ಆಂಜನೇಯ ಪಂಚಮುಖಿ ರೂಪವನ್ನು ತಾಳಲು ಇದೇ ಕಾರಣ ನೋಡಿ ಇದುವರೆಗೂ ಇದರ ಬಗ್ಗೆ ಯಾರಿಗೂ ಗೊತ್ತಿಲ್ಲ !!

21

ಸ್ನೇಹಿತರೆ, ನಿಮಗೆಲ್ಲರಿಗೂ ತಿಳಿದಿರುವಂತೆ ಹನುಮಂತನನ್ನು ಪೂಜಿಸಿದರೆ ವ್ಯಕ್ತಿಯು ಎಲ್ಲ ಕಷ್ಟಗಳಿಂದ ಮುಕ್ತಿ ಹೊಂದುತ್ತಾನೆ. ಮನೆಯಲ್ಲಿರುವ ಪ್ರತಿಯೊಂದು ಸಮಸ್ಯೆಗಳಿಗೂ ಆಂಜನೇಯನನ್ನು ಪೂಜಿಸಿದರೆ ಸಾಕು, ಶನಿದೇವರ ಕೋಪವನ್ನು ಕೂಡಾ ತಪ್ಪಿಸಲು ಹನುಮಂತನನ್ನು ಸ್ಮರಿಸಿದರೆ ಎಲ್ಲವೂ ನಿವಾರಣೆಯಾಗುತ್ತದೆ ಎಂದು ಹೇಳುತ್ತಾರೆ. ಇಂದು ಹನುಮಂತನ ರೂಪದ ವಿಶೇಷತೆ, ಯಾಕೆ ಪಂಚಮುಖಿ ರೂಪ ತಾಳಿದರು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ರಾಮಾಯಣದ ಯುದ್ಧದ ಸಂದರ್ಭದಲ್ಲಿ ರಾವಣನ ಯುದ್ಧದಲ್ಲಿ ತನ್ನ ಮಗನನ್ನು ಕಳೆದುಕೊಂಡು ಸೋಲು ಹತ್ತಿರ ಬಂದಿದೆ ಎಂದುಕೊಂಡು ತನ್ನ ಸಹೋದರ ಅಹಿರಾವಣ ನನ್ನ ಯುದ್ಧಮಾಡಲು ಕರೆಯುತ್ತಾರೆ.

ಈ ಅಹಿರಾವಣನು ಪಾತಾಳಲೋಕದ ರಾಜನಾಗಿರುತ್ತಾನೆ ರಾವಣನು ಈತನನ್ನು ಕರೆದ ಕೂಡಲೇ ವಿಭೀಷಣನಿಗೆ ಈ ತಿಳಿದು ಕೂಡಲೇ ರಾಮ ಹಾಗೂ ಲಕ್ಷ್ಮಣರನ್ನು ಎಚ್ಚರಿಕೆಯಿಂದ ಇರಿ. ಅಹಿರಾವಣ ಪಾತಾಳ ಲೋಕದ ರಾಜ ಎಂದು ಆತನ ಶಕ್ತಿಯನ್ನು ವಿವರಿಸುತ್ತಾರೆ. ಇದೇ ಸಮಯದಲ್ಲಿ ವಿಭೀಷಣನು ಹನುಮಂತನ ಬಳಿಗೆ ಬಂದು ನೀನು ಅಹಿರಾವಣನನ್ನು ಶ್ರೀರಾಮ ಹಾಗೂ ಲಕ್ಷ್ಮಣರ ಬಲಿ ಬಿಡಬೇಡ ಎಂದು ಹೇಳುತ್ತಾನೆ. ಈ ವಿಷಯ ತಿಳಿದ ಹನುಮಂತನ ಶ್ರೀರಾಮ ಹಾಗೂ ಲಕ್ಷ್ಮಣರನ್ನು ಕಾಯಲು ಆರಂಭಿಸುತ್ತಾನೆ ಅಹಿರಾವಣನು. ತಾಯಿ ಭವಾನಿಯ ಮಹಾನ್ ಭಕ್ತನಾಗಿದ್ದನು ಮಂತ್ರ ತಂತ್ರದ ಬಗ್ಗೆ ಬಹಳ ಜ್ಞಾನವನ್ನು ಹೊಂದಿದ್ದ.

