ಬಿಗ್ ಬಾಸ್ ಶುಭಪುಂಜಾರವರ ಮನೆ, ಬಾಯ್ ಫ್ರೆಂಡ್, ಮತ್ತಿವರ ಲೈಫ್ ಸ್ಟೈಲ್ ಹೇಗಿದೆ ಗೊತ್ತಾ? ತಿಳಿದರೆ ನಿಜಕ್ಕೂ ಅಚ್ಚರಿ ಪಡುತ್ತೀರಾ..!!
ಸ್ನೇಹಿತರೆ, ಬಿಗ್ ಬಾಸ್ ಮನೆಯಲ್ಲಿ ಹಲವಾರು ಕ್ಯೂಟಸ್ಟ್ ಹುಡುಗಿಯರು ಇದ್ದರೆ ಆ ಕ್ಯೂಟೆ ಹುಡುಗಿಯರಲ್ಲಿ ನಮ್ಮ ಶುಭಪುಂಜ ಕೂಡ ಒಬ್ಬರು. ಮೊಗ್ಗಿನ ಮನಸು ಸಿನಿಮಾದ ಮೂಲಕ ಉತ್ತಮ ನಟಿಯಾಗಿ ತಮ್ಮದೇ ಆದ ಛಾಪನ್ನು ಮೂಡಿಸುವ ಮೂಲಕ ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ ಮೊಗ್ಗಿನ ಮನಸ್ಸು ಖ್ಯಾತಿಯ ಶುಭಪುಂಜಾ ಎಂದರೆ ಸಾಕು ಒಂದಷ್ಟು ಹಸಿಬಿಸಿ ದೃಶ್ಯಗಳು ಕಣ್ಣ ಮುಂದೆ ಬರುತ್ತವೆ. ಮತ್ತೊಂದಷ್ಟು ವಿವಾದಗಳು ನೆನಪಾಗುತ್ತದೆ ಆದರೆ ಬಿಗ್ ಬಾಸ್ ಕಾರ್ಯಕ್ರಮ ನೋಡಿದ ನಂತರ ಆಕೆಯ ಮೇಲಿದ್ದ ಅಭಿಪ್ರಾಯ ಕೆಲವರಲ್ಲಿ ಬದಲಾಗಿದೆ.
ಹೌದು ಶುಭಪುಂಜ ಅವರು ಕೆಲವು ಚಿತ್ರಗಳಲ್ಲಿ ಹಸಿಬಿಸಿಯಾಗಿ ಕಾಣಿಸಿಕೊಂಡಿರಬಹುದು ಆದರೆ ಆಕೆಯ ಮನಸ್ಸು ಬಹಳ ಸ್ವಚ್ಛವಾದದ್ದು, ಮತ್ತು ಆಕೆಯ ನಡತೆ ಪುಟ್ಟ ಮಗುವಿನ ರೀತಿ ಇರುತ್ತದೆ ಅಷ್ಟು ಮುಗ್ದ ಮನಸ್ಸನ್ನು ಉಳ್ಳವರು ಶುಭ ಪೂಂಜಾ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಚಂಡ ಚಿತ್ರದ ಮೂಲಕ ಸ್ಯಾಂಡಲ್ ವುಡ್ಗೆ ಕಾಲಿಟ್ಟ ಮಂಗಳೂರು ಬೆಡಗಿ ಹಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದು, ಕನ್ನಡ ಮತ್ತು ತಮಿಳಿನಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶುಭ ಪೂಂಜಾರವರಿಗೆ ದುನಿಯಾ ವಿಜಯ್ ಅವರ ಜೊತೆ ಸಂಬಂಧವಿದೆ ಎಂಬ ಊಹಾಪೋಹಗಳಿಂದ ಹಿಂದೆಲ್ಲ ಸಾಕಷ್ಟು ಸುದ್ದಿಯಾಗಿದ್ದರು.
ಅವರಿಬ್ಬರೂ ಮದುವೆಯಾಗಿದೆ ಎಂಬುದಕ್ಕೆ ಸಾಕ್ಷಿ ಎನ್ನುವಂತೆ ಕೆಲವೊಂದಿಷ್ಟು ಫೋಟೋಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು. ಇದಾಗಿ ಕೊಂಚಕಾಲ ಶುಭಪುಂಜ ಯಾವುದೇ ಸುದ್ದಿ ಅಲ್ಲಿರಲಿಲ್ಲ ಇದೆಲ್ಲಾ ಮುಗಿದ ಎಷ್ಟೋ ದಿನಗಳ ನಂತರ ಶುಭ ಅವರು ಮತ್ತೆ ಸುದ್ದಿಯಾಗಿದ್ದು ಹೌದು ತಮ್ಮ ಹಾಟ್ ಫೋಟೋ ಶೂಟ್ಗಳಿಂದ ಬಹಳ ಪ್ರಚೋದನಕಾರಿ ಭಾವಗಳಲ್ಲಿದ್ದ ಈ ಫೋಟೋಗಳು ಮೊಗ್ಗಿನ ಮನಸ್ಸು ಹುಡುಗಿಯ ಇಮೇಜನ್ನು ಕೊಂಚ ಬದಲಿಸಿತು. ಒಂದು ವರ್ಷದ ಹಿಂದೆ ಶುಭಪುಂಜ ಅವರು ಬಿಸಿನೆಸ್ ಮ್ಯಾನ್ ಜೊತೆಗೆ ಡೇಟಿಂಗ್ ಮಾಡುತ್ತಾ ಲವ್ವಲ್ಲಿ ಬಿದ್ದಿರುವ ವಿಚಾರ ಬಯಲಾಯಿತು.
ಇದಾದ ನಂತರ ಸ್ವಲ್ಪ ದಿನಗಳಲ್ಲಿ ನಾವಿಬ್ಬರು ಮದುವೆಯಾಗುತ್ತಿದ್ದೇವೆ ಎಂದು ಸ್ವತಹಾ ಶುಭಪುಂಜರವರೆ ಮಾಧ್ಯಮಕ್ಕೆ ಹೇಳಿಕೊಂಡಿದ್ದರು. ಆದರೆ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಶುಭ ಅವರು ಆಟ ಮುಗಿಸಿ ಮನೆಯಿಂದ ಹೊರ ಬಂದ ನಂತರ ಮದುವೆಯಾಗುವುದಾಗಿ ತಿಳಿಸಿದ್ದಾರೆ. ಶುಭಪುಂಜರವರ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.