ಬಿಗ್ ಬ್ರೇಕಿಂಗ್ ನ್ಯೂಸ್ : ಕರುವಾಗಿ ಹುಟ್ಟಿಬಂದ ಲಿಂಗೈಕ್ಯ ಮೂಕಪ್ಪ ಸ್ವಾಮಿಗಳು, ಕೈ ಎತ್ತಿ ಮುಗಿದ ಭಕ್ತರು !!

21

ಸ್ನೇಹಿತರೆ, ಹಾವೇರಿ ತಾಲ್ಲೂಕಿನ ಕಬ್ಬೂರ ಗ್ರಾಮದ ನಾಗರಾಜ ಮತ್ತಿಹಳ್ಳಿ ಎಂಬುವವರ ಮನೆಯಲ್ಲಿ ಮಾರ್ಚ್ 14 ನೇ ತಾರೀಖಿನಂದು ಆಕಳು ಗಂಡು ಕರು ಒಂದಕ್ಕೆ ಜನ್ಮ ನೀಡಿತ್ತು. ಈ ವಿಷಯ ಎಲ್ಲೆಡೆ ಬಾರಿ ಗಮನ ಸೆಳೆದಿದೆ ಹೌದು ಕಳೆದ ಒಂದು ವರ್ಷದ ಹಿಂದೆ ಲಿಂಗೈಕ್ಯರಾಗಿರೋ ಮಠದ ಮೂಕಪ್ಪ ಸ್ವಾಮಿಗಳೇ ರೈತ ನಾಗರಾಜ ಮನೆಯಲ್ಲಿ ಕರುವಾಗಿ ಜನ್ಮತಳೆದು ಬಂದಿದ್ದಾರೆ ಎಂದು ಸುದ್ದಿಯಾಗಿದೆ. ಅಷ್ಟೇ ಅಲ್ಲದೆ ಇದನ್ನು ಸಾಬೀತುಪಡಿಸಲು ಕೆಲವು ಪರೀಕ್ಷೆಗಳು ನಡೆದಿವೆ ವೃಷಭರೂಪಿ ಆಗಿರೋ ಮಠದ ಮೂಕಪ್ಪ ಸ್ವಾಮೀಜಿಯವರು ಲಿಂಗೈಕ್ಯರಾದ ನಂತರ ರೈತರೊಬ್ಬರ ಮನೆಯಲ್ಲಿ ಮರುಜನ್ಮ ಪಡೆಯುತ್ತಾರೆ ಎಂಬ ನಂಬಿಕೆ ನೂರಾರು ವರ್ಷಗಳಿಂದ ಇಲ್ಲಿ ನಡೆದುಕೊಂಡು ಬಂದಿದೆ.

ಜನಿಸಿದ ಗಂಡು ಕರು ನಾಲ್ಕು ದಿನಗಳ ಕಾಲ ತಾಯಿಯ ಹಾಲು ಸೇವಿಸಲಿಲ್ಲವಂತೆ ಪಶು ವೈದ್ಯರಿಗೆ ತೋರಿಸಿ ಏನೆಲ್ಲ ಮಾಡಿದರೂ ಮಾತ್ರ ತಾಯಿಯ ಹಾಲು ಸೇವಿಸುತ್ತಿರಲಿಲ್ಲ ಈ ವಿಷಯ ಬ್ಯಾಡಗಿ ತಾಲೂಕಿನ ಗುಡ್ಡದಮಲ್ಲಾಪುರ ಸ್ವಾಮೀಜಿಯವರ ಮಠದ ಗಮನಕ್ಕೆ ಬಂದಿದೆ. ಸಂಪ್ರದಾಯದ ಪ್ರಕಾರ ಕರು ಜನಿಸಿದ ನಂತರದಲ್ಲಿ ಯಾವ ಕರು ತಾಯಿಯ ಹಾಲು ಕುಡಿಯುವುದಿಲ್ಲವೋ ಆಗ ಮಠದ ಧರ್ಮದರ್ಶಿಗಳು ಆ ಕರುವನ್ನು ಮೂರು ರೀತಿಯ ಪರೀಕ್ಷೆಗಳಲ್ಲಿ ಒಡ್ಡುತ್ತಾರಂತೆ. ಆಗ ಕಾರು ಮೂರು ರೀತಿಯ ಪರೀಕ್ಷೆಗಳಲ್ಲಿ ಯಶಸ್ವಿಯಾದರೆ ಕರುವಿನ ರೂಪದಲ್ಲಿ ಮೂಕಪ್ಪ ಸ್ವಾಮೀಜಿ ಜನಿಸಿ ಬಂದಿದ್ದಾರೆ ಅಂತ ನಂಬಿ ಒಂಬತ್ತು ತಿಂಗಳ ಬಳಿಕ ಕರುವಿಗೆ ಪಟ್ಟಾಧಿಕಾರ ಮಾಡಲಾಗುತ್ತದೆ.

ಮಠದ ಧರ್ಮದರ್ಶಿ ಬಂದು ಕೂತರೆ ಸಾಕ್ಷಾತ ಲಿಂಗೈಕ್ಯ ಶ್ರೀ ಗಳ ರೂಪದಲ್ಲಿ ಜನಿಸಿರುವ ಕರು ಅವರನ್ನು ಗುರುತಿಸಬೇಕು. ನಂತರದಲ್ಲಿ ಧರ್ಮದರ್ಶಿ ಮಠದಿಂದ ತಂದಿರುವ ಪ್ರಸಾದದ ಚೀಲವನ್ನು ಸಹಾ ಗುರುತಿಸಬೇಕು, ಇನ್ನು ಕೊನೆಯದಾಗಿ ಮಠದಿಂದ ತಂಗಿದ್ದಾರೆ ಪ್ರಸಾದ ಕುಡಿಸಿದರೆ ಆಗ ಕರು ತಾಯಿಯ ಹಾಲು ಕುಡಿಯುತ್ತದೆ. ಈ ಮೂರು ರೀತಿಯ ಪರೀಕ್ಷೆ ನಡೆದ ಮೇಲೆ ಲಿಂಗಾಯತ ಸ್ವಾಮಿ ಜನಿಸಿ ಬಂದಿದ್ದಾರೆ ಎಂದು ನಂಬಲಾಗುತ್ತದೆ. ಈ ಪರೀಕ್ಷೆಗಳಲ್ಲಿ ಕರು ಯಶಸ್ವಿಯಾಗಿದ್ದು ಲಿಂಗೈಕ್ಯ ಮೂಕಪ್ಪ ಸ್ವಾಮೀಜಿಯ ಪ್ರತಿರೂಪವಾಗಿದೆ ಎಂದು ದಿನಕ್ಕೆ ಮೂರು ಬಾರಿ ಪೂಜೆ ಮಾಡಲಾಗುತ್ತಿದೆ. ಸುತ್ತಮುತ್ತಲಿನ ಜನರು ಮೂಕಪ್ಪ ಸ್ವಾಮೀಜಿಯವ ರೇ ಜನಿಸಿದ್ದಾರೆ ಎಂದು ಕರುವನ್ನು ನೋಡಿಕೊಂಡು ಕರುವಿನ ರೂಪದಲ್ಲಿರುವ ಸ್ವಾಮೀಜಿ ಆಶೀರ್ವಾದ ಪಡೆಯುತ್ತಿದ್ದಾರೆ…