ಕೃಷ್ಣ ರುಕ್ಮಿಣಿ ಧಾರಾವಾಹಿಯಲ್ಲಿ ರುಕ್ಮಿಣಿ ಪಾತ್ರಧಾರಿಯಾಗಿ ಅಭಿನಯಿಸುತ್ತಿದ್ದ ಅಂಜನ ಶ್ರೀನಿವಾಸ್ ಏನಾದರೂ?, ಈಗ ಏನು ಮಾಡುತ್ತಿದ್ದಾರೆ ಗೊತ್ತಾ…?

4

 

ಸ್ನೇಹಿತರೆ, ಬಣ್ಣದ ಲೋಕವೇ ಹಾಗೆ ಬಹಳಷ್ಟು ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಡುತ್ತದೆ ಆನಂತರ ಹೊಸ ಕಲಾವಿದರು ಬಂದ ಮೇಲೆ ಹಳೆಯ ಕಲಾವಿದರು ನೆನಪಿಗೂ ಉಳಿಯದಂತೆ ಮರೆತೆ ಹೋಗಿರುತ್ತಾರೆ. ಅದೇ ರೀತಿ ಕನ್ನಡ ಕಿರುತೆರೆಯ ಊಹಿಸಲು ಆಗದ ರೀತಿಯಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಿದ್ದ ಕೃಷ್ಣ ರುಕ್ಮಿಣಿ ಧಾರಾವಾಹಿಯಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ ಅಂಜನ ಶ್ರೀನಿವಾಸ ಎಲ್ಲಿಗೆ ಹೋದರು ಈಗ ಏನು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಬೇಕಾದರೆ ಸಂಪೂರ್ಣವಾಗಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಕನ್ನಡ ಕಿರುತೆರೆಯಲ್ಲಿ ಮಹಿಳಾ ಪ್ರಧಾನ ಧಾರಾವಾಹಿಗಳೇ ತುಂಬಿದ ಸಮಯದಲ್ಲಿ, ಧಾರಾವಾಹಿಯೊಂದು ನಾಯಕನಟನಾಗಿ ದೊಡ್ಡ ಅಭಿಮಾನಿ ಬಳಗವನ್ನು ಕಟ್ಟಿಕೊಳ್ಳುವಂತೆ ಮಾಡಿದ್ದು ಕೃಷ್ಣ ರುಕ್ಮಿಣಿ ಧಾರಾವಾಹಿ.

ನಟನೆ ಹಾಗೂ ನಿರ್ದೇಶನದ ಕನಸು ಇಟ್ಟುಕೊಂಡು ಕನ್ನಡ ಕಿರುತೆರೆಗೆ ಕಾಲಿಟ್ಟ ನಟ ಸುನಿಲ್ ಮುಂದಿನ ದಿನಗಳಲ್ಲಿ ಕೃಷ್ಣ ಹಾಗೆ ಉಳಿದರು. ಇನ್ನು ನಾಯಕ ನಟಿಯಾಗಿ ರುಕ್ಮಿಣಿ ಪಾತ್ರದಲ್ಲಿ ಅಭಿನಯಿಸಿದ್ದ ನಟಿ ಅಂಜನ ಶ್ರೀನಿವಾಸ್ ಅವರಿಗೂ ಕೂಡ ಈ ಧಾರಾವಾಹಿ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ತಂದುಕೊಟ್ಟಿತು. ಆದರೆ ಆ ಧಾರಾವಾಹಿಯ ನಂತರ ಅಂಜನ ಬೇರೆ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ ನಟಿ ಅಂಜನ ಶ್ರೀನಿವಾಸ್ ಅವರು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ.

ಹೌದು ಅಂಜನ ಶ್ರೀನಿವಾಸ್ ಎಂಬ ಹೆಸರಿನಿಂದ ನಕ್ಷತ್ರ ಶ್ರೀನಿವಾಸ ಎಂಬ ಹೆಸರನ್ನು ಬದಲಿಸಿಕೊಂಡು ಬೇರೆ ಭಾಷೆಯ ಧಾರವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ. ಕೃಷ್ಣ ರುಕ್ಮಿಣಿ ಧಾರಾವಾಹಿಯ ನಂತರ ಕನ್ನಡ ಕಿರುತೆರೆಯಿಂದ ದೂರವಾದ ನಕ್ಷತ್ರ ಶ್ರೀನಿವಾಸ್ ಮುಂದೆ ತಮಿಳು-ತೆಲುಗು ಧಾರಾವಾಹಿಗಳಲ್ಲಿ ನಕ್ಷತ್ರ ಶ್ರೀನಿವಾಸ್ ಅವರು ಜನಪ್ರಿಯರಾದರು. ಹಿರಿತೆರೆಯಿಂದ ದೂರ ಉಳಿದ ನಕ್ಷತ್ರ ಶ್ರೀನಿವಾಸ್ ಬರೋಬ್ಬರಿ ಎಂಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ನಕ್ಷತ್ರ ಸದ್ಯಕ್ಕೆ ತೆಲುಗು ಕಿರುತೆರೆಯಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ ಎನ್ನಬಹುದು. ಈ ಕನ್ನಡದ ಹುಡುಗಿಯ ಮುಂದಿನ ಜೀವನದ ದಾರಿಯು ಸುಗಮವಾಗಿರಲಿ ಎಂದು ಹಾರೈಸೋಣ.