ಶ್ರೀಮಂತಿಕೆ ಮತ್ತು ನಟನೆ ತೊರೆದು ವ್ಯವಸಾಯ ಮಾಡುತ್ತಿರುವ ಟಾಪ್ ನಟಿಯರು ಇವರೇ ನೋಡಿ ! ಗ್ರೇಟ್ ಅಲ್ವಾ ??

45

ಸ್ನೇಹಿತರೆ, ಯಾವುದೇ ಕೆಲಸಗಳು ಕೈಬಿಟ್ಟರು ಕೊನೆಗೆ ಕೈಹಿಡಿಯುವುದು ವ್ಯವಸಾಯ ಅಷ್ಟೇ ಅಲ್ಲದೆ ಪ್ರಪಂಚ ನಡೆಯುತ್ತಿರುವುದು ವ್ಯವಸಾಯದಿಂದ. ನೀವು ಯಾವುದೇ ಕೆಲಸ ಮಾಡಿದರು ಈ ವ್ಯವಸಾಯದಲ್ಲಿ ಸಿಗುವಷ್ಟು ಸಂತೃಪ್ತಿಯನ್ನು ಇನ್ಯಾವ ಕೆಲಸದಲ್ಲಿ ಸಿಗಲು ಸಾಧ್ಯವಿಲ್ಲ. ಸಿನಿಮಾರಂಗದಲ್ಲಿ ಕೆಲವರಿಗೆ ಯಾವ ಅವಕಾಶ ಸಿಗದಿದ್ದರೆ, ಇನ್ನೂ ಕೆಲವರಿಗೆ ಸಕ್ಸಸ್ ಕಾಣಲಿಲ್ಲವೆಂದರೆ ಡಿಪ್ರೆಶನ್ ಗೆ ಹೋಗುತ್ತಾರೆ ಅಥವಾ ಇನ್ನೇನೋ ಮಾಡಿಕೊಳ್ಳಲು ನಿರ್ಧಾರ ಮಾಡುತ್ತಾರೆ. ಕೊನೆಗೆ ಜೀವನವೇ ಮುಗಿದು ಹೋಯಿತು ಅನ್ನುವಷ್ಟರ ಮಟ್ಟಿಗೆ ಯೋಚನೆ ಮಾಡುತ್ತಾರೆ. ಆದರೆ ಇನ್ನು ಕೆಲವರು ದೃಢ ಮನಸ್ಸನ್ನು ಮಾಡಿ ವ್ಯವಸಾಯಕ್ಕೆ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ಅದೇ ರೀತಿ ತಮ್ಮ ಒಲವನ್ನು ವ್ಯವಸಾಯದ ತೋರಿಸಿ ಮಾಡುತ್ತಿರುವ ನಟಿಯರನ್ನು ನೋಡಿ ಎಷ್ಟು ಜನರು ಕಲಿಯಬೇಕು. ಹೌದು ಸ್ನೇಹಿತರೆ ನಾವು ತಿಳಿಸಿಕೊಡುವ ಈ ನಟಿಯರು ತಮ್ಮ ಶ್ರೀಮಂತಿಕೆಯನ್ನು ತೋರೆದು ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ ಬಾಲಿವುಡ್ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ನಟಿ ಯಾಮಿ ಗೌತಮಿ ಲಾಕ್ಡೌನ್ ಸಮಯದಲ್ಲಿ ಊರಿಗೆ ಹೋದರೆ ತಮಗಿರುವ ಜಮೀನಿನಲ್ಲಿ ಆರ್ಗಾನಿಕ್ ಫಾರ್ಮಿಂಗ್ ಮಾಡಲು ಮುಂದಾಗಿದ್ದು ಇದರ ಜೊತೆಗೆ ರಿಸರ್ಚ್ ಮಾಡಿ ವ್ಯವಸ್ಥಿತವಾಗಿ ವ್ಯವಸಾಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಈಗಲೂ ಸಹ ವ್ಯವಸಾಯವನ್ನು ನಟನೆಯ ಜೊತೆಗೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಒಂದಾನೊಂದು ಕಾಲದಲ್ಲಿ ಕನ್ನಡಿಗರ ಹೃದಯವನ್ನು ಗೆದ್ದಾ ಜೂಲಿ ಚಾವ್ಲಾ ಬಾಲಿವುಡ್ನಲ್ಲಿ ಹತ್ತಾರು ವರ್ಷ ಮಿಂಚಿದ ಈ ನಟಿ ಈಗ ವ್ಯವಸಾಯದ ಕಡೆಗೆ ವಾಲಿದ್ದಾರೆ. ಈಗಾಗಲೇ ಜಮೀನನ್ನು ಖರೀದಿ ಮಾಡಿ ಅದರಲ್ಲಿ ವಿಧವಿಧ ಬೆಳೆಗಳನ್ನು ಬೆಳೆಯುತ್ತಿದ್ದೂ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹಲವು ಭಾಷೆಗಳಲ್ಲಿ ಛಾಪು ಮೂಡಿಸಿದ ಸಂಬಂಧ ಕುಲಕರ್ಣಿ ನಟನೆಗೆ ಗುಡ್ ಬೈ ಹೇಳಿ ಈಗ ಸಂಪೂರ್ಣವಾಗಿ ವ್ಯವಸಾಯದಲ್ಲಿ ತಮ್ಮನ್ನು ತಾವು ಅಪಾರವಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮ ಹಳ್ಳಿಯಲ್ಲಿರುವ ಭೂಮಿಯಲ್ಲಿ ವ್ಯವಸಾಯ ಮಾಡುವ ಮೂಲಕ ಇತರರಿಗೂ ಕೂಡ ಕೆಲಸವನ್ನು ಒದಗಿಸುತ್ತಿದ್ದಾರೆ.

ಕನ್ನಡದ ಹತ್ತಾರು ಚಿತ್ರಗಳನ್ನು ನಟಿಸಿದಂತಹ ಖ್ಯಾತನಟ ಅರುಣ್ ಪಾಂಡ್ಯನ್ ರವರ ಮಗಳು ಕೀರ್ತಿ ಪಾಂಡ್ಯನ್ ನಟಿಯಾಗಿ ಗುರುತಿಸಿಕೊಂಡಿದ್ದು ಈಗ ತನ್ನ ತಂದೆಯ ಜೊತೆಗೆ ವ್ಯವಸಾಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ನಾನು ಯಾರಿಗಿಂತ ಕಮ್ಮಿಯಿಲ್ಲ ಎಂದು ಟ್ರ್ಯಾಕ್ಟರ್ ಓಡಿಸುವುದರಲ್ಲಿಯೂ ಸಹ ಕೀರ್ತಿ ಅವರು ಯಶಸ್ವಿಯಾಗಿದ್ದಾರೆ. ತಮ್ಮ ಮೊದಲ ಚಿತ್ರದಲ್ಲಿ ಸಕ್ಸಸ್ ಕಂಡ ಮಾಳವಿಕಾ ಅವರು ನಂತರ ವ್ಯವಸಾಯದ ಕಡೆಗೆ ಹೆಚ್ಚು ಗಮನ ಹರಿಸಿ ತಮ್ಮ ಹುಟ್ಟೂರಿನಲ್ಲಿ ದೊಡ್ಡಮಟ್ಟದ ವ್ಯವಸಾಯ ಮಾಡುತ್ತಾ ನೆಮ್ಮದಿ ಜೀವನ ನಡೆಸುತ್ತಿದ್ದಾರೆ.