ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಅಮೂಲ್ಯ ಗೌಡರ ವಯಸ್ಸು ಇಷ್ಟೇನಾ! ಕಮಲಿಯ ವಯಸ್ಸು ಎಷ್ಟು ಗೊತ್ತಾ..?

6

ಸ್ನೇಹಿತರೆ, ಕನ್ನಡ ಕಿರುತೆರೆಯ ವಿವಿಧ ಧಾರಾವಾಹಿಗಳಲ್ಲಿ ನಡೆಸುವ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿರುವ ಅಮೂಲ್ಯ ಗೌಡರವರು ಇತ್ತೀಚೆಗೆ ಕಳೆದ ಕೆಲವು ವರ್ಷಗಳಿಂದ ಜೀ ಕನ್ನಡ ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿಯ ಮೂಲಕ ಮನೆಮಾತಾಗಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಯಾರಿಗುಂಟು ಯಾರಿಗಿಲ್ಲ ಕಾರ್ಯಕ್ರಮದ ಮೂಲಕ ಮೊದಲ ಬಾರಿಗೆ ಟಿವಿಯಲ್ಲಿ ಕಾಣಿಸಿಕೊಂಡರು. ಅಮೂಲ್ಯ ಗೌಡರವರಿಗೆ ಕಾರ್ಯಕ್ರಮದ ಬಳಿಕ ಅಡಿಷನಲ್ಲಿ ಭಾಗವಹಿಸುವಂತೆ ಅವಕಾಶ ನೀಡಲಾಗಿತ್ತು. ಡಿಪ್ಲೋಮೋ ಮಾಡುತ್ತಿದ್ದ ಸಂದರ್ಭದಲ್ಲಿ ಆಕ್ಟಿಂಗ್ಗಾಗಿ ಕರೆಬಂದಾಗ ಅಮೂಲ್ಯ ಗೌಡರವರು ಮೊದಲು ಸ್ವಾತಿಮುತ್ತು ಎಂಬ ಧಾರವಾಹಿಗೆ ಆಯ್ಕೆಯಾಗುತ್ತಾರೆ.

ಈ ಧಾರವಾಹಿಯಲ್ಲಿ ಕೆಲವು ತಿಂಗಳುಗಳ ಕಾಲ ನಟನೆ ಮಾಡಿದ ನಂತರ ಕನ್ನಡದ ಧಾರಾವಾಹಿಗಳಲ್ಲಿ ಒಂದಾಗಿರುವ ಪುನರ್ವಿವಾಹ ಧಾರಾವಾಹಿಯಲ್ಲಿ ನಟಿಸುವ ಅವಕಾಶಪಡೆದುಕೊಂಡರು. ಇದರಿಂದಾಗಿ ಉದಯ ಟಿವಿಯಲ್ಲಿ ಪ್ರಸಾರವಾದ ಅರಮನೆ ಸೀರಿಯಲ್ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಅರಮನೆ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ ಪಾತ್ರ ಇದ್ದರೂ ಕೂಡ ಬಹಳ ಅದ್ಭುತವಾಗಿ ನಟನೆ ಮಾಡಿರುವ ಇವರು ಇಲ್ಲಿಯವರೆಗೂ ಯಾವುದೇ ನಟನೆಯ ತರಬೇತಿ ಪಡೆದುಕೊಂಡಿಲ್ಲ ಎಂಬುದು ನಿಜಕ್ಕೂ ಒಂದು ಆಶ್ಚರ್ಯದ ಸಂಗತಿ. ಕೇವಲ ಕ್ಯಾಮೆರಾ ಮುಂದೆ ನಿಂತುಕೊಂಡು ನಟನೆಯನ್ನು ಕಲಿತು ಬಹಳ ಅದ್ಭುತವಾಗಿ ನಟನೆ ಮಾಡುವ ಇವರು ಅರಮನೆ ಧಾರಾವಾಹಿಯಲ್ಲಿ ಯಶಸ್ಸುಗಳಿಸಿದ ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿಯ ನಾಯಕಿಯಾಗಿ ನಟಿಸುವ ಅವಕಾಶ ಪಡೆದುಕೊಳ್ಳುತ್ತಾರೆ.

ನಿಜ ಜೀವನದಲ್ಲಿ ಬಹಳ ಮಾಡ್ರನ್ ಆಗಿರುವ ಅಮೂಲ್ಯ ಗೌಡರವರಿಗೆ ಕಮಲಿ ಧಾರಾವಾಹಿಯಲ್ಲಿ ಸಿಕ್ಕಿದ್ದು ಪಕ್ಕಾ ಹಳ್ಳಿ ಹುಡುಗಿಯ ಪಾತ್ರ. ಎರಡು ಜಡೆ ಎಂದರೆ ಇಷ್ಟವಾಗದ ಇವರಿಗೆ ನಟನೆಗಾಗಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಅಭಿನಯ ಮಾಡಲು ಒಪ್ಪಿಕೊಂಡರು. ಹೀಗೆ ಒಪ್ಪಿಕೊಂಡು ಇವರು ಸುಮ್ಮನೆ ಕೂರಲಿಲ್ಲ ಬದಲಾಗಿ ತಮಗೆ ನೀಡಿದ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಮೂಲಕ ನಿಜಕ್ಕೂ ಅಮೂಲ್ಯ ಗೌಡರವರು ಹಳ್ಳಿಯ ಹುಡುಗಿ ಆಗಿರಬೇಕು ಅದೇ ಕಾರಣಕ್ಕೆ ಬಹಳ ಅದ್ಭುತವಾಗಿ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೂಡ ಕಮಲಿ ಧಾರಾವಾಹಿಯ ಪ್ರೇಕ್ಷಕರಲ್ಲಿ ಕೇಳಿ ಬರುವಂತೆ ನಟನೆ ಮಾಡುತ್ತಿದ್ದಾರೆ. ಇನ್ನು ತೆರೆ ಮೇಲೆ ಲಂಗ ದಾವಣಿಯಲ್ಲಿ ಬಹಳ ಸುಂದರವಾಗಿ ಕಾಣುವ ಅಮೂಲ್ಯ ಜೀವನದಲ್ಲಿ ಮಾತ್ರ ಫುಲ್ಲು ಮಾಡ್ರನ್.

ಆದರೆ ತೆರೆಯ ಮೇಲೆ ಮಾತ್ರ ನಿಜಕ್ಕೂ ಇವರು ಹಳ್ಳಿಯ ಹುಡುಗಿಯ ಎಂಬಂತೆಯೇ ನಟನೆ ಮಾಡುವುದನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ಇನ್ನು ಇವರ ವೈಯಕ್ತಿಕ ಜೀವನದ ಕುರಿತು ನಾವು ಮಾತನಾಡುವುದಾದರೆ ಅಮೂಲ್ಯ ಗೌಡರವರು ಮೂಲತಃ ಬೆಂಗಳೂರಿನವರಾಗಿದ್ದಾರೆ. ಬೆಂಗಳೂರಿನಲ್ಲಿಯೇ ಡಿಪ್ಲೋಮ ಓದಿ ಮುಗಿಸಿ ತದನಂತರ ಧಾರಾವಾಹಿಗಳಲ್ಲಿ ಚಾನ್ಸ್ ಸಿಕ್ಕ ಕಾರಣ ಮುಂದೆ ಓದಲು ಸಾಧ್ಯವಾಗಲಿಲ್ಲ ಹೆಚ್ಚು ಭಾಷೆಗಳಲ್ಲಿ ಸರಾಗವಾಗಿ ಮಾತನಾಡಬಲ್ಲ ಇವರು ಕಾರು ಹಾಗೂ ಬೈಕ್ ಗಳನ್ನು ಬಹಳ ಸುಲಭವಾಗಿ ಓಡಿಸುತ್ತಾರೆ. ಇನ್ನು ಇವರು ಹುಟ್ಟಿದ ದಿನಾಂಕವನ್ನು ನಾವು ನೋಡುವುದಾದರೆ 1993 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಇವರಿಗೆ 27 ವರ್ಷ. ಮೊದಲ ದಿನ ಅಂದರೆ ಜನವರಿ ಒಂದನೇ ತಾರೀಕಿನಂದು ಹುಟ್ಟಿರುವುದು ವಿಶೇಷ. ಕಮಲಿ ಧಾರಾವಾಹಿಯ ಅಮೂಲ್ಯ ಗೌಡರವರ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.