ದಂಡ ಕಟ್ಟಲು ಈಕೆ ದುಡ್ಡಿಲ್ಲದೇ ಮಾಂಗಲ್ಯಸರ ಬಿಚ್ಚಿ ಕೊಟ್ಟರು ನಂತರ ನಡೆದದ್ದು ಮಾತ್ರ ಊಹೆಗೆ ನಿಲುಕದ್ದು !!
ಸ್ನೇಹಿತರೆ, ಟ್ರಾಫಿಕ್ ಪೊಲೀಸ್ಗೆ ಫೈನ್ ಕಟ್ಟಲು ಗಂಡ ಕಟ್ಟಿದ ತಾಳಿಯನ್ನು ತೆಗೆದು ಕೊಟ್ಟಂತಹ ಮಹಿಳೆ ಈಕೆ. ಹೌದು ತನ್ನ ಮಂಗಳಸೂತ್ರವನ್ನು ಮಾರಿ ನಿಮ್ಮ ಫೈನ್ ಕಟ್ಟಿಕೊಳ್ಳಿ ಎಂದು ಹೇಳಿದ ಮಹಿಳೆಯೊಬ್ಬರ ವಿಚಿತ್ರ ಘಟನೆಯ ಬಗ್ಗೆ ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಈ ವಿಚಿತ್ರ ಘಟನೆ ನಡೆದಿದ್ದು ಗುಜರಾತ್ ಅಹಮದಾಬಾದ್ನ ಸಿಟಿಯೊಂದರಲ್ಲಿ ಇಲ್ಲೋಂದು ಮಹಿಳೆ ತನ್ನ ಮಂಗಳಸೂತ್ರವನ್ನು ಟ್ರಾಫಿಕ್ ಪೊಲೀಸರಿಗೆ ನೀಡಿ ನಿಮ್ಮ ಕಟ್ಟಿಕೊಳ್ಳಿ ಎಂದು ಕೂಗಾಡಿದ್ದಾರೆ. ಪೊಲೀಸ್ ಮತ್ತು ಮಹಿಳೆಯ ನಡುವೆ ನಡೆದ ಈ ವಿಚಿತ್ರ ಘಟನೆ ಬಾರಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ.
ಒಂದು ಗುಜರಾತಿನ ವೆಬ್ಸೈಟ್ನ ಪ್ರಕಾರ ಈ ಘಟನೆಯ ಅಹಮದಾಬಾದ್ನ ಮುಖ್ಯ ರಸ್ತೆಯಲ್ಲಿ ನಡೆದಿದೆ. ಇಲ್ಲಿ ನಡೆದದ್ದು ಏನೆಂದರೆ ಈ ರಸ್ತೆಯಲ್ಲಿ ಟ್ರಾಫಿಕ್ ಪೋಲಿಸ್ ನವರು ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರನ್ನು ಹಿಡಿದು ದಂಡ ವಸೂಲಿ ಮಾಡುತ್ತಿದ್ದರು. ಇದೇ ರಸ್ತೆಯಲ್ಲಿ ಗಂಡ ಹೆಂಡತಿ ಇಬ್ಬರೂ ಕೂಡ ತಲೆಗೆ ಹೆಲ್ಮೆಟ್ ಹಾಕದೆ ಬಂದಿದ್ದಾರೆ. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸ್ ಅವರ ವಾಹನವನ್ನು ತೊಡೆದು ಫೈನ್ ಹಾಕಿದ್ದಾರೆ. ಆ ದಂಪತಿಗಳುಳಿಗೆ ದುರಾದೃಷ್ಟವಶಾತ್ ಅಂದೇ ಮನೆಯಲ್ಲಿ ಪರ್ಸ್ ಅನ್ನು ಬಿಟ್ಟು ಬಂದಿದ್ದಾರೆ. ಈ ದಂಪತಿಗಳು ಮನೆಯಲ್ಲಿ ಪರ್ಸ್ ಬಿಟ್ಟಿದ್ದೇವೆ ನಮ್ಮ ಹತ್ತಿರ ಒಂದು ರೂಪಾಯಿ ಹಣವಿಲ್ಲ ದಯಮಾಡಿ ಈಗ ಬಿಡಿ ನಾವು ಮನೆಗೆ ಹೋಗಿ ಹಣವನ್ನು ತಂದು ಫೈನ್ ಕಟ್ಟುತ್ತೇವೆ ಎಂದು ಎಷ್ಟೇ ಕೇಳಿಕೊಂಡರು ಇವರನ್ನು ಒಂದು ಅಡಿ ಆಕಡೆ ಈಕಡೆ ಅಲುಗಾಡಲು ಸಹ ಬಿಡುತ್ತಿರಲಿಲ್ಲ.
ಪೊಲೀಸ್ ಮತ್ತು ದಂಪತಿಗಳ ನಡುವೆ ಮಾತಿನ ಚಕಮಕಿ ಬೆಳೆಯಿತು ಕೊನೆಯಲ್ಲಿ ಮಹಿಳೆ ತನ್ನ ತಾಳಿ ಬಿಚ್ಚಿ ತಗೊಳ್ಳಿ ತಾಳಿಯನ್ನು ಮಾರಿಕೊಂಡು ನಿಮ್ಮ ಫೈನ್ ಕಟ್ಟಿಕೊಳ್ಳಿ ಎಂದು ಕಣ್ಣೀರು ಹಾಕಿದ್ದಾರೆ. ಈ ರೀತಿ ಮಹಿಳೆ ತನ್ನ ತಾಳಿಯನ್ನು ಬಿಚ್ಚಿ ಗಾಡಿ ಫೈನ್ ಕಟ್ಟುವ ದೃಶ್ಯಗಳನ್ನು ತುಂಬಾ ವೈರಲ್ ಆಗಿದ್ದು ಕೊನೆಗೆ ಪಬ್ಲಿಕ್ನವರು ಸೇರಿ ಇಬ್ಬರನ್ನು ಸಮಾಧಾನಪಡಿಸಿ ಮಹಿಳೆಯ ತಾಳಿಯನ್ನು ವಾಪಸ್ ಬಿಡಿಸಿ ಕೊಟ್ಟು ಜನರೆಲ್ಲರೂ ಸೇರಿ ಅವರ ಕೈಕಟ್ಟಿ ಕಳುಹಿಸಿದ್ದಾರೆ.