KGF 2 ಗೆ ಪ್ರಕಾಶ್ ರೈ ಬರಲಿದ್ದು ಅನಂತನಾಗ್ ನಿಜವಾಗಿ ಇರೋದಿಲ್ವಾ ?? ಅಧಿಕೃತವಾಗಿ ಪ್ರಶಾಂತ ನೀಲ್ ಸ್ಪಷ್ಟನೆ ಕೊಟ್ಟಿದ್ದಾರೆ ನೋಡಿ !!

1

ಸ್ನೇಹಿತರೆ, ಭಾರತದಾದ್ಯಂತ ಅಷ್ಟೇ ಅಲ್ಲದೆ ಇಡೀ ವಿಶ್ವದ ಹಲವು ದೇಶಗಳಲ್ಲಿಯೂ ಸುದ್ದಿ ಮಾಡುತ್ತಿರುವಂತಹ ಕನ್ನಡದ ಕೆಜಿಎಫ್ ಚಲನಚಿತ್ರದ ಎರಡನೇ ಭಾಗ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಎಲ್ಲಾ ಚಿತ್ರರಂಗಗಳ ಅಭಿಮಾನಿಗಳು ಕೆಜಿಎಫ್ ಚಾಪ್ಟರ್ ಟು ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಟೀಸರ ಭಾರಿ ಸದ್ದು ಮಾಡಿತ್ತು. ಕೆಜಿಎಫ್ ಚಾಪ್ಟರ್ 1 ಸೂಪರ್ ಹಿಟ್ ಆಗಿ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿತ್ತು. ಇದೀಗ ಕೆಜಿಎಫ್ ಟು ಮೇಲೆ ಅಪಾರವಾದಂತಹ ನಿರೀಕ್ಷೆಯಿದ್ದು ಇದೇ ವೇಳೆ ಕೆಲ ತಿಂಗಳುಗಳ ಹಿಂದೆ ಕೆಜಿಎಫ್ ಟು ಚಿತ್ರತಂಡ ವಿವಾದಕ್ಕೆ ಸಿಲುಕಿತ್ತು.

ಕೆಜಿಎಫ್ ಚಾಪ್ಟರ್ 1ರಲ್ಲಿ ಮಿಂಚಿದ ಕನ್ನಡದ ಹಿರಿಯ ನಟ ಅನಂತನಾಗ್ ಅವರನ್ನು ಕೈಬಿಡಲಾಗಿದೆ ಎನ್ನುವ ಸುದ್ದಿ ಆಕ್ಷೇಪಕ್ಕೆ ಕಾರಣವಾಗಿತ್ತು. ದಯವಿಟ್ಟು ಸಿನಿಮಾ ಬಿಡುಗಡೆಯವರೆಗೆ ಕಾದು ನೋಡಿ ಎಂದು ಚಿತ್ರತಂಡ ಕೇಳಿಕೊಂಡಿತ್ತು. ಕೆಜಿಎಫ್ ಚಾಪ್ಟರ್ 1ರಲ್ಲಿ ಆನಂದ್ ಇಂಗಳಗಿ ಎನ್ನುವ ಹಿರಿಯ ಪತ್ರಕರ್ತನ ಪಾತ್ರದಲ್ಲಿ ಅನಂತನಾಗ ಕಾಣಿಸಿಕೊಂಡಿದ್ದರು. ಅನಂತನಾಗ್ ಅವರು ಸಿನಿಮಾ ಕಥೆಯನ್ನು ಅಚ್ಚುಕಟ್ಟಾಗಿ ವಿವರಿಸಿದ್ದರು. ಇದೀಗ ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಚಿತ್ರದಲ್ಲಿನ ಪ್ರಕಾಶ್ ರೈ ಹಾಗೂ ಅನಂತನಾಗ್ ರವರ ಪಾತ್ರಗಳು ಕುರಿತು ಮಾಹಿತಿ ನೀಡಿದ್ದಾರೆ.

ಬಹುಭಾಷಾ ನಟ ಪ್ರಕಾಶ್ ರೈರವರ ಹುಟ್ಟುಹಬ್ಬವಿದ್ದ ಕಾರಣದ ಹಿನ್ನೆಲೆಯಲ್ಲಿ ಪ್ರಶಾಂತ್ ನೀಲ್ ವಿಶೇಷವಾದಂತಹ ಶುಭ ಸಂದೇಶದಲ್ಲಿ ಪ್ರಕಾಶ್ ರೈ ಅವರ ಪಾತ್ರದ ಕುರಿತು ಮಾಹಿತಿ ನೀಡಿದ್ದಾರೆ. ಪ್ರಕಾಶ್ ರೈರವರ ಹುಟ್ಟುಹಬ್ಬದ ಪೋಸ್ಟ್ನಲ್ಲಿ ಪ್ರಕಾಶ್ ರೈರವರನ್ನು ವಿಜಯೇಂದ್ರ ಇಂಗಳಗಿ ಎಂದು ಕರೆದಿದ್ದಾರೆ. ಆ ಮೂಲಕ ಆನಂದ್ ಇಂಗಳಗಿ ಹಾಗೂ ವಿಜಯೇಂದ್ರ ಇಂಗಳಗಿ ಎರಡು ಪ್ರತ್ಯೇಕ ಪಾತ್ರಗಳ ಆಗಿದ್ದು, ಅನಂತ್ ನಾಗ್ ಕೂಡ ಸಿನಿಮಾದಲ್ಲಿ ಇರಲಿದ್ದಾರೆ ಎನ್ನುವ ವಿಷಯ ಹೊರಬಿದ್ದಿದೆ.

ಕೆಜಿಎಫ್ ಚಪ್ಟರ್ ಟು ನಲ್ಲಿ ವಿಜಯೇಂದ್ರ ಇಂಗಳಗಿಯಾಗಿ ಪ್ರಕಾಶ್ ರೈ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅನಂತ ನಾಗ್ ಪಾತ್ರವೇ ಬೇರೆ ಪ್ರಕಾಶ್ ರೈಯವರ ಪಾತ್ರವೇ ಬೇರೆ ಎಂಬುವುದನ್ನು ಚಿತ್ರತಂಡ ಸ್ಪಷ್ಟವಾಗಿ ತಿಳಿಸಿ ದಂತಾಗಿದೆ ಚಾಪ್ಟರ್ ಒಂದುರಲ್ಲಿ ಆನಂದ್ ಇಂಗಳಗಿ ಪಾತ್ರ ಸಿನಿಮಾದ ಕಥೆಯನ್ನು ರೋಮಾಂಚನಕಾರಿಯಾಗಿ ವಿವರಿಸಿತ್ತು. ಚಾಪ್ಟರ್ ಟು ನಲ್ಲಿ ಇಂಗಳಗಿ ಹೆಸರಿನಲ್ಲಿ ಎರಡು ಪಾತ್ರಗಳು ಇರುವುದು ಕುತೂಹಲಕ್ಕೆ ಕಾರಣವಾಗಿದೆ. ಹೀಗಾಗಿ ಇಂತಹ ಕುತೂಹಲಕ್ಕೆ ಬ್ರೇಕ್ ಹಾಕಲು ಚಿತ್ರ ರಿಲೀಸ್ ಆಗುವ ದಿನದವರೆಗೂ ಕಾಯಲೇಬೇಕು…