ಬಾಲಿವುಡ್ ಅಂಗಳದಲ್ಲಿ ರಶ್ಮಿಕಾ ಜಾಕ್ಪಾಟ್..! ಹೊಸ ಚಿತ್ರಕ್ಕೆ ಕೊಡಗಿನ ಬೆಡಗಿಯ ಸಂಭಾವನೆ ಎಷ್ಟು ಗೊತ್ತಾ ? ಯಪ್ಪಾ ಇಷ್ಟೊಂದ !!

6

ಸ್ನೇಹಿತರೆ, ಸದ್ಯ ಸ್ಯಾಂಡಲ್ವುಡ್, ಬಾಲಿವುಡ್, ಟಾಲಿವುಡ್ ಬಹುಭಾಷೆಗಳಲ್ಲಿ ರಶ್ಮಿಕಾರದ್ದೆ ಮಾತು. ಹೇಗೆ ಸಾಲು-ಸಾಲು ಸಿನಿಮಾದಲ್ಲಿ ಬಿಸಿಯಾಗಿದ್ದಾರೋ ರಶ್ಮಿಕಾ ತಮ್ಮ ಸಿನಿಮಾ ಸಂಖ್ಯೆಯ ಜೊತೆ ಸಂಭಾವನೆಯನ್ನು ಸಹ ಹೆಚ್ಚಿಸಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ತೆಲುಗು-ತಮಿಳಿನಲ್ಲಿ ಬಿಜಿಯಾಗಿದ್ದ ರಶ್ಮಿಕ ಈಗ ಬಾಲಿವುಡ್ನಲ್ಲಿ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಬಹುಭಾಷಾ ಸಿನಿಮಾಗಳಲ್ಲಿ ಬಿಸಿಯಾದ ರಶ್ಮಿಕಾ ಸಂಭಾವನೆಯಲ್ಲಿ ಕೂಡ ಗಡಿ ದಾಟಿದ್ದಾರೆ. ಬಾಲಿವುಡ್ನ ಮೊದಲ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ನಟಿಸುವ ಅವಕಾಶ ಪಡೆದಿರುವ ರಶ್ಮಿಕಾ ಈ ಸಿನಿಮಾದಲ್ಲಿ ಅಮಿತಾ ಬಚ್ಚನ್ ಮಗಳು ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಬಾಲಿವುಡ್ನಲ್ಲಿ ನಟಿಸುತ್ತಿರುವ ರಶ್ಮಿಕ ಮಂದಣ್ಣ ಪಡೆದಿರುವ ಸಂಭಾವನೆಯಾದರೂ ಎಷ್ಟು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.ವಿಕಾಸ ಬಹ್ಲ್ ನಿರ್ದೇಶನದ ಈ ಸಿನಿಮಾಗಾಗಿ ರಶ್ಮಿಕ ಸಂಭಾವನೆಯನ್ನು ಏರಿಸಿಕೊಂಡಿದ್ದಾರೆ ಹೌದು ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆಯನ್ನು ರಶ್ಮಿಕಾ ಮಂದಣ್ಣರವರು ಈ ಚಿತ್ರಕ್ಕಾಗಿ ಪಡೆಯುತ್ತಿದ್ದಾರಂತೆ. ಆರಂಭದಲ್ಲಿ ರಶ್ಮಿಕಾ, ಬಿಗ್ ಬಿ ಪ್ರಮುಖ ಪಾತ್ರದಲ್ಲಿರೋ ಈ ಸಿನಿಮಾಗೆ ಡೆಡ್ಲಿ ಎಂದು ಹೆಸರಿಡಲಾಗಿತ್ತು ಆದರೆ ಈಗ ಆ ಚಿತ್ರದ ಟೈಟಲ್ನ ಕೂಡ ಗುಡ್ ಬಾಯ್ ಎಂದು ಬದಲಿಸಲಾಗಿದೆ.

ಮಾರ್ಚ್ 29ರಂದು ಗುಡ್ ಬಾಯ್ ಶೂಟಿಂಗ್ ಆರಂಭವಾಗಲಿದ್ದು ರಶ್ಮಿಕಾ ಸಿನಿಮಾ ತಂಡವನ್ನು ಸೇರಿಕೊಳ್ಳಲಿದ್ದಾರೆ. ಬಾಲಿವುಡ್ನ ಮೊದಲ ಚಿತ್ರಕ್ಕೆ 5 ಕೋಟಿ ಸಂಭಾವನೆ ಪಡೆದಿರೋ ರಶ್ಮಿಕಾ ಸಕ್ಕತ್ ಖುಷಿಯಾಗಿದ್ದು ಮುಂಬೈನಲ್ಲಿ ಅರಾಮಿ ಫ್ಲೈಟ್ ಕರಿದಿಸಿ ಸೆಟ್ಲ್ ಆಗ್ತಿದ್ದಾರಂತೆ. ಪೊಗರು ಬಳಿಕ ಕನ್ನಡದ ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳದ ರಶ್ಮಿಕಾ ಬೇರೆ ಭಾಷೆಯ ದುಬಾರಿ ಸಂಭಾವನೆ ಅದ್ದೂರಿ ಸಿನಿಮಾಗಳ ಬಳಿಕ ಮತ್ತೆ ಕನ್ನಡಕ್ಕೆ ಮರಳೋದು ಅನುಮಾನ ಎನ್ನುತ್ತಿದ್ದಾರೆ ಸಿನಿಮಾ ಮಂದಿ. ಅಷ್ಟೇ ಅಲ್ಲದೆ ಕನ್ನಡದ ಅಭಿಮಾನಿಗಳಲ್ಲಿ ಸಹ ಬೇಸರವನ್ನುಂಟು ಮಾಡಿದ್ದಾರೆ…