ಕ್ಷಣಮಾತ್ರದಲ್ಲಿ ತನ್ನ ಮಾಯೆಯಿಂದ ಎಂಥವರನ್ನೂ ಕೂಡ ನಿದ್ರೆಗೆ ಜಾರಿಸುತ್ತಿದ್ದ ಇದೇ ರೀತಿ ಯುದ್ಧಕ್ಕೆ ಬಂದು ರಾಮನ ಇಡಿ ಸೈನ್ಯವನ್ನು ನಿದ್ರೆಗೆ ಜಾರಿಸಿ ತದನಂತರ ರಾಮ ಹಾಗೂ ಲಕ್ಷ್ಮಣರನ್ನು ಪಾತಾಳಕ್ಕೆ ಕರೆದುಕೊಂಡು ಹೋಗಲು ಪ್ರಯತ್ನಪಟ್ಟನು. ಆದರೆ ಹನುಮಂತ ಇದ್ದ ಕಾರಣ ಅಹಿರಾವಣನ ತಂತ್ರಗಳು ಫಲಕಾರಿಯಾಗಲಿಲ್ಲ ಇದನ್ನು ಅರಿತುಕೊಂಡ ಅಹಿರಾವಣನು ವಿಭೀಷಣನ ವೇಷಧರಿಸಿ ರಾಮ ಹಾಗೂ ಲಕ್ಷ್ಮಣರು ವಾಸಿಸುತ್ತಿರುವ ದೇಶವನ್ನು ಪ್ರವೇಶಿಸಿದನು. ಹನುಮಂತನು ಕೂಡ ಅದು ವಿಭೀಷಣನ ಇರಬೇಕು ಎಂದುಕೊಂಡು ಹೋಗಲು ಅನುವು ಮಾಡಿಕೊಟ್ಟನು. ಕ್ಷಣಮಾತ್ರದಲ್ಲಿ ರಾಮ ಹಾಗೂ ಲಕ್ಷ್ಮಣರನ್ನು ಎತ್ತುಕೊಂಡು ಅಹಿರಾವಣ ಪಾತಾಳಲೋಕ ಸೇರಿಕೊಂಡನು ಸ್ವಲ್ಪ ಸಮಯದ ನಂತರ ವಿಭೀಷಣನು ಎದ್ದು ಇದು ಅಹಿರಾವಣನ ಕೆಲಸ ನೀನು ರಾಮ ಮತ್ತು ಲಕ್ಷ್ಮಣರನ್ನು ಕೂಡಲೇ ರಕ್ಷಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.

ಕೂಡಲೇ ಪಾತಾಳಲೋಕಕ್ಕೆ ಹೊರಟ ಹನುಮಂತನು ರಾವಣನ ಸೈನ್ಯವನ್ನು ಹನುಮಂತ ಸೋಲಿಸಿ ರಾಮ ಲಕ್ಷ್ಮಣರನ್ನು ಕರೆದುಕೊಂಡು ಬರಲು ಹೊರಟನು. ಆದರೆ ಅಹಿರಾವಣನನ್ನು ಸೋಲಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ ಯಾಕೆಂದರೆ ಈತನು ತಾಯಿ ಭವಾನಿ ದೇವಿಯ ಮಹಾನ್ ಭಕ್ತನಾಗಿದ್ದನು. ಅಹಿರಾವಣನನ್ನು ಸೋಲಿಸಬೇಕು ಎಂದರೆ ತಾಯಿ ಭವಾನಿ ದೇವಿಗಾಗಿ ಅಹಿರಾವಣ 5 ದೀಪಗಳನ್ನು ನಂದಿಸಬೇಕಿತ್ತು. ಐದು ದೀಪಗಳು ಐದು ದಿಕ್ಕುಗಳಿಗೆ ಮುಖ ಮಾಡಿದವು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಆಕಾಶದ ಕಡೆಗೆ ದೀಪಗಳು ಮುಖ ಮಾಡಿದ್ದನ್ನು ಕಂಡ ಹನುಮಂತ ದೀಪಗಳನ್ನೆಲ್ಲ ನಂದಿಸುವುದು ಹೇಗೆ ಎಂಬ ಆಲೋಚನೆ ಮಾಡಿ ನಂತರ ಪಂಚಮುಖಿ ಆಂಜನೇಯ ರೂಪ ಪಡೆದುಕೊಂಡನು…