವಾರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಸರಿಸುಮಾರು 42,260 ರೂಪಾಯಿ ಆಗಿತ್ತು.

ಇದೀಗ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದ್ದು, ಏಪ್ರಿಲ್ ತಿಂಗಳ ಮೊದಲ ವಾರ ಅಂತ್ಯಕ್ಕೆ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 42,655 ರೂಪಾಯಿ ಬೆಲೆ ನಿಗದಿಪಡಿಸಲಾಗಿತ್ತು ನೆನ್ನೆಯಷ್ಟೇ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 43,500 ರೂಪಾಯಿ ಆಗಿದ್ದು, ಆದರೆ ಇದೀಗ ಬೆಲೆಯಲ್ಲಿ ಮತ್ತಷ್ಟು ಏರಿಕೆ ಕಂಡಿದ್ದು ಇಂದಿನ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44 ಸಾವಿರ ರೂಪಾಯಿ ಆಗಿದೆ. ಇದರಿಂದಾಗಿ ಏಪ್ರಿಲ್ ಅಂತ್ಯಕ್ಕೆ ಮತ್ತೆಷ್ಟು ಏರಿಕೆಯಾಗುತ್ತದೊ ಎಂಬ ಟೆನ್ಶನ್ ಗ್ರಾಹಕರಲ್ಲಿ ಶುರುವಾಗಿದೆ.