ಪಾರು ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಪಾತ್ರಮಾಡಲು ವಿನಯ್ ಪ್ರಸಾದ್ ಅವರು ಪಡೆಯುವ ಸಂಭಾವನೆ ಎಷ್ಟು ಗೊತ್ತಾ..!

48

 

ಸ್ನೇಹಿತರೆ, ಕನ್ನಡ ಕಿರುತೆರೆಯಲ್ಲಿ ಹಲವಾರು ತಿಂಗಳುಗಳಿಂದ ಟಿಆರ್ಪಿ ಲಿಸ್ಟ್ನಲ್ಲಿ ಮೊದಲನೇ ಐದು ಧಾರಾವಾಹಿಗಳಲ್ಲಿ ಸ್ಥಾನ ಪಡೆದುಕೊಳ್ಳುತ್ತಿರುವ ಹಲವು ಧಾರಾವಾಹಿಗಳಲ್ಲಿ ಒಂದಾಗಿರುವ ಪಾರು ಧಾರಾವಾಹಿಯ ಕುರಿತು ನಿಮಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಏಕೆಂದರೆ ಇದು ಆರಂಭವಾದ ದಿನದಿಂದಲೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಎಲ್ಲಾ ಪಾತ್ರದಾರಿಗಳನ್ನು ಜನರು ಒಪ್ಪಿಕೊಂಡಿದ್ದಾರೆ. ಈ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿರುವ ಕಾರಣ ಮೊದಲ ದಿನದಿಂದಲೂ ಕೂಡ ನೋಡುಗರಿಗೆ ಬಹಳ ಇಷ್ಟವಾಗಿದ್ದು ಟಿಆರ್ಪಿ ಕೂಡ ಸಕ್ಕತ್ತಾಗಿಯೇ ಬರುತ್ತಿದೆ. ಇನ್ನು ಇದರಲ್ಲಿ ಹಲವಾರು ಪಾತ್ರಗಳು ಜನರನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿದ್ದು ಅಖಿಲಾಂಡೇಶ್ವರಿ ಪಾತ್ರ ಕೂಡ ಜನರ ಅಚ್ಚುಮೆಚ್ಚಿನ ಪಾತ್ರಗಳಲ್ಲಿ ಒಂದಾಗಿದೆ.

ಅಷ್ಟೇ ಅಲ್ಲದೆ ಸೀರಿಯಲ್ ನಾಯಕರಿಗಿಂತ ಅಖಿಲಾಂಡೇಶ್ವರಿ ಅವರೇ ಹೆಚ್ಚು ಸಂಭಾವನೆ ಪಡೆಯುತ್ತಿರುವುದಾಗಿ ಮೂಲಗಳಿಂದ ಮಾಹಿತಿ ದೊರೆತಿದೆ ಹಾಗಾದರೆ ಅಖಿಲಾಂಡೇಶ್ವರಿಯವರು ಒಂದು ಎಪಿಸೋಡ್ಗೆ ಪಡೆಯುವ ಸಂಭಾವನೆ ಎಷ್ಟು ಜನ ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಅಖಿಲಾಂಡೇಶ್ವರಿ ಪಾತ್ರದಲ್ಲಿ ವಿನಯ್ ಪ್ರಸಾದ್ ಅವರ ಗತ್ತು, ವೇಷಭೂಷಣ, ಒಡವೆಗಳು, ಸ್ಟೈಲ್ ಹಾಗೂ ಕಷ್ಟದ ಸಂದರ್ಭಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ರೀತಿ, ಮಾನವೀಯತೆ ತೋರಿಸುವ ರೀತಿ ಹೀಗೆ ಎಲ್ಲವೂ ಕೂಡ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದ್ದು ತಮಗೆ ನೀಡಿದ ಪಾತ್ರವನ್ನು ಮತ್ತೊಮ್ಮೆ ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವಲ್ಲಿ ವಿನಯಪ್ರಸಾದ್ ಅವರು ಯಶಸ್ವಿಯಾಗಿದ್ದಾರೆ.

ಎಷ್ಟೋ ಜನ ಅಭಿಮಾನಿಗಳು ಕೇವಲ ಅಖಿಲಾಂಡೇಶ್ವರಿ ಪಾತ್ರ ನೋಡಲು ಧಾರಾವಾಹಿ ನೋಡುತ್ತಾರೆ ಎಂಬುದು ಕೂಡ ಸುಳ್ಳಲ್ಲ. ಹೀಗೆ ಪ್ರೇಕ್ಷಕರಿಗೆ ಅಚ್ಚುಮೆಚ್ಚಿನ ಪಾತ್ರಗಳಲ್ಲಿ ಒಂದಾಗಿರುವ ಅಖಿಲಾಂಡೇಶ್ವರಿ ಪಾತ್ರದಲ್ಲಿ ನಟನೆ ಮಾಡಲು ವಿನಯ ಪ್ರಸಾದ್ರವರು ಒಂದು ಎಪಿಸೋಡ್ಗೆ 60000 ಸಂಭಾವನೆ ಪಡೆಯುವ ಮೂಲಕ ನಾಯಕನಟಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿರುವ ಪೋಷಕ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಾತ್ರದ ಕುರಿತು ಹಾಗೂ ವಿನಯ್ ಪ್ರಸಾದ್ ಅವರ ಅಭಿನಯದ ಕುರಿತು ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.