ಶ್ರೀ ಛಾಯಾ ಸೋಮೇಶ್ವರ ದೇವಾಲಯದ ನಿಗೂಢ ರಹಸ್ಯಗಳೇನು ಗೊತ್ತಾ..!
ಸ್ನೇಹಿತರೆ, ನಮ್ಮ ಈ ಭರತಖಂಡದಲ್ಲಿ ಸಾವಿರಾರು ವಿಶೇಷ ದೇವಾಲಯಗಳಿವೆ ಅಂತ ಹಲವು ದೇವಾಲಯಗಳಲ್ಲಿ ಅತಿಮುಖ್ಯ ದೇವಾಲಯಗಳು ಯಾರಿಗೂ ಬಗೆಹರಿಸಲಾಗದಂತಹ ನಿಗೂಢತೆಯನ್ನು ಹೊಂದಿರುತ್ತದೆ. ಅಷ್ಟೇ ಅಲ್ಲದೆ ನಮ್ಮ ಆಧುನಿಕ ಲೋಕದಲ್ಲಿ ಅತ್ಯುತ್ತಮ ಸಲಕರಣೆಗಳನ್ನು ಉಪಯೋಗಿಸಿದರು ಸೃಷ್ಟಿಸಲಾಗದಂತಹ ವಾಸ್ತುಶಿಲ್ಪಗಳನ್ನು ಸಾವಿರಾರು ಪುರಾತನ ದೇವಾಲಯಗಳು ಹೊಂದಿರುವಂತಹ ಮೂಗಿನ ಮೇಲೆ ಬೆರಳಿಟ್ಟು ನೋಡುವಂತೆ ಮಾಡುವುದು ಸುಳ್ಳಲ್ಲ. ಈ ದೇವಾಲಯದ ರಹಸ್ಯವನ್ನು ಭೇದಿಸಲು ಶತ ಶತಮಾನಗಳ ಕಾಲ ವೈಜ್ಞಾನಿಕ ಲೋಕ ತಲೆಕೆಡಿಸಿಕೊಂಡಿದ್ದು ಅತಿ ನುರಿತ ವಾಸ್ತುಶಿಲ್ಪ ಶಾಸ್ತ್ರಜ್ಞರು ಸಹ ಈ ದೇವಾಲಯದ ರಹಸ್ಯವನ್ನು ಭೇದಿಸಲು ಪರದಾಡಿದ್ದಾರೆ.
ಹಾಗಾದರೆ ಯಾವುದು ಈ ದೇವಾಲಯ? ಈ ದೇವಾಲಯದ ರಹಸ್ಯವನ್ನು ಯಾರಾದರೂ ಭೇದಿಸಿದ್ದಾರಾ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಮ್ಮ ನೆರೆಯ ರಾಜ್ಯ ತೆಲಂಗಾಣದ ನಲಗುಂದ ಜಿಲ್ಲೆಯ ಪದಂಗಲ್ ಎಂಬಲ್ಲಿ ಛಾಯಾ ಸೋಮೇಶ್ವರ ಎಂಬ ವಿಶಿಷ್ಟ ದೇವಾಲಯವಿದೆ. ಈ ದೇವಾಲಯವನ್ನು ಹನ್ನೊಂದನೇ ಶತಮಾನದಲ್ಲಿ ಕುಂದೂರು ಚೋಳರು ನಿರ್ಮಿಸಿದ್ದಾರೆ. ಈ ದೇವಾಲಯವು ತ್ರಿಕೂಟಾಚಲ ಶೈಲಿಯಲ್ಲಿದೆ ಅಂದರೆ ದೇವಾಲಯದಲ್ಲಿ ಮೂರು ಗರ್ಭಗುಡಿಗಳಿವೆ. ಮೂರು ಗರ್ಭಗುಡಿಗಳಲ್ಲಿ ಶಿವ, ವಿಷ್ಣು ಹಾಗೂ ಸೂರ್ಯದೇವರು ಪ್ರತಿಷ್ಠಾಪಿತಗೊಂಡಿದ್ದಾರೆ. ಈ ದೇವಾಲಯದ ಮುಖ್ಯ ದೇವರು ಶಿವ ದೇವರು.
ಶಿವ ದೇವರನ್ನು ಛಾಯಾ ಸೋಮೇಶ್ವರ ಎಂದು ಕರೆಯುವುದಕ್ಕೂ ಒಂದು ಮುಖ್ಯ ಕಾರಣವಿದೆ ಛಾಯಾ ಎಂದರೆ ನೆರಳು ಎಂದರ್ಥ. ದಿನವಿಡಿ ಈ ಶಿವಲಿಂಗದ ಹಿಂದೆ ನೆರಳು ಒಂದು ಬೀಳುತ್ತಲೇ ಇರುತ್ತದೆ. ಬೆಳಗ್ಗೆಯಿಂದ ಸಂಜೆಯವರೆಗೂ ಶಿವಲಿಂಗದ ಮೇಲೆ ಬೀಳುವಂತಹ ನೆರಳು ಸೂರ್ಯನ ಚಲನೆಯ ಒಂದಿಗೆ ನಡೆಯುವುದಿಲ್ಲ ಬದಲಿಗೆ ತಟಸ್ಥವಾಗಿ ಒಂದೇ ಜಾಗದಲ್ಲಿ ಇರುತ್ತದೆ. ಮೇಲ್ನೋಟಕ್ಕೆ ಈ ನೆರಳು ಒಂದು ಕಂಬದ ನೆರಳಿನಂತೆ ಭಾಸವಾಗುತ್ತದೆ. ಆದರೆ ಆಶ್ಚರ್ಯದ ವಿಚಾರ ಎಂದರೆ ದೇವಾಲಯದ ಮುಂದೆ ಯಾವುದೇ ಕಂಬಗಳಿಲ್ಲ ಈ ದೇವಾಲಯದ ಗರ್ಭಗುಡಿಯ ಒಳಗೆ ನೆರಳು ಹೇಗೆ ಪ್ರವೇಶಿಸುತ್ತದೆ. ನಿಗೂಢವಾದ ಪ್ರಶ್ನೆ ಇನ್ನೂ ವಿಜ್ಞಾನಿಗಳಲ್ಲಿ ಕಾಡುತ್ತಲೇ ಇದೆ. ಸ್ನೇಹಿತರೆ ನಮ್ಮ ನೆರೆಯ ರಾಜ್ಯ ತೆಲಂಗಾಣದಲ್ಲಿ ನೆಲೆಸಿರುವ ಗರ್ಭಗುಡಿಯಲ್ಲಿ ನೆರಳಿನಾಟದ ನಿಗೂಢತೆಯನ್ನು ಹೊಂದಿರುವ ಒಂದು ಧಾರ್ಮಿಕ ಕ್ಷೇತ್ರದ ಪರಿಚಯವನ್ನು ಮಾಡಿಕೊಂಡ ನಿಮಗೆಲ್ಲರಿಗೂ ಆ ಭಗವಂತನ ಕೃಪಾಕಟಾಕ್ಷವೂ ಸದಾಕಾಲ ಇರಲಿ ಎಂದು ಕೇಳಿಕೊಳ್ಳುತ್ತೇವೆ.