ಪ್ರೀತಿಸುವ ಪ್ರತಿಯೊಬ್ಬ ಹುಡುಗ ತಿಳಿಯಲೇಬೇಕಾದ ಮಾಹಿತಿ ಇದು.

31

ಸ್ನೇಹಿತರೆ, ಬಯಸುವುದು ತುಂಬಾ ಸುಲಭ ಆದರೆ ಬಯಸಿದ್ದನ್ನು ಪಡೆಯುವುದು ತುಂಬಾ ಕಷ್ಟ. ಪ್ರೀತಿ ಆಗೋದು ಸುಲಭ ಆದರೆ ಪ್ರೀತಿ ಮರೆಯೋದು ತುಂಬಾ ಕಷ್ಟ. ನೀವು ಪ್ರೀತಿಸುತ್ತಿರುವ ಹುಡುಗಿ ನಿನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ಹೇಗೆ ತಿಳಿದುಕೊಳ್ಳಬೇಕು ಅನ್ನುವುದು ನಮ್ಮ ಹುಡುಗರಿಗೆ ತುಂಬಾ ಕಷ್ಟವಾದಂತಹ ವಿಷಯಾನೇ. ಮತ್ತೊಂದು ವಿಷಯ ಎಂದರೆ ಈ ಪ್ರೀತಿ ಎಂಬ ವಿಷಯಕ್ಕೆ ಬಂದಾಗ ಹುಡುಗರೇ ಮುಂದೆ ಇರುತ್ತಾರೆ. ನೀವು ಪ್ರೀತಿಸುತ್ತಿರುವ ಹುಡುಗಿ ನಿಮ್ಮನ್ನು ಪ್ರೀತಿಸುತ್ತಿದ್ದಾಳಾ? ಇಲ್ಲವಾ ಎಂದು ತಿಳಿದುಕೊಳ್ಳಬೇಕಾದರೆ ಕೆಲವು ಸೂಕ್ಷ್ಮ ಅಂಶಗಳನ್ನು ನೀವು ಗಮನಿಸಲೇಬೇಕು. ಆಗಲೇ ತಿಳಿಯುವುದು ನೀವು ಪ್ರೀತಿಸುತ್ತಿರುವ ಹುಡುಗಿ ನಿಮ್ಮನ್ನು ಇಷ್ಟ ಪಡುತ್ತಿದ್ದಾಳಾ, ಇಲ್ಲವಾ ಅಂತ ಹಾಗಾದರೆ ಹುಡುಗಿಯಲ್ಲಿ ಮೂಡವಂತಹ ಲಕ್ಷಣಗಳು ಯಾವುವು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಕೆಲವು ಹುಡುಗಿಯರು ತಾವು ಇಷ್ಟಪಡುವವರನ್ನು ನೋಡಲು ಹೆದರುತ್ತಾರಂತೆ ಇದನ್ನು ನೀವು ನಿಮ್ಮ ಹುಡುಗಿಯಲ್ಲಿ ಗಮನಿಸಿ ನೋಡಿ. ಆಕೆ ನಿಮ್ಮ ಜೊತೆ ಹಾಗೂ ಇತರರ ಜೊತೆ ವರ್ತಿಸುವ ರೀತಿಯಲ್ಲಿ ತುಂಬಾ ವ್ಯತ್ಯಾಸವಿದ್ದರೆ ಪಕ್ಕಾ ಅವಳು ನಿಮ್ಮನ್ನು ಇಷ್ಟಪಡುತ್ತಿದ್ದಾಳೆ ಎಂದರ್ಥ ಅಲ್ಲದೇ ಅವಳು ಪದೇಪದೇ ನಿಮ್ಮನ್ನು ನೋಡುತ್ತಿದ್ದರೆ ಆಗಾಗ ಸ್ಮೈಲ್ ಮಾಡುತ್ತಿದ್ದಾರೆ ಆಕೆಗೂ ನೀವೆಂದರೆ ಇಷ್ಟನೇ. ಎಷ್ಟೋ ಜನ ಸ್ನೇಹಿತರಿದ್ದರೂ ಆಕೆ ಪ್ರತಿಬಾರಿಯೂ ನಿಮ್ಮ ಪಕ್ಕದಲ್ಲಿ ಬಂದು ಕುಳಿತುಕೊಳ್ಳಲು ಇಷ್ಟಪಡುತ್ತಿದ್ದಾರಗ ಆಕೆ ನಿಮ್ಮನ್ನು ನಿಜವಾಗಿಯೂ ಇಷ್ಟಪಡುತ್ತಿದ್ದಾಳೆ ಎಂದರ್ಥ. ನಿಮ್ಮ ಪ್ರತಿಯೊಂದು ಮಾತನ್ನು ಗಮನದಿಂದ ಕೇಳುತ್ತಿದ್ದರೆ ಇಲ್ಲದಿದ್ದರೆ ಪ್ರತಿ ಸಲ ನಿಮ್ಮನ್ನು ಮೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಅನುಮಾನವೇ ಬೇಡ ಆಕೆಗೆ ನೀವು ತುಂಬಾ ಇಷ್ಟ ಆಗುತ್ತಿದ್ದೀರಿ ಎಂದರ್ಥ.

ನಿಮ್ಮನ್ನು ಪದೇ ಪದೇ ಬೇರೆ ಹುಡುಗಿಯರ ಜೊತೆ ಜೋಡಿ ಮಾಡಿ ನಿಮ್ಮನ್ನು ತಮಾಷೆ ಮಾಡುತ್ತಿದ್ದಾರೆ ಇದರ ಒಳ ಅರ್ಥ ಆಕೆಗೆ ನಿಮ್ಮ ಮೇಲೆ ಇಂಟರೆಸ್ಟ್ ಇದೆ. ಆಕೆ ಯಾವಾಗ ತಮಾಷೆ ಮಾಡುತ್ತಾಳೆ ಎಂದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಸಲುವಾಗಿ ಇದನ್ನು ನೀವು ಸೂಕ್ಷ್ಮವಾಗಿ ಗಮನಿಸಬೇಕು. ಇನ್ನು ಈಗಾಗಲೇ ಒಬ್ಬರನ್ನೊಬ್ಬರು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ಆಕೆ ಸಾಮಾನ್ಯವಾಗಿ ನಿಮ್ಮ ಕೈಗೆ, ಬುಜ, ಎದೆಯನ್ನು ಸ್ಪರ್ಶಿಸುತ್ತಾಳೆ ಅಷ್ಟೇ ಅಲ್ಲದೆ ಆಕೆ ತಮಾಷೆಯಿಂದ ನಿಮ್ಮನ್ನು ಹೊಡೆಯಬಹುದು ಅಲ್ಲದೆ ನೀವು ಆಕೆಯ ಬಳಿ ಪ್ರೀತಿಯ ವಿಚಾರವನ್ನು ಮಾತನಾಡಿದರೆ ನನಗೆ ಗೊತ್ತಿಲ್ಲ ಎಂದು ಹೇಳಿ ಆ ವಿಷಯದಿಂದ ಜಾರಿಕೊಳ್ಳುತ್ತಾಳೆ. ಈ ಎಲ್ಲವೂ ಪ್ರೀತಿಯ ಲಕ್ಷಣಗಳು ನಿಮಗೂ ಎಂದಾದರೂ ಇಂತಹ ಅನುಭವಗಳು ನಿಮಗೂ ಕೂಡ ಆಗಿದೆಯಾ ಇಲ್ಲವಾ ಎಂಬುದನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.