ಪುನೀತ್ ರಾಜಕುಮಾರ್ ಅವರ ಯುವರತ್ನ ಸಿನಿಮಾಗೆ ಪ್ರತಿಕ್ರಿಯಿಸಿದ ಮಹೇಶ್ ಬಾಬು ಹೇಳಿದ್ದೇನು ಗೊತ್ತಾ..!

4

ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಯುವರತ್ನ ಚಿತ್ರ ಅತ್ಯುತ್ತಮವಾದ ಸಾಮಾಜಿಕ ಸಂದೇಶವನ್ನು ಹೊಂದಿದ್ದು ರಾಜ್ಯದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಹಾಮಾರಿ ಕೊರೋನಾದ ಕಾರಣದಿಂದ ಸಿನಿಮಾ ಅಭಿಮಾನಿಗಳು ಮಾಸ್ಕ್ ಧರಿಸಿಕೊಂಡು ಎಲ್ಲ ಮುಂಜಾಗ್ರತಾ ಕ್ರಮಗಳು ಪಾಲಿಸುತ್ತ ಸಿನಿಮಾವನ್ನು ನೋಡಲು ಥಿಯೇಟರ್ಗಳಿಗೆ ಹೋಗುತ್ತಿದ್ದಾರೆ. ಈ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದ್ದು ಚಿತ್ರಕ್ಕೆ ಆಂಧ್ರ ಮತ್ತು ತೆಲಂಗಾಣದಲ್ಲಿ ಕೂಡ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೆ ಸಾಕಷ್ಟು ತೆಲುಗು ನಟರು ಕೂಡ ಸಿನಿಮಾದ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೀಗ ಸುಪರ್ ಸ್ಟಾರ್ ಮಹೇಶ್ ಬಾಬುರವರು ಯುವರತ್ನ ಸಿನಿಮಾದ ಕುರಿತು ಯಾವ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಯುವರತ್ನ ಸಿನಿಮಾದ ಯಶಸ್ಸಿನ ಖುಷಿಯಲ್ಲಿ ನಟ ಪುನೀತ್ ರಾಜಕುಮಾರ್ ಅವರು ಮಂತ್ರಾಲಯಕ್ಕೆ ಭೇಟಿ ನೀಡಿ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ಪುನೀತ್ ಅವರ ಜೊತೆ ನಿರ್ದೇಶಕ ಸಂತೋಷ್ ಆನಂದ್ ರಾಮ್, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ಡೈರೆಕ್ಟರ್ ಯೋಗಿಜೀ ರಾಜ್ ಗೌಡ ರಾಘವೇಂದ್ರಸ್ವಾಮಿಗಳ ಮಠಾಧೀಶರಾದ ಸುಗು ದೇವತೀರ್ಥ ಸ್ವಾಮಿಗಳ ಆಶೀರ್ವಾದ ಪಡೆದುಕೊಂಡಿದ್ದಾರೆ. ಯುವರತ್ನ ಸಿನಿಮಾ ಬಿಡುಗಡೆಯಾದ ನಂತರ ಒಳ್ಳೆಯ ವಿಮರ್ಶೆಯನ್ನು ಪಡೆದುಕೊಂಡಿದ್ದು ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದೀಗ ಚಿತ್ರದ ಬಗ್ಗೆ ಮಾತನಾಡಿರುವ ಮಹೇಶ್ ಬಾಬು ಅವರು ಯುವರತ್ನ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಚಿತ್ರದಲ್ಲಿ ಸರ್ಕಾರಿ ಕಾಲೇಜುಗಳು ಮತ್ತು ಸಮಾಜದ ಬಗ್ಗೆ ಒಂದು ಉತ್ತಮ ಸಂದೇಶವಿದೆ ಎಂಬುದನ್ನು ಕೇಳಲು ಪಟ್ಟಿದ್ದೇನೆ ಆದಷ್ಟು ಬೇಗ ನಾನು ಕೂಡ ಈ ಸಿನಿಮಾ ನೋಡುತ್ತೇನೆ.

ಪುನೀತ್ ಮತ್ತು ಅವರ ಕುಟುಂಬವನ್ನು ನಾನು ಬಹಳ ಇಷ್ಟಪಡುತ್ತೇನೆ ಈ ಚಿತ್ರ ಇನ್ನೂ ಹೆಚ್ಚೆಚ್ಚು ದಾಖಲೆಗಳನ್ನು ಬರೆಯಲು ಎಂದು ಶುಭ ಹಾರೈಸುತ್ತಾ ತಮ್ಮ ಅಭಿಮಾನಿಗಳಿಗೂ ಕೂಡ ಇವರ ಚಿತ್ರವನ್ನು ನೋಡುವಂತೆ ಹೇಳಿದ್ದಾರೆ. ಅದೇ ರೀತಿ ಮಹೇಶ್ ಬಾಬು ಅವರ ಅಭಿಮಾನಿಗಳು ಕೂಡ ಈ ಚಿತ್ರಕ್ಕೆ ಸಹಕಾರವನ್ನು ನೀಡಿದ್ದಾರೆ. ನಿಮ್ಮ ಪ್ರಕಾರ ಈ ಚಿತ್ರ ಒಟ್ಟಾರೆಯಾಗಿ ಎಷ್ಟು ಕಲೆಕ್ಷನ್ ಮಾಡಬಹುದು ಎಂಬುದನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.