ಪುನೀತ್ ರಾಜ್ ಕುಮಾರ್ ನಟಿಸುವ ಹೊಸ ಸಿನಿಮಾದಲ್ಲಿ ನೀವು ಕೂಡ ನಟಿಸಬೇಕು ಅಂದ್ರೆ ಹೀಗೆ ಮಾಡಿ..!

1

ಸ್ನೇಹಿತರೆ, ನಟ ಪುನೀತ್ ರಾಜಕುಮಾರ್ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶವೊಂದು ಬಂದಿದೆ ಹೌದು ಪುನೀತ್ ರಾಜಕುಮಾರ್ ನಟಿಸಿರುವ ಹೊಸ ಸಿನಿಮಾದ ನಿರ್ದೇಶಕ ತಂಡದಲ್ಲಿ ಕೆಲಸ ಮಾಡುವ ಅವಕಾಶವನ್ನು ನೀಡಿದ್ದಾರೆ. ಆದರೆ ಸಿನಿಮಾ ತಂಡದ ಭಾಗವಾಗಲು ಸ್ಪರ್ಧೆಯೊಂದರಲ್ಲಿ ಜಯಶೀಲರಾಗಬೇಕಿದೆ ಇಂದು ಫೇಸ್ಬುಕ್ನಲ್ಲಿ ವಿಡಿಯೋ ಪ್ರಕಟಿಸಿರುವ ಪವನ್ ಕುಮಾರ್ ಯಾರಿಗೆ ಪುನೀತ್ ಹಾಗೂ ತಮ್ಮ ಕಾಂಬಿನೇಷನ್ ಸಿನಿಮಾದ ಭಾಗವಾದ ಬೇಕೆಂದು ಬಯಸುವವರು ಹಿಂದಿ ಹೇರಿಕೆ ಅಥವಾ ಬೇರೆ ಭಾಷೆ ಹೇರಿಕೆ ಕುರಿತಾಗಿ 10ನಿಮಿಷದ ಕಿರುಚಿತ್ರ ಮಾಡಿ ಕಳುಹಿಸಿ ಎಂದು ಸ್ಪರ್ಧೆಯೊಂದನ್ನು ಆಯೋಜಿಸಿದ್ದಾರೆ. ಅಷ್ಟೇ ಅಲ್ಲದೆ ಕೊರೋನಾ ಸಮಯ ಇರುವ ಕಾರಣ ಹೆಚ್ಚು ಹೊರಗೆಲ್ಲೂ ಹೋಗದೆ ಕಡಿಮೆ ಸಂಪನ್ಮೂಲ ಬಳಸಿಕೊಂಡು ಹೆಚ್ಚು ಸೃಜನಾತ್ಮಕವಾಗಿ 10ನಿಮಿಷದ ಕಿರುಚಿತ್ರ ಮಾಡಿ ಕಳಿಸಿ.

8 ಕಿರುಚಿತ್ರವನ್ನು ನಾವು ಆಯ್ಕೆ ಮಾಡಲಿದ್ದೇವೆ ಮೊದಲು ನಾಲ್ಕು ಉತ್ತಮ ಕಿರುಚಿತ್ರ ಮಾಡಿದವರನ್ನು ನಮ್ಮ ನಿರ್ದೇಶಕ ತಂಡಕ್ಕೆ ಸೇರಿಸಿಕೊಳ್ಳಲಿದ್ದೇನೆ ಎಂದಿದ್ದಾರೆ ಪವನ್. ಉಳಿದ ನಾಲ್ಕು ಕಿರುಚಿತ್ರಕ್ಕೆ ತಲಾ 25 ಸಾವಿರ ಬಹುಮಾನವನ್ನು ಕೊಡುವುದಾಗಿ ಘೋಷಿಸಿದ್ದಾರೆ. ಕಿರು ಚಿತ್ರವನ್ನು ಹೇಗೆ ಕಳಿಸಬೇಕು ಎಂಬುದನ್ನು ಏಪ್ರಿಲ್ 28ರಂದು ಇದೇ ರೀತಿ ವಿಡಿಯೋ ಮಾಡಿ ಮಾಹಿತಿ ನೀಡುವುದಾಗಿ ನಿರ್ದೇಶಕ ಪವನ್ ತಿಳಿಸಿದ್ದಾರೆ. ಅಲ್ಲದೆ ಮಾಡುವಂತಹ ಕಿರುಚಿತ್ರವು ಕಡ್ಡಾಯವಾಗಿ ಕನ್ನಡದ ವಿಷಯ ಆಧರಿಸಿದ ಹಾಗೆ ಇರಬೇಕು. ಕಿರುಚಿತ್ರಗಳಲ್ಲಿ ಯಾರಾದರೂ ನಟರು ಚೆನ್ನಾಗಿ ನಟಿಸಿದ್ದರೆ, ಒಳ್ಳೆಯ ಸಿನಿಮಾಟೋಗ್ರಫಿ ಮಾಡಿದ್ದಾರೆ, ಒಳ್ಳೆಯ ಸಂಗೀತ ಹಿನ್ನೆಲೆ ನೀಡಿದ್ದರೆ, ಅವರನ್ನು ಸಹ ನಮ್ಮ ತಂಡದಲ್ಲಿ ಸೇರಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ ಪವನ್.

ಪುನೀತ್ ರಾಜಕುಮಾರ್ ನಟಿಸುತ್ತಿರುವ ಹೊಸ ಸಿನಿಮಾವನ್ನು ಪವನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ.ನಿರ್ಮಾಪಕ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದು, ಹೊಂಬಾಳೆ ಫಿಲಂಸ್ ಬ್ಯಾನರಿನಡಿಯಲ್ಲಿ ನಿರ್ಮಾಣವಾಗಲಿದೆ. ನಿಮಗೂ ಕೂಡ ಪುನೀತ್ ರಾಜಕುಮಾರ್ ನಟಿಸುವ ಹೊಸ ಸಿನಿಮಾದಲ್ಲಿ ಅಭಿನಯಿಸಬೇಕು ಎಂಬ ಆಸೆಯಿದ್ದರೆ ನಿರ್ದೇಶಕ ಪವನ್ ಅವರು ತಿಳಿಸಿದಂತೆ ಕನ್ನಡದಲ್ಲಿ ಕಿರುಚಿತ್ರವೊಂದನ್ನು ಮಾಡಿ ಕಳುಹಿಸಿಕೊಡಿ.