ದಿವ್ಯ ಉರುಡುಗ, ಅರವಿಂದ್ ಕರ್ಮಕಾಂಡ ಸೀಕ್ರೆಟ್ ಕ್ಯಾಮೆರಾದಲ್ಲಿ ರೆಕಾರ್ಡ್! ರಾತ್ರೋರಾತ್ರಿ ಕದ್ದುಮುಚ್ಚಿ ಮಾಡಿದ್ದೇನು ಗೊತ್ತಾ..!

5

 

ಸ್ನೇಹಿತರೆ, ಬಿಗ್ ಬಾಸ್ ಪ್ರಾರಂಭವಾದ ಮೂರನೇ ವಾರದಿಂದಲೂ ಪ್ರತಿನಿತ್ಯ ಹೆಚ್ಚು ಸುದ್ದಿಯಲ್ಲಿರುವ ಜೋಡಿ ಎಂದರೆ ಅರವಿಂದ್ ಕೆಪಿ ಹಾಗೂ ದಿವ್ಯ ಉರುಡುಗ. ಹೌದು ಮೊದಲೆರಡು ವಾರ ಮನೆಯ ಹಾಟ್ ಟಾಪಿಕ್ ಆಗಿದ್ದ ಮಂಜು ಹಾಗೂ ದಿವ್ಯ ಸುರೇಶ್ ಅವರನ್ನು ಹಿಂದಕ್ಕೆ ಮೂರನೇ ವಾರದಿಂದ ಪ್ರೇಕ್ಷಕರ ಕಣ್ಣು ಕುಕ್ಕುತ್ತಿರುವುದು ಅರವಿಂದ್ ಹಾಗೂ ದಿವ್ಯ ಉರುಡುಗ ಜೋಡಿ. ಟಾಸ್ಕ್ನಲ್ಲಿ ಒಂದಾದ ಈ ಜೋಡಿಗಳು ಟಾಸ್ಕ್ ಗೆದ್ದು ಸೂಪರ್ ಜೋಡಿ ಎನಿಸಿಕೊಂಡಿದ್ದರು ಇದಾದ ಬಳಿಕ ಅವರಿಬ್ಬರ ನಡುವೆ ವಿಶೇಷ ಸಂಬಂಧ ಬೆಳೆದಿದ್ದು, ಇಬ್ಬರು ಒಬ್ಬರನ್ನು ಬಿಟ್ಟು ಇರುತ್ತಲೇ ಇಲ್ಲ, ಒಟ್ಟಿಗೆ ಊಟ ಮಾಡುತ್ತಾರೆ ಹಾಗೂ ಒಟ್ಟಿಗೆ ಮನೆ ಕೆಲಸವನ್ನು ಕೂಡ ಮಾಡುತ್ತಾರೆ.

ಸದ್ಯ ಅನ್ಯ ಸ್ಪರ್ಧೆಗಳು ಹಾಗೂ ಕಿಚ್ಚ ಸುದೀಪ್ ಅವರು ಕೂಡ ಇವರ ಸಂಬಂಧ ಬಗ್ಗೆ ಪ್ರಶ್ನಿಸಿದ್ದು ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದೇ ಹೇಳುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಂತೂ ಈಗಾಗಲೇ ಈ ಜೋಡಿಯ ಫ್ಯಾನ್ಸ್ ಪೇಜ್ ಕ್ರಿಯೇಟ್ ಆಗಿದ್ದು, ಈ ಜೋಡಿಗಳು ವಿವಾಹವಾದರೆ ಬಲುಚಂದ ಎಂದು ಹೇಳುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸಹಬಾಳ್ವೆ ನಡೆಸುತ್ತಾ ಇಬ್ಬರ ಹೆಜ್ಜೆಯೂ ಕೂಡ ಒಂದೇ ರೀತಿ ಇದ್ದು, ಇದೀಗ ಈ ಜೋಡಿಗಳು ಮತ್ತೊಂದು ವಿಚಾರದಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ರಾತ್ರೋರಾತ್ರಿ ಈ ಜೋಡಿಗಳು ಮಾಡಿರುವ ಕೆಲಸಕ್ಕೆ ಬಿಗ್ಬಾಸ್ ವೀಕ್ಷಕರು ಬೆರಗಾಗಿದ್ದಾರೆ ಎಂದು ಹೇಳಬಹುದು. ಹೌದು ಮನೆಯಲ್ಲಿ ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ ದಿವ್ಯ ಉರುಡುಗ ಮಾಡಿದ ಕೆಲಸ ನಿಜಕ್ಕೂ ಆಶ್ಚರ್ಯ ಮೂಡಿಸುತ್ತಿದೆ.

ಹಾಗಾದರೆ ಈ ಜೋಡಿ ಮಾಡಿರುವ ಆಶ್ಚರ್ಯಕರ ಕೆಲಸವಾದರೂ ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ದಿವ್ಯ ಉರುಡುಗ ಅವರು ಒಂದು ಬೆಡ್ನಲ್ಲಿ ಮಲಗಿದ್ದಾರೆ ಪಕ್ಕದಲ್ಲಿ ಬೆಡ್ನಲ್ಲಿ ಅರವಿಂದ್ ಕೆಪಿ ಮಲಗಿರುತ್ತಾರೆ. ಆಗಿದ್ದರೂ ಕೂಡ ಅದೇಕೋ ದಿವ್ಯ ಉರುಡುಗ ಅವರಿಗೆ ನಿದ್ದೆ ಬಂದಿರುವ ಹಾಗೆ ಕಂಡಿಲ್ಲ, ಆದಕಾರಣ ಮಲಗಿದ್ದ ಜಾಗದಲ್ಲಿ ಅರವಿಂದ್ ಅವರನ್ನು ಕದ್ದುಮುಚ್ಚಿ ನೋಡುತ್ತಿದ್ದರು ಆದರೆ ಅದಾಗಲೇ ಅರವಿಂದ್ ನಿದ್ದೆಗೆ ಜಾರಿದ್ದರು ಕೂಡ ದಿವ್ಯ ಅರವಿಂದ್ ಅವರನ್ನು ನೋಡುತ್ತಿದ್ದುದನ್ನು ಗಮನಿಸಿದರು.

ಇಬ್ಬರೂ ಕಣ್ಣಿನ ಸಲಿಗೆಯಲ್ಲಿ ಮಾತನಾಡುತ್ತಾ ನಾಚಿ ನೀರಾಗಿದ್ದರೂ ಇದನ್ನು ವೀಕ್ಷಿಸಿದವರು ಎಲ್ಲವೂ ಅಂದುಕೊಂಡಂತೆ ಆಗುತ್ತಿದೆ ಎಂಬ ವಿಭಿನ್ನವಾದ ಹೇಳಿಕೆಯೊಂದನ್ನು ನೀಡಿ ಕಾರ್ಯಕ್ರಮವನ್ನು ಅಂತ್ಯಗೊಳಿಸಿದ್ದಾರೆ. ಮುಂದೆ ಇವರ ಪ್ರೇಮ ಕಹಾನಿ ಎಲ್ಲಿಯವರೆಗೂ ತಲುಪುತ್ತದೆ ನಿಜವಾಗಿಯೂ ಈ ಜೋಡಿಗಳು ಪ್ರೀತಿಸಿ ಮದುವೆಯಾಗುತ್ತಾರಾ ಎಂಬುದನ್ನು ಕಾದು ನೋಡಬೇಕು.