ಈ ಟಾಪ್ ನಟಿಗೆ ಯಾವ ಹೋಟೆಲ್ನಲ್ಲಿ ರೂಮ್ ಕೊಡ್ತಿಲ್ಲ, ಕಾರಣ ತಿಳಿದರೆ ಏನಿದು ವಿಚಿತ್ರ ಅಂತೀರಾ !!
ಸ್ನೇಹಿತರೆ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿರುವ ಈ ನಟಿ ಭಾರಿ ಬೇಡಿಕೆಯ ಕಲಾವಿದೆ ಆದರೆ ಯಾವ ಹೋಟೆಲ್ನವರು ಈ ನಟಿಗೆ ಉಳಿದುಕೊಳ್ಳಲು ರೂಮ್ ಮಾತ್ರ ಕೊಡುತ್ತಿಲ್ಲ ಇದಕ್ಕೆ ಕಾರಣ ಏನು ಎಂಬ ಪ್ರಶ್ನೆ ಕಾಡುವುದು ಸಹಜ. ಹಾಗಾದರೆ ಈ ನಟಿ ಮಾಡಿದ್ದಾದರೂ ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ದಕ್ಷಿಣ ಭಾರತದ ಟಾಪ್ ನಟಿಯಾಗಿರುವ ನಯನತಾರ ಯಾವುದೇ ಶೂಟಿಂಗ್ಗೆ ಹೋದರೂ ಆಕೆಗೆ ಫೈವ್ ಸ್ಟಾರ್ ಹೋಟೆಲ್ನ ವ್ಯವಸ್ಥೆ ಮಾಡಲೇಬೇಕು. ನಯನತಾರಾ ನಮ್ಮ ಹೋಟೆಲ್ನಲ್ಲಿ ತಂಗಿದ್ದಾರೆ ಸಾಕು ಎಂದು ಹೋಟೆಲ್ ನೋಡುತ್ತಿರುತ್ತಾರೆ.
ಆದರೆ ಹೈದರಾಬಾದ್ನ ಹೋಟೆಲ್ಗಳು ಮಾತ್ರ ನಟಿ ನಮ್ಮ ಹೋಟೆಲಿಗೆ ಬಾರದೆ ಇದ್ದರೆ ಸಾಕು ಏನೇ ಆದರೂ ಆಕೆಗೆ ಮಾತ್ರ ರೋಮ್ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದಕ್ಕೆ ಕಾರಣ ಏನು ಗೊತ್ತಾ? ನಯನತಾರಾಗೆ ತುಂಬಾ ಶಾಟ್ ಟೆಂಪರ್ ಸ್ವಲ್ಪ ಬೇಗ ಕೋಪ ಬಂದರೆ ಸಾಕು ರೂಮಿನಲ್ಲಿರುವ ವಸ್ತುಗಳನ್ನು ಒಡೆದು ಹಾಕಿ ತಾನಿರುವ ಪ್ರದೇಶವನ್ನು ಯುದ್ಧ ಭೂಮಿಯಂತೆ ಮಾಡಿಬಿಡುತ್ತಾರೆ. ಇನ್ನು ನಯನತಾರಾ ರೂಮನ್ನು ಖಾಲಿ ಮಾಡುವಾಗ ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿರುತ್ತವಂತೆ ಅದನ್ನು ಕ್ಲೀನ್ ಮಾಡುವುದಕ್ಕೆ ಹೋಟೆಲ್ನವರಿಗೆ ಕನಿಷ್ಠ ಎರಡು ದಿನ ತೆಗೆದುಕೊಳ್ಳುತ್ತದೆ. ಫೈವ್ ಸ್ಟಾರ್ ಹೋಟೆಲ್ನವರು ವಿದೇಶದಿಂದ ಭಾರಿ ದುಡ್ಡುಕೊಟ್ಟು ವಿಶೇಷವಾದ ಮತ್ತು ವಿಭಿನ್ನವಾದ ವಸ್ತುಗಳನ್ನು ತರಿಸಿ ಆಕರ್ಷಣೆಗಾಗಿ ತಮ್ಮ ಹೋಟೆಲ್ನಲ್ಲಿ ಇಟ್ಟಿರುತ್ತಾರೆ.
ಅದ್ಯಾವುದನ್ನು ನೋಡದೆ ಕೈಗೆ ಸಿಕ್ಕ ಬೆಲೆಬಾಳುವ ವಸ್ತುಗಳನ್ನು ಹೊಡೆದು ಹಾಕುತ್ತಾರಂತೆ. ನಂತರ ಈ ನಟಿ ಹಣ ಕಟ್ಟಿದ್ದರು ಅದೇ ವಸ್ತುಗಳನ್ನು ಖರೀದಿ ಮಾಡಿ ತರಿಸುವುದು ತುಂಬಾನೇ ಕಷ್ಟ ಅನ್ನುವುದು ಹೋಟೆಲ್ನವರ ಅಳಲು. ನಯನತಾರಾ ಇರುವ ಯಾವುದೇ ರೂಮ್ ಆದರೂ ಡ್ಯಾಮೇಜ್ ಆಗಿರುತ್ತದೆ ಆದ್ದರಿಂದ ಹೈದರಾಬಾದ್ನ ಹೋಟೆಲ್ ಅವರೆಲ್ಲರೂ ಡಿಸ್ಕಸ್ ಮಾಡಿಕೊಂಡು ಈ ನಟಿಗೆ ರೂಮ್ ಕೊಡಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದಾರಂತೆ. ಹಾಗಾಗಿ ಹೈದ್ರಾಬಾದ್ನಲ್ಲಿ ರೂಮ್ ಸಿಗದೇ ವಾಪಸ್ ಚೆನ್ನೈಗೆ ಹೋದ ಸಂದರ್ಭ ಕೂಡ ಎದುರಾಗಿತ್ತಂತೆ.