ಒಂದಕ್ಕೆ 1$, 3 ಕ್ಕೆ 10 $ ಬೋರ್ಡ್ ಹಾಕಿ ಹಣ್ಣು ಮಾಡುತ್ತಿದ್ದವನಿಗೆ ಕಿಚಾಯಿಸಿದ ಯುವಕನಿಗೆ ಅಂಗಡಿಯವನು ಕೊಟ್ಟ ಟಾಂಗ್ ಹೇಗಿತ್ತು ನೋಡಿ !!
ಸ್ನೇಹಿತರೆ, ಈಗಿನ ಸ್ಪರ್ಧಾತ್ಮಕ ವ್ಯಾಪಾರ ವ್ಯವಹಾರಗಳು ಗ್ರಾಹಕರನ್ನು ಸೆಳೆಯಲು ಡಿಸ್ಕೌಂಟ್ಗಳ ಮೇಲೆ ಡಿಸ್ಕೌಂಟ್ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಪ್ರತಿಸ್ಪರ್ಧಿಗಳಿಂದ ತಮ್ಮತ್ತ ಸೆಳೆಯುವಲ್ಲಿ ವ್ಯಾಪಾರಿಗಳು ನಿರತರಾಗಿರುತ್ತಾರೆ. ವ್ಯಾಪಾರ ಕ್ಷೇತ್ರ ಹೇಗಿದೆ ಎಂದರೆ ಒಂದು ವಸ್ತುವನ್ನು ಕಡಿಮೆ ಮಾಡಬೇಕು ಎಂದುಕೊಂಡಿದ್ದ ಗ್ರಾಹಕರಿಗೆ ಒಂದಕ್ಕಿಂತ ಹೆಚ್ಚು ಕೊಂಡರೆ ಡಿಸ್ಕೌಂಟ್ ಎಂಬ ಲೇಬಲ್ ಹಚ್ಚಿ ಹೆಚ್ಚು ವಸ್ತುಗಳನ್ನು ಖರೀದಿ ಮಾಡಿಸುವಲ್ಲಿ ವ್ಯಾಪಾರಿಗಳು ಪ್ರಬಲರಾಗಿದ್ದಾರೆ. ಕೊಳ್ಳುವವರು ಕೂಡ ಡಿಸ್ಕೌಂಟ್ ಹೆಚ್ಚಿದ್ದರೆ ಹೆಚ್ಚು ಸಾಮಗ್ರಿಗಳನ್ನು ಕೊಂಡುಕೊಳ್ಳುತ್ತಾರೆ.
ಇದೇ ರೀತಿ ಒಬ್ಬ ಕಲ್ಲಂಗಡಿ ವ್ಯಾಪಾರಿ ವಿದೇಶದಲ್ಲಿ ಒಂದು ಕಲ್ಲಂಗಡಿ ಹಣ್ಣಿಗೆ $3 (ಸರಿಸುಮಾರು 225 ರೂಪಾಯಿ) ಮೂರು ಹಣ್ಣಿಗೆ $10 (ಸರಿಸುಮಾರು 1150 ರೂಪಾಯಿ) ಎಂದು ಬೋರ್ಡ್ ಹಾಕಿಕೊಂಡು ವ್ಯಾಪಾರ ಮಾಡಿರುತ್ತಾನೆ. ಇದೇನಪ್ಪ ಒಂದು ಕೊಂಡರೆ $3 ಮೂರು ಕೊಂಡರೆ $10 ಹಾ ? ಹೆಚ್ಚು ಖರೀದಿ ಮಾಡಿದರೆ ಕಡಿಮೆ ಬೆಲೆಗೆ ನೀಡಬೇಕು ಬದಲಾಗಿ ಒಂದು ಡಾಲರ್ ಹೆಚ್ಚು ಯಾಕೆ ಎಂದು ಪ್ರಶ್ನೆ ಹುಟ್ಟುತ್ತದೆಯೇ ಇಲ್ಲಿಯೂ ಒಬ್ಬ ಯುವಕನಿಗೆ ಇಂತಹದ್ದೊಂದು ಪ್ರಶ್ನೆ ಮೂಡಿದೆ. ಆ ಪ್ರಶ್ನೆಗೆ ವ್ಯಾಪಾರಿ ಕೊಟ್ಟ ಉತ್ತರವೇನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಇದನ್ನು ಕಂಡ ಒಬ್ಬ ಯುವಕ ತಾನೇ ಅರ್ಥಶಾಸ್ತ್ರದಲ್ಲಿ ಪ್ರವೀಣ ಎಂದುಕೊಂಡು ವ್ಯಾಪಾರಿ ಬಳಿಹೋಗಿ ಒಂದು ಕಲ್ಲಂಗಡಿ ಹಣ್ಣು ಕೊಂಡನು $3 ಪಾವತಿ ಮಾಡಿದ ನಂತರ ಮತ್ತೊಂದು ನೀಡುವಂತೆ ಕೇಳಿದನು. ಇದಕ್ಕೆ ಮತ್ತೊಮ್ಮೆ $3 ಪಾವತಿ ಮಾಡಿ ಮೂರನೇ ಹಣ್ಣನ್ನು ಕೂಡ ಖರೀದಿ ಮಾಡಿದನು ಇದಾದ ಬಳಿಕ ಪ್ಯಾಕ್ ಮಾಡಿಸಿಕೊಂಡು ಹೊರಡುವಾಗ ನಗುತ ವ್ಯಾಪಾರಿಯ ಬಳಿ ನಾನೇನು ಮಾಡಿದೆ ನಿಮಗೆ ತಿಳಿಯಿತೇ ನೀವು $10 3 ಕಲ್ಲಂಗಡಿಯನ್ನು ಎಂದು ಬೋರ್ಡ್ ಹಾಕಿದ್ದೀರಾ ಆದರೆ ನಾನು ಒಂಬತ್ತು ಡಾಲರಿಗೆ 3 ಕಲ್ಲಂಗಡಿ ಹಣ್ಣನ್ನು ಖರೀದಿ ಮಾಡಿದೆ. ಅಷ್ಟೇ ಅಲ್ಲದೆ ನಿಮಗೆ ವ್ಯಾಪಾರ ಎಲ್ಲ ಸೂಕ್ತವಲ್ಲ ಎಂದು ಕಿಚಾಯಿಸಿದರು.
ಯುವಕರ ಪ್ರಶ್ನೆಗೆ ಮೊದಲು ನಕ್ಕ ವ್ಯಾಪಾರಿ ತದನಂತರ ನನಗೆ ಕೆಲವು ಜನರನ್ನು ನೋಡಿದರೆ ನಗು ಬರುತ್ತದೆ ಅವರು ಒಂದನ್ನು ಖರೀದಿ ಮಾಡಲು ನಮ್ಮ ಅಂಗಡಿಗೆ ಬರುತ್ತಾರೆ ಆದರೆ ಹಾಕಿರುವ ಬೋರ್ಡ್ ನೋಡಿ $9 ಗಳನ್ನು ನೀಡಿ 3 ಹಣ್ಣುಗಳನ್ನು ಖರೀದಿ ಮಾಡುತ್ತಾರೆ. ನಂತರ ವ್ಯಾಪಾರ ತಿಳಿದಿಲ್ಲ ಎಂದು ನನ್ನನ್ನೇ ಪ್ರಶ್ನಿಸುತ್ತಾರೆ ಈ ಬೋರ್ಡ್ನಲ್ಲಿ $1 ಹೆಚ್ಚಿರುವ ಕಾರ್ಯದಿಂದಾಗಿ ಜನರು ಒಂದೊಂದಾಗಿ 3 ಹಣ್ಣನ್ನು ಖರೀದಿ ಮಾಡಿ ವ್ಯವಹರಿಸುತ್ತಿದ್ದರು ಆದರೆ ಅಲ್ಲಿ ವ್ಯಾಪಾರಿ ಗ್ರಾಹಕರಿಗೆ ಅಗತ್ಯಕ್ಕಿಂತ ಹೆಚ್ಚು ಹೆಣ್ಣನ್ನು ಖರೀದಿ ಮಾಡುವಂತೆ ಮಾಡಿದ್ದರು.